ಕಟೀಲು: ಇಲ್ಲಿನ ರಾಮ್ ಸೇನಾ ಕೇಸರಿ ಘಟಕ ಕಟೀಲು ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಧನ ಸಹಾಯ ಒದಗಿಸಲಾಯಿತು.
ಕೊಂಡೆಮೂಲ ನಿವಾಸಿ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಾಲತಿ ಎಂಬವರಿಗೆ ರೂ.20,800 ಧನ ಸಹಾಯವನ್ನ ರಾಮ್ ಸೇನಾ ವತಿಯಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭ ರಾಮ್ ಸೇನಾ ಬಜಪೆ ವಲಯ ಅಧ್ಯಕ್ಷ ಸೂರಜ್ ಕೊಂಡೇಲ, ಕೇಸರಿ ಘಟಕ ಅಧ್ಯಕ್ಷ ದೀಪಕ್ ಕಟೀಲ್, ಉಪಾಧ್ಯಕ್ಷ ರಮಾನಂದ ಕಟೀಲ್, ಸಂಘಟನಾ ಕಾರ್ಯದರ್ಶಿ ಕೃತಿಕ್ ಕಟೀಲ್, ಪ್ರಧಾನ ವಕ್ತಾರ ಸಂಜೀವ ಮಡಿವಾಳ ಕಟೀಲ್ ಮತ್ತಿತ್ತರರು ಉಪಸ್ಥಿತರಿದ್ದರು.