Saturday 10th, May 2025
canara news

ಕೊರೊನಾ ಹರಡಲು ತಿರುಗಾಡುವ ಎಲ್ಲರ ಕೊಡುಗೆ ಇದೆ

Published On : 02 Aug 2020


ಕೊರೊನಾ ಎಂದಾಕ್ಷಣ ಹೆದರುವ ಅಗತ್ಯವಿಲ್ಲ, ಸರಿ. ಆದರೆ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಎಲ್ಲರೂ ಅದರ ಕಪಿ ಮುಷ್ಠಿಗೆ ಸಿಲುಕ ಬೇಕಾಗುತ್ತದೆ. ಪ್ರಾರಂಭದ ದಿನಗಳಲ್ಲಿ ಸರಕಾರ ಸಾಕಷ್ಟು ಮುಂಜಾಗರೂಕತೆ ವಹಿಸಿ ಲಾಕ್ ಡೌನ್ ಮಾಡಿ ಕೊರೊನಾವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯ್ತು. ಆದರೆ ದಿನ ಕಳೆದಂತೆ ಸರಕಾರ ತಿಳಿಸಿದ ಮುನ್ನಚ್ಚರಿಕೆಯನ್ನು ಪಾಲಿಸದ ಜನರು ಜಿದ್ದಿಗೆ ಬಿದ್ದು ಹಣದ ಆಸೆಗೆ ಎಲ್ಲಾ ಕಡೆ ಸಿಕ್ಕಾಪಟ್ಟೆ ತಿರುಗಾಡಿ ಕೊರೊನಾವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನಿಯಮಗಳಿಗೆ ಬೆಲೆ ಕೊಡುತ್ತಿಲ್ಲ : ಸರಕಾರ ಸಭೆ, ಸಮಾರಂಭಗಳನ್ನು ಅತೀ ಅಗತ್ಯವಿದ್ದಲ್ಲಿ ಮಾತ್ರ ಮಾಡಲು ಅನುಮತಿ ನೀಡಿ ಜನರ ಸಂಖ್ಯೆಯನ್ನು ಮಿತಿಗೊಳಿಸಿತು.

ಆದರೆ ಅಂತಹ ಸಮಾರಂಭ ಮಾಡುವವರು ಸರಕಾರದ ಮಿತಿಗಿಂತ 5-10 ಪಟ್ಟು ಜನರನ್ನು ಸೇರಿಸಿ ನಿಯಮವನ್ನು ಗಾಳಿಗೆ ತೂರಿದ ಪರಿಣಾಮ ಕೊರೊನಾ ಹರಡಲು ಕಾರಣರಾದರು. ಪ್ರತಿಯೊಬ್ಬರೂ ಅತೀ ಅಗತ್ಯವಿದ್ದಲ್ಲಿ ಮಾತ್ರ ತಿರುಗಾಡಬೇಕು ಇಲ್ಲದಿದ್ದಲ್ಲಿ ಮನೆಯಿಂದ ಹೊರ ಬರಬೇಡಿ ಎಂದಿದೆ ಸರಕಾರ. ಆದರೆ ಹಲವಾರು ಮಂದಿ ಅನವಶ್ಯಕ ತಿರುಗಾಡಿ, ಕಂಡಕಂಡಲ್ಲಿ ಉಗುಳಿ ಕೊರೊನಾ ಉಲ್ಬಣಕ್ಕೆ ತಮ್ಮ ಕಾಣಿಕೆ ಅರ್ಪಿಸುತ್ತಿದ್ದಾರೆ. ಮಾಸ್ಕ್ ಇಲ್ಲದೆ ಮನೆಯಿಂದ ಹೊರಬರಬಾರದು ಎಂದು ನಿರ್ಬಂಧಿಸಿದ್ದರೂ ಕೂಡಾ ಮಾಸ್ಕ್ ಇಲ್ಲದೆ ಹೊರಗೆಲ್ಲಾ ತಿರುಗಾಡಿ, ಉಗುಳಿ ಖಾಯಿಲೆಯನ್ನು ಪ್ರಸಾರಿಸುತ್ತಿದ್ದಾರೆ. ಇಂತಹ ಮಂದಿಗೆ ಬುದ್ಧಿ ಕಲಿಸಬೇಕೆಂದಿದ್ದರೆ ಎಲ್ಲಾ ಕಡೆಯ ಪೊಲೀಸರಾದಿಯಾಗಿ, ಆರೋಗ್ಯ ಅಧಿಕಾರಿಗಳು ಪ್ರತೀ ಪ್ರದೇಶದ ಅಲ್ಲಲ್ಲಿ ನಿಂತು ಅತೀ ಹೆಚ್ಚಿನ ದಂಡವನ್ನು ವಿಧಿಸಿ ತಹಬಂದಿಗೆ ತರುವುದು ಅನಿವಾರ್ಯ. ಇನ್ನು ಕೆಲವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಿದ್ದರೂ ಕೇಳದೇ ಗುಂಪು ಗುಂಪಾಗಿ ಸೇರಿ ಕೊರೊನಾದ ಸಾಮಾಜಿಕ ಹರಡುವಿಕೆಗೆ ಕಾರಣರಾಗುತ್ತಿದ್ದಾರೆ. ಇವರಿಗೆಲ್ಲ ದಂಡಂ ದಶಗುಣಂ ಭವೇತ್ ಎನ್ನದೆ ವಿಧಿಯಿಲ್ಲ.

ಸಾರ್ವಜನಿಕ ಸಾರಿಗೆ : ಸಾರ್ವಜನಿಕ ಸಾರಿಗೆಯನ್ನು ಪರಿಗಣಿಸಿದರೆ ಸರಕಾರೀ ಪ್ರಯೋಜಿತ ರಸ್ತೆ ಸಾರಿಗೆ ಸಂಸ್ಥೆಯ, ರೈಲಿನ ವ್ಯವಸ್ಥೆಗಳಲ್ಲಿ ಸ್ಯಾನಿಟೈಸರ್ ನೊಂದಿಗೆ ನಿರ್ದಿಷ್ಟ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರಿಗೆ ಓಡಾಟವನ್ನು ನಡೆಸುತ್ತಿವೆ. ಆದರೆ ಹೆಚ್ಚಿನ ಖಾಸಗೀ ಸಾರಿಗೆಗಳಲ್ಲಿ ಸ್ಯಾನಿಟೈಸ್ ಆಗಲೀ, ಸಾಮಾಜಿಕ ಅಂತರವಾಗಲೀ ಇಲ್ಲದೆ ಜನರನ್ನು ಒಟ್ಟಾರೆ ತುಂಬಿಸಿಕೊಂಡು ಓಡಾಟ ನಡೆಸುವದನ್ನು ಕಾಣುತ್ತಿದ್ದೇವೆ. ವಿವಿಧ ಸಂಸ್ಥೆ, ಕಚೇರಿಗಳಿಗೆ ನೇಮಕಗೊಂಡ ನೌಕರರು ಸ್ವಂತ ವಾಹನವಿಲ್ಲದೆ ಅನಿವಾರ್ಯವಾಗಿ ಸಾರ್ವಜನಿಕ ಲಭ್ಯವಿರುವ ವಾಹನವನ್ನೇ ಅವಲಂಬಿಸಬೇಕಾಗುತ್ತದೆ. ಅಂತಹ ನೌಕರರಿಗೆ ಸಮಯದ ನಿಬಂಧನೆಯೂ ಇರುವದರಿಂದ ದೊರಕುವ ಸಾರಿಗೆಯಲ್ಲಿಯೇ ಸಾಗಿ ತಮ್ಮ ಗಮ್ಯ ಸ್ಥಳಕ್ಕೆ ತಲುಪಬೇಕಾಗುತ್ತದೆ. ಆದುದರಿಂದ ಒಂದು ದೃಷ್ಟಿಯಲ್ಲಿ ಸರಕಾರ, ಸಂW,À ಸಂಸ್ಥೆಗಳು ಸೂಕ್ತ ವ್ಯವಸ್ಥೆ ಮಾಡದ ಕಾರಣ ಕೊರೊನಾ ಹರಡುವಿಕೆಗೆ ಪರೋಕ್ಷ ಕಾರಣವಾಗಿವೆ. ಸರಕಾರ, ಸಂW,À ಸಂಸ್ಥೆಗಳು ಕೂಡಾ ತನ್ನ ಎಲ್ಲಾ ನೌಕರರಿಗೂ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಿದರೆ ಅಥವಾ ದೂರದಿಂದ ಆಗಮಿಸುವವರಿಗೆ ಅವರ ಪ್ರದೇಶದ ಸಮೀಪದಲ್ಲೇ ಕಾರ್ಯ ನಿರ್ವಹಿಸುವ ಅವಕಾಶ ಒದಗಿಸಿದಲ್ಲಿ ಅನಗತ್ಯ ಓಡಾಟ, ಗುಂಪುಗೂಡುವಿಕೆ ತೊಲಗಿ ಕೊರೊನಾದ ಸಾರ್ವಜನಿಕ ಪ್ರಸರಣವನ್ನು ಸಾಕಷ್ಟು ತಡೆಗಟ್ಟಬಹುದು. 

ಕಡ್ಡಾಯ ಹಾಜರಾತಿಯಿಂದ ದೂರದವರಿಗೆ ವಿನಾಯಿತಿಯನ್ನೂ ನೀಡಬಹುದಾಗಿದೆ. ಒಂದು ವೇಳೆ ಇದು ಸಾಧ್ಯವೇ ಇಲ್ಲವೆಂದಾದರೆ ಅಂತಹ ನೌಕರರಿಗೆ ಅವರ ಕೆಲಸದ ಸ್ಥಳದ ಹತ್ತಿರವೇ ಉಳಿದುಕೊಳ್ಳಲು ಸೂಕ್ತ ಏಪಾರ್Àಡನ್ನು ಮಾಡಿಕೊಡಬೇಕು. ಇದು ಅನಗತ್ಯ ತಿರುಗಾಟ, ಸಮಯದ ನಿರ್ಬಂಧಗಳನ್ನು ನಿವಾರಿಸಿ ನೌಕರರಿಗೂ, ಸಂಸ್ಥೆಗೂ ಉತ್ತಮ ಬಾಂಧವ್ಯ ಮುಂದುವರೆಯಲು ಸಹಕರಿಸಲಿದೆ. ಲಾಕ್‍ಡೌನ್ ಪ್ರಾರಂಭದ ಸಂದರ್ಭದಲ್ಲಿ ಮನೆ, ಇತ್ಯಾದಿ ಸೂಕ್ತ ವ್ಯವಸ್ಥೆಗಳನ್ನು ಸಂಘ, ಸಂಸ್ಥೆ, ಕಾರ್ಖಾನೆಗಳು ನೌಕರ, ಕೆಲಸಗಾರರಿಗೆ ಕಂಪೆನಿಯ ಪರಿಸರದಲ್ಲಿಯೇ ಮಾಡಿಕೊಟ್ಟು ಉಳಿಸಿಕೊಂಡಿರುತ್ತಿದ್ದಲ್ಲಿ ಅನಗತ್ಯ ಓಡಾಟ ನಿಂತು ಎಲ್ಲವೂ ಸುಸೂತ್ರಗೊಳ್ಳುತ್ತಿತ್ತು. ಆದರೆ ಆ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಬದಲು ಕೈಚೆಲ್ಲಿದ ಕಾರಣ ಸರಕಾgವೇÀ ರೈಲು, ಬಸ್ಸುಗಳಲ್ಲಿ ಅವರೆಲ್ಲರನ್ನೂ ಅವರವರ ಮನೆಗೆ ತಲುಪಿಸುವ ಗುರುತರ ಹೊಣೆಯನ್ನು ಹೊರಬೇಕಾಯ್ತು. ಅಂತಹ ಪರಿಣತ ಕೆಲಸಗಾರರು ಮನೆ ತಲುಪಿದ ಕಾರಣ ಇಂದು ಹಲವಾರು ಕಂಪೆನಿಗಳು ಉತ್ಪಾದನೆ ಇಲ್ಲದೆ ನಷ್ಟದಲ್ಲಿದ್ದು ಒಟ್ಟಾರೆ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ.

ಪ್ರಾರಂಭಗೊಳ್ಳುವ ಕಾರ್ಖಾನೆಗಳು, ಸಂಸ್ಥೆಗಳು ತಮಗೆ ಬೇಕಿರುವಷ್ಟು ಕಾರ್ಮಿಕರನ್ನು ಸ್ಥಳೀಯವಾಗಿಯೇ ಇರಿಸಿಕೊಳ್ಳುವುದಕ್ಕಾಗಿ ತಮ್ಮದೇ ವ್ಯಾಪ್ತಿಯಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯವಿರುವ ಮನೆಯ, ಅಂತಸ್ತುಗಳ ಏರ್ಪಾಡನ್ನು ಮಾಡಿಕೊಡುವುದು ಬಹಳ ಶ್ರೇಯಸ್ಕರ. ಕೊರೊನಾದಂತಹ ಖಾಯಿಲೆಗಳ ಸಂದರ್ಭದಲ್ಲಂತೂ ಈ ರೀತಿಯ ಕ್ರಮ ಬಹಳ ಉಪಯುಕ್ತ. ಇಂತಹ ಸಂದರ್ಭದಲ್ಲಿ ಆ ಕಾರ್ಮಿಕರೊಡನೆ ಅವರಿಗೆ ನೀಡಲಾದ ಮನೆಯ ಬಗೆಗೆ ಅವರ ಕೆಲಸದ ನಿವೃತ್ತಿಯ ಅವಧಿಯ ತನಕದ ಒಪ್ಪಂದವನ್ನು ಮಾಡಿಕೊಂಡರೆ ಎಲ್ಲವೂ ಸುಗಮ ಸಾಧ್ಯ. ಇದೇ ರೀತಿ ಕೊಳೆಗೇರಿ ನಿರ್ಮಾಣಕ್ಕೆ ಕಾರಣವಾಗುವ ಮಂದಿಯನ್ನು ಒಟ್ಟುಗೂಡಿಸಿ ಅವರಿಗೂ ಸೂಕ್ತ ಶಿಕ್ಷಣವನ್ನು ನೀಡಿ ಅವರಿಗಾಗಿ ಒಂದು ಅಥವಾ ಎರಡು ಬೆಡ್ ಗಳ ಮನೆಯನ್ನು ಬಹು ಅಂತಸ್ತುಗಳಲ್ಲಿ ನಿರ್ಮಿಸಿ ನೀಡಿ ಅವರಿಂದ ನಿರ್ದಿಷ್ಟ ಕಾಲಮಿತಿಯಲ್ಲಿ ಆ ಮನೆಯ ರಚನೆಯ ಖರ್ಚನ್ನು ವಸೂಲಿ ಮಾಡುವ ಒಪ್ಪಂದ ಮಾಡಿಕೊಂಡರೆ ಕೊಳೆಗೇರಿ ನಿರ್ಮಾಣವಾಗಿ ಸಾಮಾಜಿಕ ಅಂತರವಿಲ್ಲದೆ ಆಗುವ ಕೊರೊನಾದಂತಹ ತೊಂದರೆಯಿಂದ ಪಾರಾಗಬಹುದು. ಆದರೆ ಇಂತಹ ಕಾರ್ಯಕ್ಕೆ ಧೈರ್ಯವಂತ ಮನಸ್ಸಿನ ವ್ಯಕ್ತಿ, ಸಂಸ್ಥೆ, ಸರಕಾರಗಳು ಬೇಕು.

ಪ್ರತಿಯೊಬ್ಬರೂ ಕೊರೊನಾ ಪ್ರಸರಣಕ್ಕೆ ತಂತಮ್ಮ ಕೊಡುಗೆ ಕೊಡುತ್ತಿರುವುದರಿಂದ ಅದು ಅವ್ಯಾಹತವಾಗಿ ಪಸರಿಸಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸರಕಾರ, ಸಂಸ್ಥೆ, ಕಾರ್ಖಾನೆಗಳು, ನೇಮಿಸಿಕೊಳ್ಳುವ ನೌಕರರಿಗೆ ಸ್ಥಳೀಯವಾಗಿಯೇ ಉಳಿದುಕೊಂಡು ಸೇವೆ ಸಲ್ಲಿಸುವ ಅವಕಾಶ ಒದಗಿಸಿದರೆ ಅನಗತ್ಯ ತಿರುಗಾಟ, ಕೊರೊನಾದಂತಹ ವೈರಸ್‍ಗಳ ಹರಡುವಿಕೆ ಖಂಡಿತ ತಡೆಗಟ್ಟಬಹುದು. ಏನಂತೀರಿ?


ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ. ಫೋ: 9008238599

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here