ಮುಂಬಯಿ (ಆರ್‍ಬಿಐ), ಜು.25: ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರ ಪಾವನ ಸಾನ್ನಿಧ್ಯ, ಆಶೀರ್ವಾದಗಳೊಂದಿಗೆ ಮೂಡುಬಿದಿರೆಯ ಇಲ್ಲಿನ ಶ್ರೀ ಜೈನಮಠದಲ್ಲಿ ಇಂದಿಲ್ಲಿ ಶನಿವಾರ ಬೆಳಿಗ್ಗೆಯಿಂದ ಶಾಸ್ತ್ರೋಕ್ತವಾಗಿ ನಾಗರ ಪಂಚಮಿ ಆಚರಿಸಲ್ಪಟ್ಟಿತು.
ಮೂಡುಬಿದಿರೆ ಜೈನ ಕಾಶಿಯ18 ಬಸದಿಗಳಲ್ಲಿನ 16 ಬಸದಿಗಳಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿಗಳವರ ಮಾರ್ಗದರ್ಶನದೊಂದಿಗೆ ಬಸದಿಗಳಲ್ಲಿ ಶ್ರೀ ಜಿನೇಶ್ವರ ಅಭಿಷೇಕ, ವಿಶೇಷ ಪೂಜೆ, ಪ್ರತಿ ಬಸದಿಯಲ್ಲಿ ಇರುವ ನಾಗಾಲಯಗಳಲ್ಲಿ ನಾಗರ ಪಂಚಮಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗಿ ನಾಗನಿಗೆ ತನು ಅರ್ಪಿಸಲಾಯಿತು.
ವರ್ಷಾ0ಪ್ರತಿಯಂತೆ ನಡೆದು ಕೊಳ್ಳುವ ಸ್ಥಾನೀಯ ಭಕ್ತಾದಿಗಳು, ಶ್ರಾವಕ ಶ್ರಾವಿಕೆಯರು ಈ ಬಾರಿ ಅಂತರ ಕಾಯ್ದು ತನುಅರ್ಪಿಸಿದರು. ಅಷ್ಟ ಕುಲ, ನಾಗ, ನಾಗ ಕನ್ನಿಕೆ, ಕ್ಷೇತ್ರ ಪಾಲ, ಜತೆ ಇರುದು ಜೈನ ಬಸದಿಗಳ ವಿಶೇಷ ಶ್ರೀ ಗಳವರು ಬೆಳಿಗ್ಗೆ ಗುರು ಬಸದಿಯಲ್ಲಿ ನಾಗ ಷೋಡಶೋಪಚಾರ ಪೂಜೆ ಜಲ, ಎಳೆ ನೀರು, ಹಾಲು ಕೇಸರಿ ಹುಡಿ, ಬೆಲ್ಲ ಶ್ರೀ ಗಂದ, ಚಂದನ ಗಳಿಂದ ಅಭಿಷೇಕ ಮಾಡಿ ಮಹಾ ಶಾಂತಿ ದಾರೆ ಯೆರೆ ದು ಲೋಕದಲ್ಲಿ, ರೋಗ ರುಜಿನ ಗಳಿಲ್ಲದೆ ಸುಭಿಕ್ಷೆ ನೆಲೆ ಯಾಗಲಿ ಎಂದು ಪ್ರಾಥಿರ್üಸಲಾಯಿತು.
ಶ್ರೀ ಗಳವರು ಕೆರೆಬಸದಿ ಪ್ರಾಚೀನ ನಾಗ ಬನ, ಪಡು ಬಸದಿ, ಬೆಂಕಿ ಬಸದಿ, ಸಾವಿರ ಕಂಬದ ಬಸದಿ ಗಳ ನಾಗ ಪೂಜೆಯಲ್ಲಿ ಭಾಗವಹಿಸಿ ಪೂಜೆಗೆ ಬಂದ ಸರ್ವರಿಗೂ ಹರಸಿ ಆಶೀರ್ವಾದಿಸಿದರು. ತಮಿಳುನಾಡು ಅಲ್ಲಿನ ಸಹಾಯಕ ಪೆÇಲೀಸ್ ಆಯುಕ್ತ ಡಾ| ಸೆಲ್ವ ಕುಮಾರ್ ಮತ್ತು ಕುಟುಂಬಸ್ಥರು ವಿಶೇಷ ಅತಿಥಿüಗಳಾಗಿದ್ದು ಶ್ರೀಗಳು ಹರಸಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪ್ರಭಾಚಂದ್ರ ಜೈನ್, ಅಮಿತ್ ತೇಜ (ಇಂಜಿನಿಯರ್), ಸಂಜಯಂತ ಕುಮಾರ್ ಶೆಟ್ಟಿ, ವೀರೇಂದ್ರ ಕುಮಾರ್, ಜಗತ್ಪಾಲ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.