Saturday 10th, May 2025
canara news

ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ಗೆ ಅಭಿನವ ಸಾರಥಿ

Published On : 17 Aug 2020   |  Reported By : Rons Bantwal


ನೂತನ ಕಾರ್ಯಾಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಆಯ್ಕೆ

ಮುಂಬಯಿ (ಆರ್‍ಬಿಐ), ಅ.17: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ದೇಶದ ಪ್ರತಿಷ್ಠಿತ ಆಥಿರ್üಕ ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಸಾಲಿನ ಕಾರ್ಯಾಧ್ಯಕ್ಷ ಆಗಿ ಉಪ್ಪೂರು ಶಿವಾಜಿ ಪೂಜಾರಿ (ಯು.ಎಸ್ ಪೂಜಾರಿ) ನೇಮಕ ಗೊಂಡಿದ್ದಾರೆ. ಬ್ಯಾಂಕ್‍ನ ನಿರ್ದೇಶಕ ಮಂಡಳಿ ಸಭೆಯಲ್ಲಿ ಸರ್ವಾನುಮತದ ಆಯ್ಕೆ ನಡೆದಿದ್ದು ಬ್ಯಾಂಕ್‍ನ ಸರ್ವಾಂಗೀಣ ಅಭಿವೃದ್ಧಿಯ ಸರದಾರ, ಸಹಕಾರಿ ರಂಗದ ರೂವಾರಿ ಜಯ ಸಿ.ಸುವರ್ಣ ಈ ತನಕ ಕಾರ್ಯಾಧ್ಯಕ್ಷರಾಗಿ ಸೇವಾ ನಿರತರಾಗಿದ್ದರು.

ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಮತ್ತು ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಗಳಿಂದ `ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ' ಸೇರಿದಂತೆ ನೂರಾರು ರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ರಾಷ್ಟ್ರದ ಸಹಕಾರಿ ರಂಗದಲ್ಲೇ ಅಗ್ರಪಂಕ್ತಿಯಲ್ಲಿ -ರುವÀ ಕನ್ನಡಿಗರ ಹಿರಿಮೆಯ ಭಾರತ್ ಬ್ಯಾಂಕ್‍ನ 2018-2023ರ ಸಾಲಿನ ನಿರ್ದೇಶಕ ಮಂಡಳಿಗೆ 2018ರಲ್ಲಿ ದೇಶದ ಮೂರು ರಾಜ್ಯಗಳ 45 ಮತದಾನ ಕೇಂದ್ರಗಳಲ್ಲಿ ನಡೆಸಲ್ಪಟ್ಟ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಯು.ಎಸ್ ಪೂಜಾರಿ ದ್ವಿತೀಯ ಬಾರಿಗೆ ಬ್ಯಾಂಕ್‍ನ ನಿರ್ದೇಶಕರಾಗಿ ಆಯ್ದು ಇದೀಗ ಬ್ಯಾಂಕ್‍ನ ನೂತನ ಸಾರಥಿüಯಾಗಿ ಆಯ್ಕೆಯಾಗಿರುವರು.

ಭಾರತ್ ಬ್ಯಾಂಕ್ ಒಟ್ಟು 102 ಶಾಖೆಗಳನ್ನು ಹೊಂದಿದ್ದು ಬಹುರಾಜ್ಯ (ಮಲ್ಟಿಸ್ಟೇಟ್) ಬ್ಯಾಂಕ್ ಆಗಿ ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಾರ್ಯನಿರ್ವಾಹಿಸುತ್ತಿದೆ. ಜಯ ಸಿ.ಸುವರ್ಣ, ವಾಸುದೇವ ಆರ್.ಕೋಟ್ಯಾನ್, ಎಲ್.ವಿ ಅವಿೂನ್, ನ್ಯಾ| ಎಸ್.ಬಿ ಅವಿೂನ್, ಜೆ.ಎ ಕೋಟ್ಯಾನ್, ಕೆ.ಬಿ ಪೂಜಾರಿ, ಎನ್.ಟಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಪುರುಷೋತ್ತಮ ಎಸ್.ಕೋಟ್ಯಾನ್, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಶಾರದಾ ಸೂರು ಕರ್ಕೇರ ನ್ಯಾ| ರಾಜಾ ವಿ.ಸಾಲ್ಯಾನ್ ಅನ್ಭಲ್ಗನ್ ಸಿ.ಹರಿಜನ್ ಇವರು ಸದ್ಯ ಭಾರತ್ ಬ್ಯಾಂಕ್‍ನ ನಿರ್ದೇಶಕರಾಗಿದ್ದು ಯು.ಎಸ್ ಪೂಜಾರಿ ಕಾರ್ಯಧ್ಯಕ್ಷರಾಗಿದ್ದು ಬ್ಯಾಂಕ್‍ನ್ನು ಮುನ್ನಡೆಸುವರು. ರೋಹಿಣಿ ಜೆ.ಸಾಲ್ಯಾನ್ ಉಪ ಕಾರ್ಯಾಧ್ಯಕ್ಷೆ ಆಗಿಯೇ ಮುನ್ನಡೆಯಲಿದ್ದು, ಬ್ಯಾಂಕ್‍ನ ಸಿಇಒ ಮತ್ತು ಆಡಳಿತ ನಿರ್ದೇಶಕರಾಗಿ ವಿದ್ಯಾನಂದ ಎಸ್.ಕರ್ಕೇರಾ ಮತ್ತು ಜಂಟಿ ಆಡಳಿತ ನಿರ್ದೇಶಕರಾಗಿ ದಿನೇಶ್ ಬಿ.ಸಾಲ್ಯಾನ್ ಸೇವೆ ಸಲ್ಲಿಸಲಿದ್ದಾರೆ.

ಯು.ಎಸ್ ಪೂಜಾರಿ:
ಉಡುಪಿ ಜಿಲ್ಲೆಯ ಉಪ್ಪೂರು ಮೂಲತಃ ಯು.ಎಸ್ ಪೂಜಾರಿ ಅವರು ಎಂಜಿಎಂ ಕಾಲೆಜು ಉಡುಪಿ ಇಲ್ಲಿ ಉನ್ನತ ಶಿಕ್ಷಣ ಪೂರೈಸಿ ಮುಂಬಯಿನಲ್ಲಿ ಸ್ನಾತಕೋತ್ತರ ಪದವೀಧರ. ಬಿಎಸ್ಸಿ, ಎಂ.ಎ ಪದವೀಧರರಾಗಿ ಸಿಎಐಐಬಿ ಬ್ಯಾಂಕಿಂಗ್ ಪದವೀಧರರು. ಓರ್ವ ಮಿತಭಾಷಿಯಾಗಿ ಸರಳ ಸಜ್ಜನಿಕಾ, ಸದ್ಗುಣವಂತ ಆಗಿರುವ ಯು.ಎಸ್ ಪೂಜಾರಿ ಬ್ಯಾಂಕಿಕ್ ಕ್ಷೇತ್ರದ ಅಪಾರ ಅನುಭವವುಳ್ಳವರಾಗಿದ್ದಾರೆ. ನೂತನ ಕಾರ್ಯಧ್ಯಕ್ಷರಿಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಎನ್‍ಸಿಪಿ ಧುರೀಣ ಲಕ್ಷ್ಮಣ ಸಿ.ಪೂಜಾರಿ, ರತ್ನಾಕರ್ ಶೆಟ್ಟಿ ಮುಂಡ್ಕೂರು ಮತ್ತಿತರ ಗಣ್ಯರು ಅಭಿವಂದಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here