Friday 14th, August 2020
canara news

ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ-ಶ್ರದ್ದಾ ಭಕ್ತಿಯಿಂದ ನಡೆದ ಮೋಕ್ಷ ಕಲ್ಯಾಣ

Published On : 01 Aug 2020   |  Reported By : Rons Bantwal


ಜಿನೇಶ್ವರರ ಶ್ರೇಷ್ಠ ಗುಣಗಳನ್ನು ಮೈಗೂಡಿಸೋಣ-ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಮುಂಬಯಿ (ಆರ್‍ಬಿಐ), ಜು.27: ಭಗವಾನ್ ಪಾರ್ಶ್ವನಾಥರು ಕಾಶಿ, ವಾರಾಣಸಿಯ ರಾಜಕುಮಾರರಾಗಿ ಕ್ರಿ.ಪೂ 877ರಲ್ಲಿ ಜನಿಸಿ ದೇವರ ಹೆಸರಲ್ಲಿ ಯಜ್ಞ ಯಾಗಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ನಿಷೇಧÀ ಮಾಡಿಸಿದರು ಚಾತುರ್ಯಮ ವ್ರತಗಳಾದ ಸತ್ಯ ಅಹಿಂಸೆ ಅಚೌರ್ಯ ಅಪರಿಗ್ರಹ ಒಳಗೊಂಡ ಸದಾಚಾರ ದಿಂದ ಜೀವನದಲ್ಲಿ ಸುಖ ಪಡೆದು ಸರ್ವ ಜೀವಿಗಳಿಗೆ ಒಳಿತನ್ನು ಬಯಸುವವರ ಜೀವನ ಪಾವನ ಎಂದು ನುಡಿದವರು. ಕಠಿಣ ಉಪಸರ್ಗಗಳನ್ನು ಸಂಯಮದಿಂದ ಎದುರಿಸಿ 30ನೆ ವಯಸ್ಸಿಗೆ ನಿರ್ವಾಣ ದೀಕ್ಷೆ ಸ್ವೀಕರಿಸಿ70 ವರ್ಷ ಧರ್ಮ ಪ್ರಭಾವನೆ ಮಾಡಿ ಉತ್ತರ ಭಾರತ ದಕ್ಷಿಣ ಭಾರತದೆಲ್ಲೆಡೆ ಧರ್ಮ ಪ್ರಭಾವನೆ ಮಾಡಿದ ನಾವೂ ಜಿನೇಶ್ವರರ ಶ್ರೇಷ್ಠ ಗುಣಗಳನ್ನು ಮೈಗೂಡಿಸೋಣ ಎಂದು ಮೂಡುಬಿದಿರೆ ಜೈನಕಾಶಿಂiÀ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಿಳಿಸಿದರು.

ಇಂದು ಸೋಮವಾರ ಮೂಲ ಸ್ವಾಮಿ ಇರುವ ಗುರುಬಸದಿ ಹಾಗೂ ಶ್ರೀ ಜೈನ ಮಠ ದ ಬಸದಿಗಳಲ್ಲಿ ಶ್ರೀ ಜಿನೇಶ್ವರ ಅಭಿಷೇಕ ನಿರ್ವಾಣ ಕಲ್ಯಾಣ ಮಹಾಅರ್ಗ್ಯ ಸಹಿತ ವಿಶೇಷ ಪೂಜೆ ಇತ್ಯಾದಿಗಳೊಂದಿಗೆ ನೆರವೇರಿಸಿ ಅನುಗ್ರಹಿಸಿ ಸ್ವಾಮೀಜಿ ತಿಳಿಸಿದರು.

ಶ್ರಾವಣ ಸಪ್ತಮಿಯ ದಿನವಾದ ಇಂದಿಲ್ಲಿ ತನ್ನ ಪಾವನ ಸಾನ್ನಿಧ್ಯ ಮಾರ್ಗದರ್ಶನದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ 2777ನೇ ಮೋಕ್ಷ ಕಲ್ಯಾಣ ಪರ್ವದ ಜಿನೇಶ್ವರ ಅಭಿಷೇಕ ನಿರ್ವಾಣ ಕಲ್ಯಾಣ ನೆರವೇರಿಸಿ ಆಶೀರ್ವಚನಗೈದು ಸರ್ವರೂ ಜೀವನದಲ್ಲಿ ಸಂಕಷ್ಟ ಗಳು ಬಂದಾಗ ಅಧೀರರಾಗದೆ ತಾಳ್ಮೆ ಸಂಯಮದಿಂದ ಇದ್ದು ಇದ್ದುದರಲ್ಲೆ ತೃಪ್ತಿಪಟ್ಟು ಸರಳ ಸುಂದರ ಜೀವನ ನಡೆಸಿ ಸಂತೋಷ ಪಡೆಯಲು ಪಾರ್ಶ್ವನಾಥ ಸ್ವಾಮಿ ಸ್ಫೂರ್ತಿ ಎಂದರು.

ಮೂಡುಬಿದಿರೆ ಜೈನ್ ಮಿಲನ್‍ನ ವೀರ ವೀರಾಂಗನೆಯರು, ಶ್ರಾವಕ ಶ್ರಾವಿಕೆಯರು, ಪೂಜಾ ಸೇವಾದಾತಾರು ಭಕ್ತಾದಿಗಳು ಬಸದಿಗಳ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಗಳವರೊಂದಿಗೆ ಭಾಗವಹಿಸಿದ್ದು ಶ್ರೀಗಳವರು 2777 ನಿರ್ವಾಣ ಪೂಜೆ ನೆರವೇರಿಸಿ ಹರಸಿದರು. ಬೆಳಿಗ್ಗೆ ಗುರು ಬಸದಿಯಲ್ಲಿ ಷೋಡಶೋಪಚಾರ ಪೂಜೆ, ಜಲ, ಎಳೆ ನೀರು, ಹಾಲು, ಶ್ರೀ ಗಂಧ, ಚಂದನಗಳಿಂದ ಚಂಡೋಗ್ರ 1008 ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕಗೈದು ಮಹಾ ಶಾಂತಿ ದಾರೆಯೆರೆದು ಸರ್ವರಲ್ಲಿ ಜಿನೇಶ್ವರರ ಶ್ರೇಷ್ಠ ಗುಣಗಳ ಬಗ್ಗೆ ತಿಳಿಯುವ ಶಕ್ತಿ ಬರಲಿ ಸರ್ವ ಜೀವಗಳ ಬಗ್ಗೆ ದಯೆ ತೋರಿಸೋಣ ಲೋಕದಲ್ಲಿ, ರೋಗ ರುಜಿನಗಳಿಲ್ಲದೆ ಸುಭಿಕ್ಷೆ ನೆಲೆಯಾಗಲಿ ಎಂದು ಪೂಜೆ, ಅಭಿಷೇಕದಲ್ಲಿ ಭಾಗವಹಿಸಿದ ಸರ್ವರಿಗೂ ಶ್ರೀ ಜೈನ ಮಠದಲ್ಲಿ ಅನುಗ್ರಹಿಸಿದರು.

ಸುದೇಶ್ ಕುಮಾರ್ ಪಟ್ಣಶೆಟ್ಟಿ, ದಿನೇಶ್ ಕುಮಾರ್, ಎಂ.ಬಾಹುಬಲಿ ಪ್ರಸಾದ್, ವಿಜಯ್ ಕುಮಾರ್, ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಮಂಜುಳಾ ಅಭಯ ಚಂದ್ರ, ಸಂಧ್ಯಾ ಜೈನ್, ಯತಿರಾಜ್ ಶೆಟ್ಟಿ, ವೀರೇಂದ್ರ ಕುಮಾರ್, ಶಾಂತ ಕುಮಾರ್, ಕೆ.ಸುಧಾಕರ್, ಶ್ರೀ ಜೈನ ಮಠ ಮೂಡುಬಿದಿರೆ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಮತ್ತಿತರÀರು ಉಪಸ್ಥಿತರಿದ್ದರು.

ಶ್ರೀ ಮಠದಲ್ಲಿ ಪಟ್ಟದ ಪುರೋಹಿತ ಪಾರ್ಶ್ವನಾಥ ಇಂದ್ರ ಅಭಿಷೇಕ ನಡೆಸಿದರು. ಕೋವಿಡ್ ನಿಮಿತ್ತ ಸರಕಾರದ ಆಜ್ಞೆಯಂತೆ ಶಾಸ್ತ್ರಾನುಸಾರ ಸರಳವಾಗಿ ಪೂಜಾಧಿಗಳನ್ನು ನಡೆಸಲಾಗಿದ್ದು ಹೆಚ್ಚುವರಿ ಭಕ್ತರಿಗೆ ಫೇಸ್ ಬುಕ್ ಲೈವ್ ಮೂಲಕ ಅಭಿಷೇಕ, ಪೂಜಾಧಿಗಳನ್ನು ಕಾಣುವ ವ್ಯವಸ್ಥೆ ಮಾಡಲಾಗಿತ್ತು.

 
More News

*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ|  ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ| ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*

Comment Here