ಲಯನ್ಸ್ ಕ್ಲಬ್ ಕಿನ್ನಿಗೋಳಿ ಹಾಗೂ ಪೊಂಪೈ ಕಾಲೇಜು ಐಕಳ ಇವರ ಸಹಯೋಗದೊಂದಿಗೆ ಪೊಂಪೈ ಕಾಲೇಜಿನ ಆವರಣದಲ್ಲಿ 74 ನೇ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಬೆಳಗ್ಗೆ 9:00 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಜರಗಿತು. ಪೊಂಪೈ ಕಾಲೇಜು ಸಂಚಾಲಕರಾದ ರೆವರೆಂಡ್ ಫಾದರ್ ವಿಕ್ಟರ್ ಡಿಮೆಲ್ಲೊರವರು ಧ್ವಜಾರೋಹಣವನ್ನು ನೆರವೇರಿಸಿದರು.
ಎನ್. ಸಿ .ಸಿ ಚೀಫ್ ಲೆಫ್ಟಿನೆಂಟ್ ಡಾ| ಪುರುಷೋತ್ತಮ್ ಕೆ. ವಿ., ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ | ಮಾಕ್ಸಿಮ್ ಪಿಂಟೋ,ಕಾರ್ಯದರ್ಶಿ ಲ | ಹಿಲ್ಡಾ ಲ | ಮೋಹನ್ ದಾಸ್ ಶೆಟ್ಟಿ, ಕಾಲೇಜು ಪ್ರಾಂಶುಪಾಲರಾದ ಲಯನ್ ಪ್ರೊಫೆಸರ್ ಜಗದೀಶ್ ಹೊಳ್ಳ ಮತ್ತು ಉಪನ್ಯಾಸಕರು, ಕಾಲೇಜು ಸಿಬ್ಬಂದಿ ವರ್ಗದವರು , ಕಿನ್ನಿಗೋಳಿ ಕ್ಲಬ್ ನ ಲಯನ್ ಸದಸ್ಯರು ಉಪಸ್ಥಿತರಿದ್ದರು. ಎನ್. ಸಿ .ಸಿ. ವಿದ್ಯಾರ್ಥಿಗಳು ಹಾಗೂ NSS ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸಸಿಗಳನ್ನು ನೆಡುವುದರ ಮೂಲಕ ಹಸಿರು ಮಡಿಲು ಕಾರ್ಯಕ್ರಮ ಆಚರಿಸಲಾಯಿತು