ಮಂಗಳವಾರ ಸುರಿದ ಭಾರೀ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ನಿವಾಸಿ ಹೆಲೆನ್ ಹಾಗೂ ಪಿಯುಸ್ ಡಿಸೋಜರವರ ಮನೆ ಮಹಡಿ ಮೇಲೆ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ.ಮನೆಯಲ್ಲಿ 4 ಮಂದಿ ಇದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣಪಾಯದಿಂದ ಪಾರಗಿದ್ದಾರೆ.
ಬೃಹತ್ ಗಾತ್ರದ ಮರ ನೆರೆಮನೆಯ ಐವನ್ ಸಲ್ಡಾನ ಎಂಬವರಿಗೆ ಸೇರಿದ್ದು,ಮರ ಬೀಳುವ ರಭಸಕ್ಕೆ ಐವನ್ ರವರ ಆವರಣಗೋಡೆಯೂ ಒಡೆದು ಹೋಗಿದೆ ಎನ್ನಲಾಗಿದೆ.ಸುಮಾರು 30 ರಿಂದ 50 ಸಾವಿರದ ವರೆಗೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.