ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಸಾಂಗವಾಗಿ ನೆರವೇರಿಸುವಂತೆ ಹಾಗೂ ಫ್ರಭು ಶ್ರೀರಾಮಚಂದ್ರನ ಮಂದಿರವು ಮಂಗಳಕರವಾಗಿ ಪೂರ್ಣಗೊಳ್ಳುವಂತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ದೇವರಿಗೆ ವಿಶೇಷ ಪೂಜೆ.ಪಾರ್ಥನೆ.ಭಜನೆ.ಯಕ್ಷಗಾನ.ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಿತು.ಇದೇ ವೇಳೆ ಕರಸೇವೆಯಲ್ಲಿ ಭಾಗವಹಿಸಿದ ಕಾರ್ಯಕರ್ತರನ್ನು ಮೂಲ್ಕಿ ಮೂಡಬಿದಿರೆ ಬಿಜೆಪಿ ವತಿಯಿಂದ ಗೌರವಿಸಲಾಯಿತು.
ಇದೇ ಸಂಧರ್ಭ ಫ್ರಭು ಶ್ರೀರಾಮಚಂದ್ರ ದೇವರ ಭವ್ಯ ದೇಗುಲ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ನಡೆಯುವ ಭೂಮಿಪೂಜೆ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಮೂಲ್ಕಿ ಮೂಡಬಿದಿರೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎಲ್.ಸಿಡಿ ಪರದೆ ಮುಖಾಂತರ ವೀಕ್ಷಣೆ ಮಾಡಿದರು ಬಳಿಕ ಸಿಹಿತಿಂಡಿ ವಿತರಿಸಲಾಯಿತು