ಮಹಾರಾಷ್ಟ್ರದ ಆಯೋಧ್ಯ ಪ್ರಸಿದ್ಧ ವಡಾಲದ ಶ್ರೀರಾಮ ಮಂದಿದಲ್ಲಿ ವಿಶೇಷ ಪೂಜೆ
ಮುಂಬಯಿ (ಆರ್‍ಬಿಐ), ಆ.05: ಭಾರತ ರಾಷ್ಟ್ರದ ಐತಿಹಾಸಿಕ ದಿನವಾದ ಇಂದು ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಪರ್ವಕಾಲದಲ್ಲಿ ಮಹಾರಾಷ್ಟ್ರದ ಆಯೋಧ್ಯ ಪ್ರಸಿದ್ಧ ವಡಾಲದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲ್ಪಟ್ಟಿತು.
ಕಳೆದ ಏಕದಶಿಯಂದು ಪ್ರದೋಶ ನೆರವೇರಿಸಿ ಪೂರ್ವ ಸಿದ್ಧತೆ ನಡೆಸಲಾಯಿತು. ಇಂದಿಲ್ಲಿ ಅಲಂಕಾರ ಪೂಜೆ, ಶಂಖಾನಾದ, ಶ್ರೀರಾಮ ನಾಮಜಪ, ಭಜನೆಗಳನ್ನು ನಡೆಸಿ ಶೀಘ್ರವೇ ಈ ಪಾವಿತ್ರ ್ಯತಾ ಮಂದಿರ ನಿರ್ವಿಘ್ನಗಳಿಂದ ಪೂರ್ಣಗೊಳ್ಳುವಂತೆ ಹಾಗೂ ಪ್ರಭು ರಾಮಚಂದ್ರ ದೇವರು ನಾಡಿನ ಸಮಸ್ತ ಜನತೆಗೆ ಹರಸುವಂತೆ ಪ್ರಾಥಿರ್üಸಲಾಯಿತು. ಮಂದಿರದ ಪ್ರಧಾನ ಅರ್ಚಕ ಗೋವಿಂದಾಚಾರ್ಯ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.
ರೋಯಲ್ ವೆಲ್ಫೇರ್ ಅಸೋಸಿಯೇಶನ್ ಸಾರಥ್ಯದಲ್ಲಿ ಇಂದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಎನ್.ಎನ್ ಪಾಲ್, ಸುಭಾಶ್ ಪೈ, ಕಿರಣ್ ಕಾಮತ್, ಅನಂತ್ ಪೈ ಡೋಂಗ್ರಿ, ಸಚಿನ್ ಕಾಮತ್, ವಿನಾಯಕ್ ಶ್ಯಾನ್‍ಬಾಗ್, ಸಂತೋಷ್ ಬಾಳಗಿ, ಪ್ರವೀಣ್ ಕಾಮತ್, ಅಮಿತ್ ಬಾಳಗಿ ಮತ್ತು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಸಮಿತಿ ಮತ್ತು ವಡಾಲದ ಶ್ರೀರಾಮ ಮಂದಿರದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕೆಲವೇ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.