ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿ ಪೂಜನಾದ ಪ್ರಯುಕ್ತ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ದೀಪ ಪ್ರಜ್ವಲನಗೊಳಿಸಿ ಪ್ರಾರ್ಥಿಸಿ, ಮಂದಿರದ ಕಾರ್ಯಕ್ಕೆ ಯಶಸ್ಸನ್ನು ಕೋರಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದ ದೇಲಂಪಡಿತ್ತಾಯರಾದ ಭಾಸ್ಕರ ಶಾಸ್ತ್ರೀ ಹಾಗೂ
ಮಣೆಗಾರ್ ಅನಂತ ಪದ್ಮನಾಭ ಅವರು ದೀಪ ಪ್ರಜ್ವಲನಗೊಳಿಸಿದರು.
ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಹಾಗೂ ಕ್ಷೇತ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.