ಕಿನ್ನಿಗೋಳಿ ಸಮೀಪದ ಉಲ್ಲಂಜೆ ಎಂಬಲ್ಲಿ ಯುವಕರ ತಂಡವೊಂದರಿಂದ ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ನೌಷಾದ್ ಮೇಲೆ ಏಕಾಏಕಿ ತಲ್ವಾರ್ ದಾಳಿ ನಡೆದು ನೌಷಾದ್ ಜೀವ ಉಳಿಸಿಕೊಂಡು ಎಸ್ಕೇಪ್ ಆದ ಘಟನೆ ಶುಕ್ರವಾರ ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.
ದೀಪಕ್ ರಾವ್ ಕೊಲೆ ಆರೋಪಿ ನೌಶದ್ ನ ಮನೆ ಕಿನ್ನಿಗೋಳಿ ಸಮೀಪ ಉಳ್ಳಂಜೆ ಎಂಬಲ್ಲಿ ಇದ್ದು,ಶುಕ್ರವಾರದಂದು ಸಂಜೆ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಏಕಾಏಕಿ ಕೊಲೆ ಆರೋಪಿ ನೌಶದ್ ನ ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಗೊಳಿಸಿದ್ದು,ಮನೆ ಮಂದಿಯೆಲ್ಲಾ ಬೆಚ್ಚಿ ಬಿದ್ದಿದ್ದಾರೆ.ಈ ವೇಳೆ ನೌಶದ್ ಮನೆಯಲ್ಲಿದ್ದು,ದಾಳಿಯನ್ನು ಅರಿತ ನೌಶದ್ ಮನೆಯ ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿ ಜೀವ ಉಳಿಸಿದ್ದಾನೆ ಎನ್ನಲಾಗಿದೆ.ಮನೆಗೆ ನುಗ್ಗಿ ದಾಳಿ ನಡೆಸಲು ಬಂದ ಯುವಕರ ತಂಡವು ತುಳು - ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು ಎನ್ನಲಾಗಿದೆ.
ದೀಪಕ್ ರಾವ್ ಕೊಲೆ ಆರೋಪಿಗಳ ನಾಲ್ವರಲ್ಲಿ ಕಿನ್ನಿಗೋಳಿ ಉಳ್ಳಂಜೆಯ ನೌಶದ್ ಕೂಡ ಒಬ್ಬ.
ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಪೊಲೀಸ್ ಬಂದೋ ಬಸ್ತ್ ನ್ನು ಮಾಡಲಾಗಿದೆ.