ಇತಿಹಾಸ ಪ್ರಸಿದ್ದ ಮೂಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳಕ್ಕೆ ಕರ್ನಾಟಕ ಸರಕಾರದ ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯ್ ಚಂದ್ರ ಜೈನ್ ಭೇಟಿ ನೀಡಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.
ಈ ಸಂಧರ್ಭ ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರ ಪರವಾಗಿ ದಿನನಿತ್ಯ(ವರ್ಷದ 365 ದಿನವೂ)ಸೇವೆಯಾಗಿ ಒಂದು ಅಟ್ಟಿ ಮಲ್ಲಿಗೆ ಹೂವನ್ನು ಬಪ್ಪನಾಡು ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಾನ್ಯ ಮಾಜಿ ಸಚಿವರಾದ ಅಭಯಚಂದ್ರ ಜೈನ್ ರವರು ಅರ್ಪೀಸಿದರು.
ಈ ಸಂದರ್ಭದಲ್ಲಿ ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರು,ಮುಲ್ಕಿ ಬ್ಲಾಕ್ ಅಧ್ಯಕ್ಷರಾದ ಧನಂಜಯ ಮಟ್ಟು, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಯೋಗಿಶ್ ಕೋಟ್ಯಾನ್, ಬಾಲಚಂದ್ರ ಕಾಮತ್, ಮಂಜುನಾಥ್ ಕಂಬಾರ್, ಆಯುಷ್ ಜೈನ್, ಮಾಜಿ ಸದಸ್ಯರಾದ ಅಶೋಕ್ ಪೂಜಾರ್ ಮೂಲ್ಕಿ ಬ್ಲಾಕ್ ಸಾಮಾಜಿಕ ಜಾಲತಾಣ ಸಂಚಾರಕರಾದ ರಕ್ಷಿತ್ ಪೂಜಾರಿ, ಹರೀಶ್ ಕೊಳಚಿಕಂಬಳ ಉಪಸ್ಥಿತರಿದ್ದರು.