ಮುಂಬಯಿ, ಆ.06: ಶ್ರೀ ಅಂಬಿಕಾ ಪ್ರೀಂಟರ್ಸ್ ಆ್ಯಂಡ್ ಪಬ್ಲೀಕೇಶನ್ಸ್ ಇದರ ಕಾರ್ಯಾಧ್ಯಕ್ಷ, ಪುಣ್ಯ ನಗರಿ ಮತ್ತು ಮುಂಬಯಿ ಚೌಫೇರ್ ಮರಾಠಿ ದೈನಿಕ ಇವುಗಳ ಸಂಸ್ಥಾಪಕ ಸಂಪಾದಕ, ಹಿಂದ್‍ಮಾತಾ, ಕರ್ನಾಟಕ ಮಲ್ಲ (ಕನ್ನಡ ದೈನಿಕÀ), ಯಶೋಭೂಮಿ (ಹಿಂದಿ), ಅಪ್ಲಾ ವಾರ್ತಾಹರ್ (ಮರಾಠಿ) ತಮಿಳ್ ಟೈಮ್ಸ್ (ತಮಿಳು) ಪತ್ರಿಕೆಗಳ ಯಜಮಾನ, ಹಿರಿಯ ಪತ್ರಕರ್ತ, ಪತ್ರಿಕೋದ್ಯಮದ ಯಶೋಗಾಥೆ ಮುರಳೀಧರ ಅನಂತ ಶಿಂಗೋಟೆ (83.) ಇಂದಿಲ್ಲಿ ಗುರುವಾರ ಅಪರಾಹ್ನ ಮಹಾರಾಷ್ಟ್ರ ಪುಣೆ ಜಿಲ್ಲೆಯ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆ ಜುನ್ನಾರ್ ತಾಲೂಕು ಓತುರ್ ನಗರದ ಗಾಯ್‍ಮುಖ್‍ವಾಡಿ ಇಲ್ಲಿನ ಸ್ವನಿವಾಸದಲ್ಲಿ ವೃದ್ಧಾಪ್ಯ ಸಹಜತೆ ಯಿಂದ ನಿಧನ ಹೊಂದಿದರು.
ಪುಣೆ ಜಿಲ್ಲೆಯ ಉಂಬ್ರ ಇಲ್ಲಿ ಜನಿಸಿದ್ದ ಇವರು ಬರೇ 4ನೇ ತರಗತಿ ಓದಿ ಅರ್ಧದಲ್ಲೇ ಶಿಕ್ಷಣ ನಿಲ್ಲಿಸಿ ಉದರ ಪೆÇೀಷಣೆಗಾಗಿ ಮುಂಬಯಿ ಸೇರಿ ಮಹಾನಗರದ ಬೈಕುಲಾ ಮಾರುಕಟ್ಟೆಯಲ್ಲಿ ಹಣ್ಣುಹಂಪಲು ಮಾರಾಟ ಮಾಡುತ್ತಾ, ಎ.ಹೆಚ್ ವ್ಹೀಲರ್ ಸಂಸ್ಥೆಯಲ್ಲಿ ಪತ್ರಿಕಾ ವಿತರಕರಾಗಿ ಭುವಾಶೇಠ್ ಧಾಂಗಟ್ ಇವರೊಂದಿಗೆ ವೃತ್ತಿನಡೆಸಿ ಅವರ ಪ್ರೇರಣೆಯಿಂದ ಪತ್ರಿಕಾ ವಿತರಣಾ ಏಜೇನ್ಸಿ ನಡೆಸಿ ಸ್ವಉದ್ಯಮದತ್ತ ಮುನ್ನಡೆದಿದ್ದರು. 1994 ರಲ್ಲಿ ಮುಂಬಯಿ ಚೌಫೇರ್ ಹೆಸರಿನ ಮರಾಠಿ ಸಂಜೆ ದೈನಿಕ ಸ್ಥಾಪಿಸಿ ಕ್ರಮೇಣ ಹಿಂದಿ, ಕನ್ನಡ, ತಮಿಳು ದೈನಿಕಗಳನ್ನು ಆರಂಭಿಸಿ ನಾಡಿನ ಹೆಸರಾಂತ ಪತ್ರಿಕೋದ್ಯಮಿಯಾಗಿ ಶ್ರಮಿಸಿದ್ದರು.
ಇಂಡೋ-ಅಫ್ರಿಕನ್ ಸಂಸ್ಥೆಯ ಪಿಲ್ಲರ್ಸ್ ಅಫ್ ನ್ಯೂಸ್ ಪೇಪರ್ ಸೊಸೈಟಿಸ್ ಪುರಸ್ಕಾರ (2011), ಮಹಾರಾಷ್ಟ್ರ ಸಂಪಾದಕ ಪರಿಷತ್ತ್‍ನಿಂದ ಜೀವನ ಗೌರವ 2008 ಪುರಸ್ಕಾರ. ಬೃಹನ್ಮುಂಬಯಿ ವೃತ್ತ ಪತ್ರ ವಿಕ್ರೇತಾ ಸಂಘದ ಜೀವನ್ ಗೌರವ್ ಪುರಸ್ಕಾರ್ (2010), ಉದ್ಯೋಗಶ್ರೀ ಗೌರವ ಪುರಸ್ಕಾರ 2012, ಇ-ಟಿವಿಯ ಸಂವಾದ ಕಾರ್ಯಕ್ರಮದಲ್ಲಿ ಯಶಸ್ವಿ ಪತ್ರಿಕಾ ಉದ್ಯಮಿ ಗೌರವ, ಉರ್ದು ಟೈಮ್ಸ್ ಪತ್ರಿಕಾ ಗೌರವ. ಸಲಾಂ ಪುಣೆ ಸಂಸ್ಥೆಯ ಪುರಸ್ಕಾರ (2012), ಶಿವನೇರ್ ಭೂಷಣ್ (2012) ಪುರಸ್ಕಾರ, ಭಾರತೀಯ ವಿದ್ಯಾಪೀಠದಿಂದ ಜೀವನ್ ಗೌರವ್ ಪುರಸ್ಕಾರ ಇತ್ಯಾದಿ ಹಲವಾರು ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದರು.
ಸಂಯುಕ್ತ ಮಹಾರಾಷ್ಟ್ರದ ಚಳುವಳಿಯಲ್ಲಿ ಮುಂಬಯಿನ ಫೌಂಟನ್ ಪರಿಸರದಲ್ಲಿ ಅಂದೋಲನಕ್ಕೆ ಸಾಕ್ಷಿಯಾಗಿದ್ದ ಇವರು ಸದ್ಯ ವೃತ್ತಪತ್ರಿಕಾ ಲೋಕದಲ್ಲಿ ಬಾಬಾ ಎಂದೇ ಪ್ರಸಿದ್ಧರೆಣಿದ್ದರು. ಮೃತರು ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಸೇರಿದಂತೆ ತನ್ನ ದೈನಿಕಗಳ ಲಕ್ಷಾಂತರ ಓದುಗರನ್ನು ಅಗಲಿದ್ದಾರೆ.