ಪ್ರಕಾಶ್ ಪಾಂಡೇಶ್ವರ (ಮಂಗಳೂರು) ಕಾರ್ಯದರ್ಶಿ ಆಗಿ ಆಯ್ಕೆ
ಮುಂಬಯಿ (ಮಂಗಳೂರು), ಜು.11: ಕರ್ನಾಟಕ ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಎಲ್ಲಾ ಪತ್ರಿಕೆಗಳು ಸೇರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹೊಸದಾಗಿ ಸಂಘ ರಚನೆಗೊಂಡಿದ್ದು, ಸದರಿ ಸಂಘಕ್ಕೆ ರಾಜ್ಯ ಕಾರ್ಯದರ್ಶಿ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ಜಯಕಿರಣ ಪತ್ರಿಕೆಯ ಪ್ರಕಾಶಕ ಪ್ರಕಾಶ್ ಪಾಂಡೇಶ್ವರ್ ಆಯ್ಕೆ ಗೊಂಡಿದ್ದಾರೆ.
ಸಂಪಾದಕರ ರಾಜ್ಯ ಸಂಘಕ್ಕೆ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಯು.ಪಿ.ಶಿವಾನಂದ ನೇಮಕಗೊಂಡಿದ್ದಾರೆ. ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಹಾಸನದ ಪ್ರಜೋದಯ ಪತ್ರಿಕೆಯ ಜೆ.ಆರ್ ಕೆಂಚೇಗೌಡ ಆಯ್ಕೆ ಗೊಂಡರೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯ ಪ್ರಜಾಸತ್ಯ ಪತ್ರಿಕೆಯ ಡಾ.ಬಿ.ಸಿ.ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.
ಹಾಸನ ಜಿಲ್ಲೆಯ ಜನಮಿತ್ರ ಪತ್ರಿಕೆಯ ಹೆಚ್.ಬಿ.ಮದನಗೌಡ ಸಮಿತಿಯ ಸಂಚಾಲಕರಾಗಿದ್ದಾರೆ. ಮಂಡ್ಯ ಜಿಲ್ಲೆಯ ಸೋಮಶೇಖರ ಕೆರಗೂಡು ಮತ್ತು ಶಿವಮೊಗ್ಗ ಟೆಲೆಕ್ಸ್ ಪತ್ರಿಕೆಯ ಎನ್.ರವಿ ಕುಮಾರ್ ಸಂಘಟನಾ ಸಂಚಾಲಕರಾಗಿ ನೇಮಕ ಗೊಂಡಿದ್ದಾರೆ. ಪಾಂಡೇಶ್ವರ್ ಮತ್ತು ಸರ್ವ ಪದಾಧಿಕಾರಿಗಳಿಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ರಾಜ್ಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಭಿನಂದಿಸಿದ್ದಾರೆ.