Saturday 5th, July 2025
canara news

ಕಾಸರಗೋಡು ಪೆರ್ಲದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ

Published On : 04 Jul 2020   |  Reported By : Rons Bantwal


ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರಿಗೆ ಸನ್ಮಾನ

ಮುಂಬಯಿ (ಬದಿಯಡ್ಕ), ಜು.01: ಕಾಸರಗೋಡು ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ಬುಧವಾರ ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಪರಮೇಶ್ವರ ನಾಯ್ಕ್ ಬಾಳೆಗುಳಿ, ಪುರುಷೋತ್ತಮ ಭಟ್ ಕೆ ಉಪಸ್ಥಿತರಿದ್ದು ಗೌರವಿಸಿದರು.

ಈ ಸಂದರ್ಭ ಶುಭಹಾರೈಸಿ ಮಾತನಾಡಿದ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು, ಕನ್ನಡ ಪತ್ರಿಕಾ ಕ್ಷೇತ್ರ ನಡೆದು ಬಂದ ಸುಧೀರ್ಘ ಕಾಲದ ಏಳು-ಬೀಳುಗಳು ಅಪೂರ್ವತೆಗಳಿಂದ ಒಡಗೂಡಿ ವಿಶಿಷ್ಟವಾದುದು. ಇಂದಿನ ನೂತನ ತಂತ್ರಜ್ಞಾನಗಳಿಲ್ಲದ ಕಾಲಘಟ್ಟಗಳನ್ನು ದಾಟಿ ನಿಶ್ಪಕ್ಷಪಾತ, ನೇರ ಸಾಮಾಜಿಕ ಕಾಳಜಿಯ ಮನೋಸ್ಥಿತಿಗಳು ಕನ್ನಡ ಪತ್ರಿಕಾಲೋಕವನ್ನು ಸೃಜನಶೀಲವಾಗಿ ಬೆಳೆಸಿಕೊಟ್ಟಿದೆ. ಹೊಸ ತಲೆಮಾರು ಇವನ್ನು ಅನುಸರಿಸುವ ಅಗತ್ಯವಿದೆ ಎಂದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here