Saturday 10th, May 2025
canara news

*ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದೇವರಾಜ ಅರಸುರವರ ಜನ್ಮದಿನ ಆಚರಣೆ :*

Published On : 21 Aug 2020   |  Reported By : Roshan Kinnigoli


ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಇಂದಿರಾಗಾಂಧಿಯವರ ಉಳುವವನೇ ಹೊಲದೊಡೆಯ ಕಾನೂನನ್ನು ಸಮರ್ಥವಾಗಿ ಕರ್ನಾಟಕ ರಾಜ್ಯಾದಲ್ಲಿ ಅನುಷ್ಠಾನಗೊಳಿಸಿದ ಪರಿಣಾಮವಾಗಿ ಇಂದು ಅನೇಕಾ ಹಿಂದುಳಿದ ಕುಟುಂಬಗಳು ಭೂಮಿ ಹೊಂದಿ ಸ್ವಾವಲಂಬಿಯಾಗಿ ಬದುಕಲು ಅನುಕೂಲವಾಯಿತು ಎಂದು ಮುಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಧನಂಜಯ ಮಟ್ಟು ರವರು ಹೇಳಿದರು ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಳೆಯಂಗಡಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸುರವರ ಜನ್ಮದಿನಾಚಾರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದರು.

ಕೆಪಿಸಿಸಿ ಸದಸ್ಯರಾದ ಶ್ರೀ ವಸಂತ್ ಬೆರ್ನಾರ್ಡ್ ಮಾತನಾಡಿ ರಾಜೀವ ಗಾಂಧಿಯವರು ಯುವ ಜನತೆಗೆ ಮತದಾನದ ಹಕ್ಕು ನೀಡಿದವರು, ಇದರೊಂದಿಗೆ ತಂತ್ರಜ್ಞಾನವನ್ನು ಭಾರತದೇಶದಲ್ಲಿ ಪ್ರಥಮವಾಗಿ ಅನುಷ್ಠಾನಿಸಿದ ಮೇರು ವ್ಯಕ್ತಿತ್ವವುಳ್ಳವರು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಶೆಟ್ಟಿ, ಹಿರಿಯ ಕಾಂಗ್ರೆಸಿಗಾರದ ಶ್ರೀ ಪುತ್ತುಬಾವ, ಕಾಂಗ್ರೆಸ್ ನಾಯಕರುಗಳಾದ ಶ್ರೀ ಯೋಗೀಶ್ ಕೋಟ್ಯಾನ್, ಶ್ರೀ ಮೈಯ್ಯದಿ ಪಕ್ಷಿಕೆರೆ, ಶ್ರೀಮತಿ ಫಿಲೋಮಿನಾ ಸಿಕ್ವೇರಾ, ಶ್ರೀ ಧನ್‍ರಾಜ್ ಕೋಟ್ಯಾನ್ ಸಸಿಹಿತ್ಲು, ಶ್ರೀ ಜಾಕ್ಸ್‍ಸನ್ ಪಕ್ಷಿಕೆರೆ, ಶ್ರೀ ರಕ್ಷಿತ್ ಮುಲ್ಕಿ, ಶ್ರೀ ಅದ್ದು ಅಂಗರಗುಡ್ಡೆ, ಶ್ರೀ ಅಬ್ದುಲ್ ಅಝೀಝ್, ಶ್ರೀ ಮಂಜುನಾಥ್ ಕಂಬಾರ್, ಶ್ರೀ ಪ್ರಶಾಂತ್ ಸಸಿಹಿತ್ಲು, ಶ್ರೀ ಭೀಮಶಂಕರ್, ಶ್ರೀ ಮಹೇಶ್ ಮುನ್ನಾ, ಶ್ರೀ ಇಸುಬು, ಶ್ರೀ ಶಮೀರ್, ಶ್ರೀ ಬಶೀರ್ ಕುಳೈ, ಶ್ರೀ ಪುಂಡಲೀಕ, ಶ್ರೀ ಧರ್ಮಾನಂದ ಶೆಟ್ಟಿಗಾರ್, ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಅನಿಲ್ ಪೂಜಾರಿ ಸಸಿಹಿತ್ಲು ರವರು ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here