Saturday 10th, May 2025
canara news

*ಪ್ರಕೃತಿಯ ದೇಣಿಗೆಯಾದ ಸಿಹಿ ಕಬ್ಬನ್ನು "ಗಣೇಶ ಚತುರ್ಥಿ" ಮತ್ತು "ತೆನೆ ಹಬ್ಬ" ದ ಸುಸಂದರ್ಭ "ಪ್ರೀತಿ" ಹಂಚುವ ಅಸ್ತ್ರವನ್ನಾಗಿ ಬಳಸಿ ಮನುಷ್ಯತ್ವ ಮೆರೆದ "ಹ್ಯುಮಾನಿಟಿ" !*

Published On : 25 Aug 2020   |  Reported By : Roshan Kinnigoli


ಕೊರೊನ ಕಾಟದಿಂದಾಗಿ ಸಂಪೂರ್ಣ ನಷ್ಟದ ಭೀತಿಯಲ್ಲಿದ್ದರು ಬಳಕುಂಜೆಯ ಸುಮಾರು 45 ಕುಟುಂಬದ ಕಬ್ಬು ಬೆಳೆಗಾರರು. ಸರ್ಕಾರ ಗಣೇಶೋತ್ಸವ ಆಚರಣೆಗೆ ಷರತ್ತು ಬದ್ದ ಅನುಮತಿ ನೀಡಿದ್ದರೂ ಈ ವರ್ಷ ಕಬ್ಬು ಮಾರಾಟ ಲಾಭದಯಕವಾಗಿರಲಿಲ್ಲ. ಕೆಲವರಿಗೆ 'ಅಸಲು' ಬೆಲೆನು ದೊರೆತಿಲ್ಲ. ರೈತರ ಸಂಕಷ್ಟ ಅರಿತ "ಹ್ಯುಮಾನಿಟಿ ಟ್ರಸ್ಟ್" ರೈತರಿಗೆ ಶೀಘ್ರ ಬೆಂಬಲ ನೀಡಿತು. ಹತ್ತು ಸಾವಿರ ಕಬ್ಬನ್ನು ಹ್ಯುಮಾನಿಟಿ ಸಂಸ್ಥೆ ಖರೀದಿಸಿದೆ. ಈಗಾಗಲೇ ಸುಮಾರು ಐದು ಸಾವಿರ ಕಬ್ಬನ್ನು ವಿವಿಧ ಅನಾಥಾಶ್ರಮಗಳಿಗೆ ಮತ್ತು ಬಡ ಜನರಿಗೆ ಧರ್ಮಾರ್ಥ ಹಂಚುವ ಮೂಲಕ ಗಣೇಶ ಚತುರ್ಥಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದೆ. ಇದರಿಂದಾಗಿ ಅತ್ತ ರೈತರು ಸ್ವಲ್ಪ ಚೇತರಿಕೆ ಪಡೆದರೆ ಇತ್ತ ಕೋರೋಣದಿಂದ ಕಂಗಾಲಾದ ಬಡವರಿಗೆ "ಹಬ್ಬ"ಕ್ಕೆ ಧರ್ಮಾರ್ಥ ಕಬ್ಬು ದೊರೆತಿದೆ. ದಾನಿಗಳ ಮೂಲಕ ನೇರವಾಗಿ ರೈತರಿಂದ ಕಬ್ಬನ್ನು ಖರೀದಿಸಿ ರೈತರ ಸಮಸ್ಯೆಗೆ "ಹ್ಯುಮಾನಿಟಿ ಸಂಸ್ಥೆ" ವಿಶಿಷ್ಟ ರೀತಿಯಲ್ಲಿ ಸ್ಪಂದಿಸಿ ಜನರಿಗೊಂದು ಸಂದೇಶ ನೀಡಿದೆ, ಸಮಾಜಕ್ಕೆ ಪ್ರೇರಣೆಯಾಗಿದೆ. ಇದರ ಶ್ರೇಯಸ್ಸು ಹ್ಯುಮಾನಿಟಿಯ "ದಾನಿ ಅಭಿಮಾನಿ"ಗಳಿಗೆ ಸಲ್ಲುತ್ತದ್ದೆ.

*(ಬೆಳ್ಮಣ್ಣು, ಜಂತ್ರ, ಬೋಳ, ನಂದಳಿಕೆ, ಶಿರ್ವಾ - ಮಂಚಕಲ್, ಸಾಲೆತ್ತೂರು - ವಿಟ್ಲ, ಮೂಡಬಿದ್ರೆಯ ಅಲಂಗಾರು ಆಶ್ರಯ ಕಾಲೊನಿ ಮತ್ತು ಒಂಟಿಕಟ್ಟೆಯ ಜನತಾ ಕಾಲೊನಿ, ಬಂಟ್ವಾಳ ಪರಿಸರದ ಹಲವು ಬಡ ಗ್ರಾಮಸ್ಥರಿಗೆ "ಉಚಿತ ಕಬ್ಬು" ದೊರೆತಿದೆ.*

*ಮುಲ್ಕಿಯ "ಮೈಮುನ ಫೌಂಡೇಷನ್‌ " ಆಶ್ರಮ, ಮೂಡಬಿದಿರೆಯ "ಮೌಂಟ್ ರೊಸಾರಿ" ಆಶ್ರಮ ಮತ್ತು ಶಂಕರಪುರದ "ವಿಶ್ವಾಸದ ಮನೆ" ಆಶ್ರಮಕ್ಕೆ ಕಬ್ಬನ್ನು ತಲುಪಿಸಲಾಗಿದೆ.)*




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here