ಮುಂಬಯಿ (ಆರ್‍ಬಿಐ), ಜು.25: ಮುಂಬಯಿ ವಡಲಾ ಅಲ್ಲಿನ ಶ್ರೀ ರಾಮಮಂದಿರ ದ್ವಾರಕಾನಾಥ ಭವನದಲ್ಲಿ ಇಂದಿಲ್ಲಿ ಶನಿವಾರ ಶ್ರಾವಣ ಶುದ್ಧ ಪಂಚಮಿ ಶುಭಾವಸರÀದಲ್ಲಿ ಸರಳವಾಗಿ ನಾಗರ ಪಂಚಮಿ ಆಚರಿಸಲ್ಪಟ್ಟಿತು.
ವರ್ಷಂಪ್ರತಿಯಂತೆ ಈ ಬಾರಿಯೂ ಬೆಳಿಗ್ಗೆಯಿಂದ ಶ್ರೀ ನಾಗರದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಸಹಸ್ರ ನಾರಿಕೇಳಾಭಿಷೇಕ, ನವಕಲಶ ಮಹಾಭಿಷೇಕ, ನಾಗದೇವರ ಮೂರ್ತಿಬಲಿ ಇತ್ಯಾದಿ ಪೂಜೆಗಳು ನೆರವೇರಿಸಲ್ಪಟ್ಟಿತು. ವೇದಮೂರ್ತಿ ಅನಂತ ಭಟ್ ಮತ್ತಿತರ ಪುರೋಹಿತರು ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಿ ಉಪಸ್ಥಿತ ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಮಂದಿರ ಸಮಿತಿಯ ಕೆಲವೊಂದು ಪದಾಧಿಕಾರಿಗಳು, ಸದಸ್ಯರು, ಎನ್.ಎನ್ ಪಾಲ್ ಸೇರಿದಂತೆ ಸೇವಾಕರ್ತರು ಉಪಸ್ಥಿತದ್ದು ನಾಗದೇವರನ್ನು ಆರಾಧಿಸಿದರು.