Friday 14th, August 2020
canara news

ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಟ್ಟ ಗುರುವಂದನಾ ಕಾರ್ಯಕ್ರಮ

Published On : 05 Jul 2020   |  Reported By : Rons Bantwal


ಗುರುಗಳ ಅನುಗ್ರಹ ಸದಾ ನಮ್ಮೊಂದಿಗೆ ಇರಲಿ- ಪೇಜಾವರ ವಿಶ್ವಪ್ರಸನ್ನತೀರ್ಥ

ಮುಂಬಯಿ (ಆರ್‍ಬಿಐ), ಜು.05: ನಮ್ಮಲ್ಲಿ ಎಷ್ಟೇ ಸಂಪತ್ತು ಸವಲತ್ತುಇದ್ದರೂ ಗುರುಗಳ ಅನುಗ್ರಹ ಹಾಗೂ ದೇವರ ಅನುಗ್ರಹ ಇಲ್ಲದಿದ್ದಲ್ಲಿ ಅದನ್ನು ಅನುಭವಿಸುವುದು ಅಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜುಪ್ರ್ರಾಸಾದ ವಾದಿರಾಜ ಮಂಟಪದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣದಲ್ಲಿ ನುಡಿದರು.

ತಮ್ಮ ಗುರುಗಳಾದ ಹರಿಪಾದಗೈದಿರುವ ಪೂಜ್ಯ ಶ್ರೀ ವಿಶ್ವೇಶತೀರ್ಥರು ತಮ್ಮ ಹೆಸರಿಗೆ ಅನ್ವರ್ಥ ಎಂಬಂತೆ ಮಾತಲ್ಲೂ ಕೃತಿಯಲ್ಲೂ ನಡೆದು ತೋರಿಸಿದವರು. ತುಂಡು ಬಟ್ಟೆಯುಟ್ಟು ದೇಶವ್ಯಾಪಿ ಸಂಚಾರ ನಡೆಸಿ ಸರ್ವಧರ್ಮೀಯರ ಪ್ರೀತಿ ಪಾತ್ರರಾಗಿದ್ದರು. ಪೂಜ್ಯರ ಅನುಗ್ರಹ ಸದಾ ನಮ್ಮೊಂದಿಗೆ ಇರಲೆಂದು ಪ್ರಾಥಿರ್üಸಿದರು.

ಹರಿಪಾದಗೈದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರ ಸಂಸ್ಮರಣೆಗೈದ ಹಿರಿಯ ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಪೂಜ್ಯ ವಿಶ್ವೇಶತೀರ್ಥರ ಜೀವನ ಶ್ರದ್ಧೆ, ಮುಗ್ದ ಮಗುವಿನ ಮನಸ್ಸಿನಿಂದ ಭಾರತೀಯ ಸಂಪ್ರದಾಯದಲ್ಲಿ ಅವರು ಮಾಡಿರುವ ಬಹುದೊಡ್ಡ ಕ್ರಾಂತಿಯನ್ನು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಅವರು ನೀಲಾವರದ ಗೋಶಾಲೆಯಲ್ಲಿ ಚಾತುರ್ಮಾಸ ನಿರತರಾಗುವ ಶ್ರೀ ವಿಶ್ವಪ್ರಸನ್ನತೀರ್ಥರ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ಗುರುಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷಿ ್ಮೀನಾರಾಯಣಆಸ್ರಣ್ಣ, ವೇ| ಮೂ| ಗಣಪತಿ ಆಚಾರ್ಯ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪೆÇ್ರ| ಎಂ.ಬಿ.ಪುರಾಣಿಕ್, ಜಿ. ಸೀತಾರಾಮ ಆಚಾರ್ಯ, ಲಕ್ಷ್ಮೀದಾಸ್, ಸುರೇಶ್ ಬಾರಿತ್ತಾಯ, ಪ್ರಭಾಕರ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.

 

 

 
More News

*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ|  ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ| ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*

Comment Here