Friday 14th, August 2020
canara news

ಶರದ್ ಪವಾರ್-ಲಕ್ಷ ್ಮಣ ಪೂಜಾರಿ ಗುರುಭ್ಯೋ ನಮಃ

Published On : 05 Jul 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಜು.05: ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಎನ್‍ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಇವರು ತನ್ನ ರಾಜಕೀಯ ಗುರು ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‍ಸಿಪಿ) ವರಿಷ್ಠ ನಾಯಕ ಶರದ್ ಪವಾರ್ ಅವರನ್ನು ಭೇಟಿಗೈದು ಗುರುವಂದನೆಗೈದರು.

ದಕ್ಷಿಣ ಮುಂಬಯಿ ಇಲ್ಲಿನ ಎನ್‍ಸಿಪಿ ಪ್ರಧಾನ ಕಚೇರಿಯಲ್ಲಿ ಪವಾರ್ ಅವರನ್ನು ಗುರುಪೂರ್ಣಿಮೆ ಶುಭಾವಸರದಲ್ಲಿ ಭೇಟಿಗೈದು ಜ್ಞಾನ ವಿವೇಕ ಆತ್ಮವಿಶ್ವಾಸ ವ್ಯವಹಾರ ಮನೋಬಲಕ್ಕೆ ಪ್ರೇರಣಾಶಕ್ತಿಯನ್ನಿತ್ತು ಸಲಹಿ ಪಕ್ಷದ ನಾನಾ ಹುದ್ದೆಗಳನ್ನಿತ್ತು ಪೆÇ್ರೀತ್ಸಾಹಿಸಿದ ತನ್ನ ರಾಜಕೀಯ ಗುರುವರೇಣ್ಯ ಪವಾರ್‍ಗೆ ತಸ್ಮೈ ಶ್ರೀ ಗುರು ವಂದಿತರೆಣಿಸಿ ಅಭಿವಂದಿಸಿ ಶುಭಾರೈಸಿದರು.

ಕೆಲವು ವರ್ಷಗಳ ಹಿಂದೆ ಕೊಡಮಾಡಿದ್ದ ಹಲಸಿನ ಮರದ ಶವಪಲ್ಲಕ್ಕಿಯು ಇದೀಗ ಹಳೆಯದಾಗಿದ್ದ ಕಾರಣ ಇತ್ತೀಚೆಗೆ ಗ್ರಾಮಸ್ಥರ ವಿನಂತಿಯ ಮೇರೆಗೆ ತಮ್ಮ ಹಿರಿಯರಾದ ವೆಂಕು ಬಾಲು ಪೂಜಾರಿ ಚಿತ್ರಾಪು ಇವರ ಸ್ಮರಣಾರ್ಥವಾಗಿ ಸ್ಟಿಲ್ ಶವಪಲ್ಲಕ್ಕಿ ಕೊಡಮಾಡಿದ್ದು ಕಳೆದ ಭಾನುವಾರ ಲಕ್ಷ್ಮಣ ಪೂಜಾರಿ ಕುಟುಂಬಸ್ಥÀರು ಇದನ್ನು ಸ್ಮಶನಭೂಮಿಗೆ ಸಮರ್ಪಿಸಿದರು. ಚಿತ್ರಾಪು ಬಿಲ್ಲವ ಸಂಘ ಮುಂಬಯಿ ಸಂಚಾಲಿತ ಶ್ರೀ ವಿರೋಭ ಬಾಲಲೀಲಾ ಭಜನಾ ಮಂದಿರ ಚಿತ್ರಾಪು ಇದರ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸ್ಟೀಲ್ ಶವಪಲ್ಲಕ್ಕಿ ಬರಮಾಡಿ ಕೊಂಡÀು ಪೂಜಾರಿ ಪರಿವಾರದ ಸೇವೆಯನ್ನು ಸ್ಮರಿಸಿದರು.

ಜಾತಿ ಮತ ಬೇಧವಿಲ್ಲದೆ ಚಿತ್ರಾಪು ಪರಿಸರದಲ್ಲಿ ಮೃತ್ಯುವಶರಾದ ಪಾಥಿರ್üೀವ ಶರೀರಗಳನ್ನು ರವಾನಿಸಿ ಶವ ಸಂಸ್ಕಾರಕ್ಕೆ ಅನುಕೂಲಕರವಾಗುವಲ್ಲಿ ಶವಪಲ್ಲಕ್ಕಿ ಉಪಯೋಗಿಸಲಾಗುವುದು. ಭಜನಾ ಮಂಡಳಿಯು ಇದರ ವ್ಯವಸ್ಥೆ ಮತ್ತು ಜವಾಬ್ದಾರಿ ವಹಿಸಲಿದ್ದಾರೆ ಎಂದು ಲಕ್ಷ್ಮಣ ಸಿ.ಪೂಜಾರಿ ತಿಳಿಸಿದ್ದಾರೆ.

 
More News

*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ|  ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ| ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*

Comment Here