Saturday 10th, May 2025
canara news

ಬಸ್ಸುಗಳನ್ನು ಸ್ಯಾನಿಟೈಜರ್ ಗೊಳಿಸಿ ಸೋಂಕು ಮುಕ್ತವಾಗಿಸಿ ಸೇವೆಗೆ ಸನ್ನದ್ಧ

Published On : 22 Aug 2020   |  Reported By : Rons Bantwal


ಕೆನರಾ ಪಿಂಟೋ ಬಸ್‍ಗಳ ಮಂಗಳೂರು ಮುಂಬಯಿ ಪುನಾರಂಭ

ಮುಂಬಯಿ, ಆ.22: ಅಂತರ್ ರಾಜ್ಯ ಪ್ರವಾಸಿಗರ ಸಂಚಾರ ಸೇವೆಯಲ್ಲಿ ಸುಮಾರು ಏಳು ದಶಕಗಳ ನಿರಂತರ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಹೆಸರಾಂತ ಮತ್ತು ಪ್ರತಿಷ್ಠಿತ ಕೆನರಾ ಪಿಂಟೋ ಟ್ರಾವೆಲ್ಸ್ ಕೋವಿಡ್ ನಿಮಿತ್ತ ಸೇವೆಯನ್ನು ಸ್ಥಗಿತಗೊಳಿಸಿದ್ದು ಮತ್ತೆ ಇದೀಗ ತನ್ನ ಸೇವೆ ಪುನಾರಂಭಿಸಿದೆ. ಇದೇ ಆ.23ನಿಂದ ಮುಂಬಯಿ ಮಂಗಳೂರು ಮುಂಬಯಿ ಸೇವೆ ಆರಂಭಿಸಿದೆ.

ಸ್ವಸ್ಥ್ಯ ಸಮಾಜದ ಮತ್ತು ಪ್ರತಿಯೊಬ್ಬ ನಾಗರೀಕರ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಂದು ಪ್ರಯಾಣದ ಮೊದಲು ಬಸ್‍ನ ಚಾಲಕ ಮತ್ತು ಕಂಡಕ್ಟರ್ ಅವರ ತಾಪಮಾನ ಪರಿಶೀಲಿಸಲಾಗುತ್ತದೆ. ಅಂತೆಯೇ ಪ್ರಮಾಣೀಕೃತ ಸುರಕ್ಷತಾ ಮುಖವಾಡ ಧರಿಸಿ ಚಾಲಕ ಮತ್ತು ಕಂಡಕ್ಟರ್ ಅವರನ್ನು ಸೇವೆಗೆ ಅಣಿಗೊಳಿಸಲಾಗಿ ಪ್ರತಿ ಪ್ರಯಾಣದ ನಂತರ ಎಲ್ಲಾ ಬಸ್ಸುಗಳನ್ನು ಸ್ಯಾನಿಟೈಜರ್ ಮೂಲಕ ಸೋಂಕುರಹಿತ ಗೊಳಿಸಲಾವುದು. ಪ್ರಯಾಣದುದ್ದಕೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುವುದು. ಉಟೋಪಚಾರದ ವೇಳೆ (ಬೋರ್ಡಿಂಗ್) ತಾಪಮಾನ ಪರಿಶೀಲನೆ ಮತ್ತು ಉತ್ತಮ ಗುಣಮಟ್ಟದ ಸ್ಯಾನಿಟೈಜರ್ ಬಳಸಿ ಪ್ರಯಾಣಿಕರಲ್ಲಿ ಸೋಂಕು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಅನುಭವ ಒದಗಿಸಲು ಸಿಬ್ಬಂದಿಗಳು ನಮ್ಮ ಕೋವಿಡ್ ಯೋಧರು ಸಹಕರಿಸಲಿದ್ದಾರೆ ಎಂದು ಕೆನರಾ ಪಿಂಟೊ ಸಂಸ್ಥೆಯ ಮಾಲೀಕ ಸುನೀಲ್ ಪಾಯ್ಸ್ ತಿಳಿಸಿದ್ದಾರೆ.

ದೈನಂದಿನವಾಗಿ ಬಸ್‍ಗಳು ಮಂಗಳೂರು ಮುಂಬಯಿ ಮಂಗಳೂರು ಮಾರ್ಗವಾಗಿ ಕೇವಲ ತಮ್ಮ ಹವಾನಿಯಂತ್ರಣವಲ್ಲದ (ನಾನ್‍ಎಸಿ ಸ್ಲೀಪರ್) ಬಸ್‍ಗಳ ಸಂಚಾರ ಸೇವೆ ಆರಂಭಿಸಿದೆ. ಪ್ರಯಣಿಕರ ಅನುಕೂಲಕ್ಕಾಗಿ ಮಂಗಳೂರು ಮಿಲಾಗ್ರಿಸ್‍ನಿಂದ ಪೂರ್ವಾಹ್ನ 11.30 ಗಂಟೆಗೆ ಪ್ರಯಾಣ ಬೆಳೆಸಿ ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಬೆಳಗಾಂ ಮಾರ್ಗವಾಗಿ ಪುಣೆ, ಚೆಂಬೂರು, ಸಯಾನ್, ಅಂಧೇರಿ, ಬೋರಿವಿಲಿ, ದಹಿಸರ್ ಮಾರ್ಗವಾಗಿ ವಿೂರಾರೋಡ್ (ಸೀತಲ್‍ನಗರ್) ಸೇರಲಿದೆ ಅಂತೆಯೇ ಬೆಳಿಗ್ಗೆ 7.00 ಗಂಟೆಗೆ ವಿೂರಾರೋಡ್‍ನಿಂದ ಹೊರಟು ಅದೇ ಮಾರ್ಗವಾಗಿ ಮಂಗಳೂರು ಸೇರಲಿದೆ. ಸರಕಾರದ sevಚಿsiಟಿಜhu ಇ-ಪಾಸ್ ಪ್ರಯಾಣಿಕರಿಗೆ ಅಗತ್ಯವಾಗಿದ್ದು ಪ್ರಯಣಿಕರ ಈ ಸೇವೆಗೆ ಟಿಕೇಟು ಕಾಯ್ದಿರಿಸುವ ಸಮಯ ಪ್ರತೀಯೋರ್ವ ಪ್ರಯಾಣಿಕ ಪ್ರತ್ಯೇಕವಾಗಿ ತಮ್ಮ ಆಧಾರ್‍ಕಾರ್ಡ್, ಉಭಯ ವಾಸಸ್ಥಳಗಳ ಸಂಪೂರ್ಣ ವಿಳಾಸ ಮತ್ತು ಮೊಬಾಯ್ಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಒದಗಿಸ ತಕ್ಕದ್ದು. ಷರತ್ತುಗಳ ಅನ್ವಯನುಸಾರ ಸೇವಾಸಿಂಧೂ ಇ-ಪಾಸ್‍ನ್ನು ಟ್ರಾವೆಲ್ಸ್ ಒದಗಿಸುವ ವ್ಯವಸ್ಥೆ ಮಾಡಲಿದೆ. ಪಾರ್ಸೆಲ್ ಸೇವೆಯನ್ನೂ ಸ್ವೀಕರಿಸಲಾಗುವುದು.

ಟಿಕೇಟುಗಳಿಗಾಗಿ ಮುಂಬಯಿ ಕಚೇರಿ (022 24224585, 8097037466) ಅಥವಾ ಮಂಗಳೂರು (0824) 2422646, 9008893799 ಈ ಸಂಖ್ಯೆಗಳಿಗೆ ಕರೆ ಮಾಡಿ ಅನುಕೂಲಕರ ಸೀಟುಗಳನ್ನು ಕಾಯ್ದಿರಿಸಿ ಪ್ರಯಾಣ ನಡೆಸುವಂತೆ ಮತ್ತು ಸರಕಾರಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಪ್ರತಿಯೋರ್ವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿ ಸಹಕರಿಸುವಲ್ಲಿ ಬಸ್ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸಿ ಸುಖಕರ ಪ್ರಯಾಣಕ್ಕೆ ಸಹಕರಿಸುವಂತೆ ಸುನೀಲ್ ಪಾಯ್ಸ್ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here