Saturday 10th, May 2025
canara news

ರೋಟರಿ ಜಿಲ್ಲಾ ಗವರ್ನರ್ ಆಗಿ ಎಂ.ರಂಗನಾಥ ಭಟ್ ಪದಗ್ರಹಣ

Published On : 05 Jul 2020   |  Reported By : Rons Bantwal


ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದೇ ಸಮಾಜಸೇವೆ : ರಂಜನ್ ಕಿಣಿ

ಮುಂಬಯಿ (ಮಂಗಳೂರು): ದಕ್ಷಿಣ ಕನ್ನಡ, ಮಡಿಕೇರಿ, ಮೈಸೂರು, ಚಾಮರಾಜ ನಗರ ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರ ನೂತನ ಜಿಲ್ಲಾ ಗವರ್ನರ್ ಆಗಿ ಎಂ.ರಂಗನಾಥ ಭಟ್ ಅಧಿಕಾರ ಸ್ವೀಕರಿಸಿದ್ದಾರೆ. ಸರಳ ಸಮಾರಂಭವೊಂದರಲ್ಲಿ ನಿರ್ಗಮನ ಗವರ್ನರ್ ಜೋಸೆಫ್ ಮ್ಯಾಥ್ಯೂ ಅವರಿಂದ ರಂಗನಾಥ ಭಟ್ ಅಧಿಕಾರ ಸ್ವೀಕರಿಸಿದರು. ಏಕ್ ಚಮಚ್ ಕಮ್, ಚಾರ್ ಕದಮ್ ಆಗೇ ಎನ್ನುವ ವಿಶಿಷ್ಠ ಯೋಜನೆಯಡಿ ಆರೋಗ್ಯ ಕಾಳಜಿಯ ಕಾರ್ಯಕ್ರಮಗಳು, ವಾಶ್ ಇನ್ ಸ್ಕೂಲ್ ಕಾರ್ಯಕ್ರಮದಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಇತರೆ ಸೌಲಭ್ಯಗಳು, ಪ್ರಥಮ ಚಿಕಿತ್ಸಾ ತರಬೇತಿ, ಅಲ್ಲದೇ ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದ ಅವರು ರೋಟರಿಯು ಪಲ್ಸ್ ಪೆÇೀಲಿಯೋ, ಆರೋಗ್ಯ, ಶಿಕ್ಷಣ, ನೀರು, ಶುಚಿತ್ವ ಮತ್ತು ಪರಿಸರಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ನಡೆಸಲಿದೆ ಎಂದವರು ಹೇಳಿದರು.

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದ ರೋಟರಿ ಜಿಲ್ಲೆ 6540ರ ಮಾಜಿ ಗವರ್ನರ್ ಯುಎಎಸ್‍ಎ ಇಂಡಿಯಾನಾದ ರಂಜನ್ ಕಿಣಿ ಮಾತನಾಡಿ ರೋಟರಿಯ ಮೂಲಕ ಸಮಾಜದಲ್ಲಿ ಬೆಳವಣಿಗೆ ಮತ್ತು ಬದಲಾವಣೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು. ಸಂಪನ್ಮೂಲ, ಸಾಮಥ್ರ್ಯದ ಜತೆಗೆ ಮಾನವತೆಯ ಸೇವೆಗೆ ಬದ್ದತೆಯೂ ಅಗತ್ಯವಿದೆ ಎಂದವರು ಹೇಳಿದರು. ರೋಟರಿ ಮಾಜಿ ಗವರ್ನರ್ ಆರ್.ಗುರು, ಡಾ| ನಾಗಾರ್ಜುನ ಸಹಿತ ಮಾಜಿ ಗವರ್ನರ್‍ಗಳು, ನಿಯೋಜಿತ ಗವರ್ನರ್‍ಗಳು ಶುಭ ಹಾರೈಸಿದರು. ರಜನಿ ರಂಗನಾಥ ಭಟ್ ಉಪಸ್ಥಿತರಿದ್ದು, ಮಂಗಳೂರು ಮೆಟ್ರೋ ರೋಟರಿ ಅಧ್ಯಕ್ಷೆ ಆಗಿ ಅಶ್ವಿನಿ ಕಾಮತ್, ಕಾರ್ಯದರ್ಶಿ ಆಗಿ ಸ್ವಪ್ನಾ ಕಾಮತ್, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಆಗಿ ಅಭಿಜಿತ್ ಅಧಿಕಾರ ಸ್ವೀಕರಿಸಿದರು. ಪ್ರಧಾನ ದಾನಿಗಳಾದ ರತ್ನಾಕರ ಶೆಣೈ, ಗಣೇಶ್ ಕಾಮತ್ ಅವರನ್ನು ಗೌರವಿಸಲಾಯಿತು.

ಆನ್‍ಲೈನ್ ವೇದಿಕೆಯ ಮೂಲಕ ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆಯ 82 ಕ್ಲಬ್‍ಗಳ ಪದಾಧಿಕಾರಿಗಳೂ ಸೇರಿದಂತೆ 3500 ಸದಸ್ಯರು, ಆಹ್ವಾನಿತರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ರೋಟರಿ ಜಿಲ್ಲಾ ಡೈರೆಕ್ಟರಿ ಸಂಪರ್ಕ ಹಾಗೂ ಗವರ್ನರ್ ಮಾಸಿಕ ಪತ್ರ `ಒಪೋರ್ಚುನಿಟೀಸ್' ಅನಾವರಣ ಗೊಳಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಿಕ್ರಂ ದತ್ತಾ ಸ್ವಾಗತಿಸಿದರು. ಪ್ರೀತಂ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಕಾಮತ್ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here