ಮುಂಬಯಿ (ಉಳ್ಳಾಲ), ಆ.14: ಉಳ್ಳಾಲ ಎಸ್ ವೈಎಸ್ ಜಾತಿ ಮತ ಭೇದ ಮರೆತು ಸರ್ವರಿಗೆ ಸೇವೆ ನೀಡುತ್ತಿದೆ ಎಂದು ಜಮಿಯ್ಯತುಲ್ ಉಲಮಾ ರಾಜ್ಯಾ ಉಪಾಧ್ಯಕ್ಷ ಹುಸೈನ್ ಸ ಅದಿ ಕೆ.ಸಿ ರೋಡು ಹೇಳಿದರು.
ಅವರು ಎಸ್ ವೈಎಸ್ ಕೆ.ಸಿ ರೋಡ್ ಸೆಂಟರ್ ವತಿಯಿಂದ ಕಡಲ್ಕೊರೆತದಿಂದ ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಯೋಜನೆಯಡಿಲ್ಲಿ ತಲಪಾಡಿಯ ಕೆ.ಸಿ ನಗರದ ಕೊಮರಂಗಳದಲ್ಲಿನಿರ್ಮಿಸುವ ಮನೆಗೆ ಶಿಲಾನ್ಯಾಸಗೈದು ಮಾತನಾಡಿದರು.
ತಮ್ಮ ದೈನಂದಿನ ಖರ್ಚು ಕಡಿಮೆಗೊಳಿಸಿ ಇಂತಹ ಸಾಂತ್ವನ ಕಾರ್ಯದಲ್ಲಿ ಭಾಗಿಯಾಗಿ ಎಂದು ಹೇಳಿದರು.
ಎಸ್ ವೈಎಸ್ ರಾಜ್ಯ ಪ್ರ. ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಾಜ್ಯಾಂದ್ಯತ ಸುನ್ನಿ ಯುವಜನ ಸಂಘ ಕೋಟ್ಯಾಂತರ ರೂಪಾಯಿಯ ಸಾಂತ್ವನ ಚಟುವಟಿಗಳನ್ನು ವಿವಿಧ ಜಿಲ್ಲೆಯ ಸೆಂಟರ್ ಬ್ರಾಂಚ್ ಗಳಲ್ಲಿ ಎಸ್ ವೈಎಸ್ ನ ಕಾರ್ಯಕರ್ತರು ಮಾಡುವ ಕಾರ್ಯಚಟುವಟಿಕೆಯ ಪಟ್ಟಿ ಈ ನಾಡಿನ ಅತಂತ್ಯ ದೊಡ್ಡ ಚ್ಯಾರಿಟಿಯಾಗಿದೆ. ಸಮೂಹಿ ವಿವಾಹ, ಉಚಿತ ಮನೆ ನಿರ್ಮಾಣ ಅರೋಗ್ಯದ ವೆಚ್ಚ, ರೋಗಿಗಳ ಸಂದರ್ಶನ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಕೋವಿಡ್-19 ಸಂದರ್ಭದಲ್ಲಿ ಅಗತ್ಯವಾದ ಅಹಾರ ಸಮಾಗ್ರಿ ವಿತರಣೆ ಸಂಬಂದ ಪಟ್ಟ ಅಸ್ಪತ್ರೆಗೆ ಸೇರಿಸುವುದು ಮುಂದಾದ ಹಲವು ಸಾಂತ್ವನ ಕಾರ್ಯದಲ್ಲಿ ಎಸ್ ವೈಎಸ್ ದೊಡಗಿಸಿದೆ ಎಂದು ಹೇಳಿದರು.
ಎಸ್ ವೈಎಸ್ ಸಾಂತ್ವನ ಸಮಿತಿ ಸಂಚಾಲಕ ಎನ್.ಎಸ್ ಉಮರ್ ಮಾಸ್ಟರ್ ಮಾತನಾಡಿ ಸಾಂತ್ವನ ಯೋಜನೆಯ ಕಣ್ಣೇರ ಒರೆಸೋಣ ಬನ್ನಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ ವೈಎಸ್ ಕೆ.ಸಿ ರೋಡು ಸೆಂಟರ್ ಕಳೆದ 9ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ಹಲವು ಸಾಂತ್ವನ ಚಟುವಟಿಗಳನ್ನು ಮಾಡುತ್ತಾ ಬಂದಿದೆ. ಸಾಂತ್ವನ ಯೋಜನೆಯಡಿಯಲ್ಲಿ ಧನಿಗಳ ಸಹಾಯದಿಂದ ಕಡಲ್ಕೊರತೆಯಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ನೂತನ ಮನೆ ನಿರ್ಮಾಣ ಮಾಡುವ ಮಹತ್ತರ ಕಾರ್ಯಕ್ಕೆ ಮುಂದಾಗಿದೆವೆ ಎಂದು ಹೇಳಿದರು.
ಕೆ.ಸಿ ರೋಡು ಅಲ್ ಮುಬಾರ್ ಜುಮಾ ಮಸೀದಿಯ ಖತೀಬ್ ಮುನೀರ್ ಸಖಾಫಿ, ಎಸ್ ಜೆಎಂ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಮೊದ್ದೀನ್ ಬಾವ ಕೊಮರಂಗಳ, ಎಸ್ ವೈಎಸ್ ಕೆ.ಸಿ ರೋಡು ಸೆಂಟರ್ ಅಧ್ಯಕ್ಷ ಎಂ.ಪಿ ಮೊಹಮ್ಮದ್,ಎಸ್ ವೈಎಸ್ ಸ್ವಾಂತನ ಸಮಿತಿ ಅಧ್ಯಕ್ಷ ಯು.ಬಿ ಮೊಹಮ್ಮದ್ ಹಾಜಿ, ಅಬ್ಬಾಸ್ ಹಾಜಿ ಪೆರಿಬೈಲ್, ಉಮರುಲ್ ಫಾರೂಖ್ ಪೆರಿಬೈಲ್, ಸುಲೈಮಾನ್ ಹಾಜಿ ಅಜ್ಜಿನಡ್ಕ, ಅಬ್ಬಾಸ್ ಹಾಜಿ ಕೊಮರಂಗಳ, ಕೊಮರಂಗಳ ಮಸೀದಿ ಅಧ್ಯಕ್ಷ ಕೆ.ಇ ಹಸೈನಾರ್ , ಯಾಕೂಬ್ ತಲಪಾಡಿ, ಬಾವ ಹಾಜಿ ಪಿಲಿಕೂರು, ಮೋನು ಹಾಜಿ ಪಂಜಲ, ಕೆಸಿಎಫ್ ಕಾರ್ಯಕರ್ತ ಬಶೀರ್ ಟಿ.ಕೆ, ಎಸ್ ವೈಎಸ್ ಮತ್ತು ಎಸ್ಸೆಸ್ಸೆಫ್ ನ ಸ್ಥಳೀಯ ಕಾರ್ಯಕರ್ತ ಉಪಸ್ಥಿತರಿದರು.