ದೇಶದ ಅಭಿವೃದ್ಧಿಗೆ ಪ್ರತಿಯೋರ್ವ ಪ್ರಜೆ ಶ್ರಮಿಸÀಬೇಕು : ಆಶಿಕ್ ಕುಕ್ಕಾಜೆ
ಮುಂಬಯಿ (ಆರ್‍ಬಿಐ), ಆ.17: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‍ಐಒ) ಪಾಣೆಮಂಗಳೂರು ಶಾಖೆಯ ವತಿಯಿಂದ ಪಾಣೆಮಂಗಳೂರು ಬಸ್ ನಿಲ್ದಾಣದ ಬಳಿ ರಾಷ್ಟ್ರದ 74ನೇ ಸ್ವಾತಂತ್ರೊ ್ಯೀತ್ಸವ ಸಂಭ್ರಮಿಸಲ್ಪಟ್ಟಿತು.
ಮುಖ್ಯ ಅತಿಥಿüಯಾಗಿ ಭಾಗವಹಿಸಿದ ಸಮಾಜಿಕ ಸೇವಕ ಆಶಿಕ್ ಕುಕ್ಕಾಜೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡುತ್ತಾ, ನಮ್ಮ ದೇಶದ ಸ್ವತಂತ್ರ ್ಯಗೊಳ್ಳಲು ಹಿರಿಯ ನಾಯಕರು ಹಗಲಿರುಳು ಹೋರಾಡಿ ಪ್ರಾಣಾರ್ಪಣೆಗೈದಿದ್ದು ಅವರ ಶ್ರಮವು ವ್ಯರ್ಥವಾಗಿಲ್ಲ. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೋರ್ವ ಪ್ರಜೆಯು ತಮ್ಮಿಂದಾದ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಸಂಚಾಲಕರಾದ ಮುಖ್ತಾರ್ ಅಹ್ಮದ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು.
ಅತಿಥಿüಗಳು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾಥಿರ್üಗಳನ್ನು ಸನ್ಮಾನಿಸಿದರು ಹಾಗೂ ಎಸ್‍ಐಒ ಹಸಿರು ಕರಾವಳಿ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಅಲ್ಲದೇ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಎಸ್‍ಐಒ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಅಧ್ಯಕ್ಷ ಮುಸ್ತಫಾ ಎಂ.ಹೆಚ್ ಹಾಗೂ ಎಸ್.ಐಓ ಪಾಣೆಮಂಗಳೂರು ಘಟಕಾಧ್ಯಕ್ಷ ತಮೀಝ್ ಅಲಿ, ಹೆಚ್‍ಆರ್‍ಎಸ್‍ನ ಕ್ಯಾಪ್ಟನ್ ಸತ್ತಾರ್ ಗೂಡಿನಬಳಿ, ಎಸ್‍ಐಒ ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಅಝ್ಹರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಸಲ್ವಾನ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.