ಬಜಪೆ: ಕಾರೊಂದು 20 ಅಡಿ ಆಳಕ್ಕೆ ಬಿದ್ದ ಘಟನೆ ಬಜಪೆ ಸಮೀಪದ ಈಶ್ವರ ಕಟ್ಟೆ ಎಂಬಲ್ಲಿ ಇಂದು ನಡೆದಿದೆ.ಕಾರು ಕೈಕಂಬದಿಂದ ಬಜಪೆ ಕಡೆಗೆ ತೆರಳುತ್ತಿತ್ತು.
ಈ ಸಂದರ್ಭದಲ್ಲಿ ಈಶ್ವರ ಕಟ್ಟೆ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದಿದೆ.ಸಮೀಪವೇ ಇದ್ದ ಮನೆಯ ಅಂಗಳದ ಅಂಚಿಗೆ ಬಿದ್ದು ನಜ್ಜು ಗುಜ್ಜಾಗಿದೆ.ಘಟನೆಯಲ್ಲಿ ಕಾರಿನಲ್ಲಿ ಚಾಲಕ ಸಹಿತ ಮೂವರು ಪ್ರಯಾಣೆಸುತ್ತಿದ್ದು,ಮೂವರು ಆಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಬಜಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.