Saturday 5th, July 2025
canara news

ಡೋಲ್ಫಿ ಮಾರ್ಟಿಸ್ ಕೆಮ್ಮಣ್ಣು ನಿಧನ

Published On : 23 Aug 2020   |  Reported By : Rons Bantwal


ಮುಂಬಯಿ, ಆ.23: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್‍ಮೆಂಟ್ ನಿವಾಸಿ ಡೋಲ್ಫಿ ಮಾರ್ಟಿಸ್ (60.) ತೀವ್ರ ಹೃದಯಾಘಾತದಿಂದ ಇಂದಿಲ್ಲಿ ಭಾನುವಾರ ಮುಂಜಾನೆ ದೀಪಕ್ ನಿವಾಸ್‍ನಲ್ಲಿ ನಿಧನರಾದರು.

ಉಡುಪಿ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕಂಬ್ಳತೋಟ ಮೂಲತಃ ಡೋಲ್ಫಿ ಮಾರ್ಟಿಸ್ ಇವರ ಧರ್ಮಪತ್ನಿ (ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ದರ್ಬೆ ಮೂಲದ ಟ್ರೆಸ್ಸಿ ವೇಗಸ್ ಕಳೆದ ಜೂನ್‍ನಲ್ಲಷ್ಟೇ ಅಕಾಲಿಕವಾಗಿ ಮೃತರಾಗಿದ್ದರು. ಮಹಾನಗರದ ಹೆಸರಾಂತ ಟೂರ್ಸ್ ಎಂಡ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ದೀರ್ಘಾವಧಿಯಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮೃತರು ಇದೀಗ ಏಕೈಕ ಸುಪುತ್ರ ಟ್ರೆವರ್ ಮಾರ್ಟಿಸ್ ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ಸೋಮವಾರ ಹೋಲಿ ಫ್ಯಾಮಿಲಿ ಇಗರ್ಜಿ, ಚಕಲಾ ಇಲ್ಲಿ ನೆರವೇರಿಸಲು ನಿರ್ಧಾರಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here