ಮುಂಬಯಿ, ಜು.30: ಉಡುಪಿ ಜಿಲ್ಲೆಯ ಪಡುಬಿದ್ರೆ ಅಡ್ವೆ ನಿವಾಸಿಗಳಾದ ಚಂದು ಪೂಜಾರಿ ಮತ್ತು ಅಚ್ಚು ಪೂಜಾರಿ ದಂಪತಿ ಸುಪುತ್ರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಇದರ ಗೌರವಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಜೀವ ಗೌರವಾಧ್ಯಕ್ಷ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಇವರ ಸಹೋದರಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್ ಇವರ ಮಾತೃಶಿ ಕಮಲಾ ಮುದ್ದು ಸಾಲ್ಯಾನ್ (82.) ಇಂದಿಲ್ಲಿ ಗುರುವಾರ ಬೆಳಿಗ್ಗೆ ಮೂಲ್ಕಿ ಕಾರ್ನಾಡ್ ಇಲ್ಲಿನ ಸ್ವನಿವಾಸ ಕಮಲಾ ಸದನ ಇಲ್ಲಿ ವೃದ್ಧಾಪ್ಯ ಸಹಜತೆಯಿಂದ ನಿಧನರಾದರು.
ಮೃತರು ನಾಲ್ವರು ಸುಪುತ್ರರು, ಓರ್ವ ಸುಪುತ್ರಿ, ಜಯ ಸಿ.ಸುವರ್ಣ ಸೇರಿದಂತೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕಮಲಾ ಸಾಲ್ಯಾನ್ ನಿಧನಕ್ಕೆ ಜಯ ಸಿ.ಸುವರ್ಣ, ಭಾರತ್ ಬ್ಯಾಂಕ್‍ನ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ನಿರ್ದೇಶಕ ಮಂಡಳಿ, ಉನ್ನತಾಧಿಕಾರಿಗಳು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು, ಮುಂಬಯಿ ಎನ್‍ಸಿಪಿ ಪಕ್ಷದ ಉತ್ತರಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಮತ್ತಿತರ ಗಣ್ಯರನೇಕರು ಸೇರಿದಂತೆ ಕುಟುಂಬಸ್ಥರು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.