Saturday 10th, May 2025
canara news

ಕಥೊಲಿಕ್ ಸಭಾ ಮದರ್ ತೆರೆಜಾ ವಾರಾಡೊ ಸುರತ್ಕಲ್-ಲಯನ್ಸ್ ಕ್ಲಬ್ ಮುಲ್ಕಿ ವತಿಯಿಂದ ಕು| ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಪ್ರತಿಭಾನ್ವಿತ ವಿದ್ಯಾಥಿರ್ನಿಗೆ ಸನ್ಮಾನ

Published On : 17 Aug 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.17: ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 587 (97.8%) ಅಂಕ ಗಳಿಸಿ ರಾಜ್ಯಕ್ಕೆ ಏಳನೇ ಸ್ಥಾನ ಮತ್ತು ದ.ಕ.ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿಕ್ಟೋರಿಯಾ ಪದವಿಪೂರ್ವ ಕಾಲೇಜು ಲೇಡಿಹಿಲ್ ಮಂಗಳೂರು ವಿದ್ಯಾಥಿರ್üನಿ ಕು| ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಇವರನ್ನು ಕಥೊಲಿಕ್ ಸಭಾ ಮದರ್ ತೆರೆಜಾ ವಾರಾಡೊ ಸುರತ್ಕಲ್ ಮತ್ತು ಲಯನ್ಸ್ ಕ್ಲಬ್ ಮುಲ್ಕಿ ಇವರ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.

ರೊನಾಲ್ಡ್ ಫೆರ್ನಾಂಡಿಸ್ ಮತ್ತು ನ್ಯಾಸ್ಸಿ ಡೊರತಿ ಫೆರ್ನಾಂಡಿಸ್ ದಂಪತಿ ಸುಪುತ್ರಿ ಕು| ರಿಶಲ್ ಆಗಿದ್ದು, ಇತಿಹಾಸ, ರಾಜ್ಯಶಾಸ್ತ್ರ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಈ ನಾಲ್ಕು ವಿಷಯಗಳಲ್ಲಿ 100% ಅಂಕ ಗಳಿಸಿದ್ದಾರೆ.

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ರೊಲ್ಫಿ ಡಿಕೋಸ್ತಾ, ಕಥೊಲಿಕ್ ಸಭಾ ಮದರ್ ತೆರೆಜಾ ವಲಯದ ಅಧ್ಯಕ್ಷ ರಸಲ್ ರೋಚ್ ಮತ್ತು ಲಯನ್ಸ್ ಕ್ಲಬ್ ಮುಲ್ಕಿ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ನಿಕಟಪೂರ್ವ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಮತ್ತು ಉದಯ ಅಮಿನ್, ಕಥೊಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷ ಪೀಟರ್ ಅಲೆಕ್ಸ್ ಡಿಸೋಜಾ, ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್‍ನ ಉಪಾಧ್ಯಕ್ಷ ಡೊನಿ ಸುವಾರಿಸ್ ಕಥೊಲಿಕ್ ಸಭಾ ಸುರತ್ಕಲ್ ವಲಯದ `ಆಮ್ಚೊ ಸಂದೇಶ್' ಪ್ರತಿನಿಧಿ ಡಯಾನಾ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದು ಸನ್ಮಾನಿಸಿ ಶುಭಾರೈಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here