Saturday 10th, May 2025
canara news

ಮಂಗಳೂರು-ಮುಂಬಯಿ ಬಸ್ ಸೇವೆ ಆರಂಭಿಸಿದ ಆನಂದ್ ಟ್ರಾವೆಲ್ಸ್

Published On : 22 Aug 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.18: ಜಾಗತಿಕವಾಗಿ ತಾಂಡವವಾಡುತ್ತಿರುವ ಕೊರೋನಾ ಮಹಾಮಾರಿ (ಕೋವಿಡ್ ಸಾಂಕ್ರಾಮಿಕ ರೋಗ)ಯಿಂದ ಕಳೆದ ಸುಮಾರು ಐದು ತಿಂಗಳುಗಳಿಂದ ಸಾರ್ವಜನಿಕವಾಗಿ ಸ್ಥಗಿತಗೊಂಡಿದ್ದ ಅಂತರ್‍ರಾಜ್ಯ ಬಸ್ ಸೇವೆ ಇದೀಗ ಪುನಾರಂಭ ಗೊಂಡಿದ್ದು ಸದ್ಯ ಮುಂಬಯಿ ಮಂಗಳೂರು ನಡುವಿನ ಬಸ್ ಪ್ರಯಾಣ ಸೇವೆಗೆ ಆನಂದ್ ಟ್ರಾವೆಲ್ಸ್ ಕೂಡ ಬಸ್ಸುಗಳನ್ನು ರಸ್ತೆಗಿಳಿಸಿದೆ.

ಕೇಂದ್ರ ಸರಕಾರದ ಆದೇಶದಂತೆ ಸದ್ಯ ಕೇವಲ ಆನಂದ್ ಟ್ರಾವೆಲ್ಸ್ ತಮ್ಮ ಹವಾನಿಯಂತ್ರಣವಲ್ಲದ (ನಾನ್ ಎಸಿ ಸ್ಲೀಪರ್) ಬಸ್‍ಗಳನ್ನು ಸೇವೆಗಿಳಿಸಿದ್ದು, ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆಗಾಗಿ ಬಸ್‍ವೊಂದರಲ್ಲಿ ಕೇವಲ 20 ಪ್ರಯಾಣಿಕರಿಷ್ಟೇ ಅವಕಾಶ ಒದಗಿಸುತ್ತಿದೆ. ಸದ್ಯ ದಿನಂಪ್ರತಿ ಮಂಗಳೂರು ಮಿಲಾಗ್ರಿಸ್‍ನಿಂದ ಪ್ರತೀದಿನ ಮಧ್ಯಾಹ್ನ 12.00 ಗಂಟೆಗೆ ಪ್ರಯಾಣ ಆರಂಭಿಸಿ ಮೂಡಬಿದ್ರೆ, ಕಾರ್ಕಳ, ಉಡುಪಿ, ಕುಂದಾಪುರ, ಭಟ್ಕಳ, ಬೆಳಗಾಂ ಮಾರ್ಗವಾಗಿ ಪುಣೆ, ಲೋನಾವಳ, ನವಿ ಮುಂಬಯಿ, ಚೆಂಬೂರು, ಸಯಾನ್, ಅಂಧೇರಿ, ಬೋರಿವಿಲಿ, ದಹಿಸರ್ ಮಾರ್ಗವಾಗಿ ಬೆಳಿಗ್ಗೆ ವಿೂರಾರೋಡ್ (ಸೀತಲ್‍ನಗರ್) ಸೇರಲಿದೆ ಅಂತೆಯೇ ಪೂರ್ವಾಹ್ನ 10.30 ಗಂಟೆಗೆ ವಿೂರಾರೋಡ್ (ಸೀತಲ್‍ನಗರ್)ನಿಂದ ಹೊರಟು ಮಧ್ಯಾಹ್ನ 12.00 ಗಂಟೆಗೆ ಸಯಾನ್‍ಗೆ ತಲುಪಿ ಅದೇ ಮಾರ್ಗವಾಗಿ ಮಾರನೇ ದಿನ ಬೆಳಿಗ್ಗೆ ಮಂಗಳೂರು ಸೇರಲಿದೆ.

ಪ್ರಯಾಣಿಕರು ಕಟ್ಟುನಿಟ್ಟಾಗಿ ಸರಕಾರದ sevasindhu ಇ-ಪಾಸ್ ಹೊಂದಿರ ತಕ್ಕದ್ದು ಆದ್ದರಿಂದ ಪ್ರಯಣಿಕರ ಅನುಕೂಲಕ್ಕಾಗಿ ಟಿಕೇಟು ಕಾಯ್ದಿರಿಸುವ ಸಮಯ ಪ್ರತೀಯೋರ್ವ ಪ್ರಯಾಣಿಕ ಪ್ರತ್ಯೇಕವಾಗಿ ತಮ್ಮ ಆಧಾರ್‍ಕಾರ್ಡ್, ಉಭಯ ವಾಸಗಳ ಸಂಪೂರ್ಣ ವಿಳಾಸ ಮತ್ತು ಮೊಬಾಯ್ಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಷರತ್ತುಗಳ ಅನ್ವಯನುಸಾರ ಸೇವಾಸಿಂಧೂ ಇ-ಪಾಸ್‍ನ್ನು ಟ್ರಾವೆಲ್ಸ್ ಒದಗಿಸುವ ವ್ಯವಸ್ಥೆ ಮಾಡುತ್ತಿದೆ. ಪಾರ್ಸೆಲ್ ಸೇವೆಯನ್ನೂ ಸ್ವೀಕರಿಸಲಾಗುವುದು ಎಂದು ಆನಂದ್ ಟ್ರಾವೆಲ್ಸ್‍ನ ವ್ಯವಸ್ಥಾಪಕ ಮ್ಯಾಥ್ಯೂ ಡಿಸಿಲ್ವಾ ಬ್ರಹ್ಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಟಿಕೇಟು ಬುಕ್ಕಿಂಗ್‍ಗಾಗಿ ತಮ್ಮ ಸಮೀಪದ ಬಸ್ ಏಜೆಂಟರನ್ನು ಅಥವಾ ಆನಂದ್ ಟ್ರಾವೆಲ್ಸ್‍ನ ಮಂಗಳೂರು ಯಾ ಮುಂಬಯಿ ಇಲ್ಲಿನ ಕೆನರಾ ಪಿಂಟೊ ಕಛೇರಿಗಳನ್ನು ಅಥವಾ (0824) 2447737 ಅಥವಾ 2446737 (ಮಂಗಳೂರು) 9821664359 ಯಾ 7977223039 ಅಥವಾ 9972210035 (ಮುಂಬಯಿ) ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here