ಉಡುಪಿ:ಜು.20- ಉಡುಪಿಯ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ, ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಹಾಗೂ ಅನುಪಮ ಮಹಿಳಾ ಮಾಸಿಕ ಬಳಗದಿಂದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮಿಂಚಿರುವ ಅಭಿಜ್ಞಾ ರಾವ್ ಇವರನ್ನು ಬೇಟಯಾಗಿ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ಅವರ ಪ್ರತಿಭೆಯ ಬಗ್ಗೆ ಪ್ರಶಂಷಿಸಿ ಮುಂದಿನ ಭವಿಷ್ಯಕ್ಕೆ ಹಾರೈಸಲಾಯಿತು. ತಂಡದಲ್ಲಿ ಕುಲ್‍ಸೂಮ್ ಅಬೂಬಕ್ಕರ್, ಜಮೀಲ ಹೂಡೆ, ಆಮ್ನಾ ಕೌಸರ್ ಮತ್ತು ಲುಬ್ನಾ ಬಾನು ಇದ್ದರು.