ಮುಂಬಯಿ (ಆರ್‍ಬಿಐ), ಆ.18: ಉಡುಪಿ ನಾವುಂದ ಇಲ್ಲಿನ ಕಿರಿಮಂಜೇಶ್ವರದÀ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಹಿರಿಯ ಶಿಕ್ಷಕ ಯು.ಹೆಚ್.ರಾಜಾರಾಮ್ ಭಟ್ ಧ್ವಜಾರೋಹಣವನ್ನು ನೆರವೇರಿಸಿದರು. ಈ ದಿನ ಎಲ್ಲಾ ಹುತಾತ್ಮರಾದ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರೀಸಲಾಯಿತು.
ಈ ಸಂದರ್ಭದಲ್ಲಿ ಸಂಚಾಲಕ ಶಂಕರ ಪೂಜಾರಿ, ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ, ಸ¯ಹಾ ಸಮಿತಿಯ ಸದಸ್ಯರಾದ ಆರ್.ಕೆ.ಬಿಲ್ಲವ, ರಾಜೀವ ಶೆಟ್ಟಿ ಹಾಗೂ ಶಿಕ್ಷಕರು, ಬೋಧಕೇತರರು ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಬಿಜೂರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.