Friday 4th, July 2025
canara news

ಡಾ| ಪಿ.ಎಸ್‍ಶಂಕರ್ : ಕೋವಿಡ್-19 ಆಕಾಶವಾಣಿ ಜಾಗೃತಿ ಸಂದರ್ಶನ

Published On : 05 Jul 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಜು.05: ಕಲಬುರಗಿ ಆಕಾಶವಾಣಿ ಕೇಂದ್ರವು ಕಳೆದ ಶನಿವಾರ ಹಿರಿಯ ವೈದ್ಯರಾದ ನಾಡೋಜ ಡಾ| ಪಿ.ಎಸ್.ಶಂಕರ್ ಅವರೊಂದಿಗಿನ ಸಂದರ್ಶನ ಪ್ರಸಾರ ನಡೆಸಿತು. ಕರೋನಾ ಸಂದರ್ಭದಲ್ಲಿ ಸಾರ್ವಜನಿಕರು ವಹಿಸಬೇಕಾದ ಎಚ್ಚರ ಹಾಗೂ ಇತ್ತೀಚಿನ ಸಂಶೋಧನಾ ವರದಿ ನ್ಯೂಜಿಲೇಂಡ್, ವಿಯಟ್ನಾಂ ಮಾದರಿ, ಶವ ಸಂಸ್ಕಾರ ವಿಧಾನ, ಪಾಸ್ಮಾ ಥೆರಪಿ, ಲಾಕ್‍ಡೌನ್ ಸಂದರ್ಭದ ಆರೋಗ್ಯ ಪರಿಸ್ಥಿತಿ ಕುರಿತಾಗಿ ಅವರು ಬೆಳಕು ಚೆಲ್ಲಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ.

ಬಾನುಲಿ `ಸಸ್ಯ ಸಂಜೀವಿನಿ'ಯಲ್ಲಿ ಪುಟಾಣಿಗಳು
ಕಲಬುರಗಿ ಆಕಾಶವಾಣಿ ಕೇಂದ್ರದ ಬಾಲಲೋಕ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವನಮಹೋತ್ಸವ ಸಪ್ತಾಹದಂಗವಾಗಿ `ಸಸ್ಯ ಸಂಜೀವಿನಿ' ಎಂಬ ವಿಶೇಷ ಮಾತುಕತೆಯಲ್ಲಿ ಪುಟಾಣಿಗಳು ಪಾಲ್ಗೊಂಡರು. ಈ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಬಿತ್ತರಿಸಲ್ಪಟ್ಟಿತು.

ಫೋನ್ ಆಧಾರಿತ ಕಾರ್ಯಕ್ರಮದಲ್ಲಿ ಆಳಂದದ ತ್ರಿವೇಣಿ, ಕಲಬುರಗಿಯ ಸಂಪದ ಆರ್.ರೇವತಗಾಂವ, ಸೇಡಂ ತಾಲೂಕಿನ ಕಾಚೂರಿನ ಬಸವಪ್ರಸಾದ್, ಇಂಡಿ ತಾಲೂಕಿನ ಚಣೆಗಾಂವದ ಶ್ರೀನಿಧಿ, ಕಲಬುರಗಿಯ ಸಮರ್ಥ್ , ಸೃಜನ್ ಹಾಗೂ ವೈಷ್ಣವಿ ಭಾಗವಹಿಸಲಿದ್ದಾರೆ. ವನಮಹೊತ್ಸವದ ಮಹತ್ವ, ಗಿಡಮರ ನೆಡುವ ಹವ್ಯಾಸ, ಪರಿಸರ ಸಂರಕ್ಷಣೆ, ಆರೋಗ್ಯಯುತ ಜೀವನ ಕುರಿತು ಪುಟಾಣಿಗಳು ತಮ್ಮ ಮುಕ್ತ ಅನಿಸಿಕೆ ಹಂಚಿಕೊಂಡ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಡಾ| ಸದಾನಂದ ಪೆರ್ಲ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ಮೊಬೈಲ್ ಆ್ಯಪ್ ಟಿeತಿsoಟಿಚಿiಡಿ ಹಾಗೂ ಎ ಎಂ 1071 ಕಿಲೋ ಹಟ್ರ್ಸ್ ಅಥವಾ 271 ಮೀಟರ್ ತರಂಗಾಂತರಗಳಲ್ಲೂ ಪ್ರಸಾರರ ಗೊಂಡೀತು ಎಂದು ನಿಲಯ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here