Saturday 10th, May 2025
canara news

ಗೋರೆಗಾಂವ್ ಕರ್ನಾಟಕ ಸಂಘ ಸಂಭ್ರಮಿಸಿದ ಸ್ವಾತಂತ್ರ್ಯ ದಿನಾಚರಣೆ

Published On : 29 Aug 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.27: ಗೋರೆಗಾಂವ್ ಕರ್ನಾಟಕ ಸಂಘವು ಕಳೆದ ಹಲವಾರು ವರ್ಷಗಳಿಂದ ಆಚರಿಸಿ ಬಂದಿರುವಂತೆ ಈ ಬಾರಿಯೂ ರಾಷ್ಟ್ರದ ಸ್ವಾತಂತ್ರ ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಿತು.

ಗೋರೆಗಾಂವ್ ಪರಿಸರದ ಮುನ್ಸಿಪಾಲ್ ಕನ್ನಡ ಶಾಲೆ, ಸರಸ್ವತಿ ನೈಟ್ ಹೈಸ್ಕೂಲ್‍ನ ಮಕ್ಕಳಿಗೆ ಪ್ರತಿ ವರ್ಷ ಶಾಲಾ ಪರಿಕರಗಳನ್ನು ನೀಡುತ್ತಾ ಬಂದಿದೆ. ಈ ವರ್ಷ ಕೋವಿಡ್ ಸಾಂಕ್ರಮಿಕ ಪಿಡುಗುನಿಂದಾಗಿ ಅನೇಕ ಬಡ ಕುಟುಂಬಗಳು ಆಥಿರ್üಕವಾಗಿ ಬಳಲುವಂತಾಗಿದ್ದು ಇದಕ್ಕೆ ಸ್ಪಂದಿಸಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಗೌ| ಪ್ರ| ಕಾರ್ಯದರ್ಶಿ, ಪಾರುಪತ್ಯಗಾರರು ಹಾಗೂ ಕಾರ್ಯಕಾರಿ ಸಮಿತಿ ಸಹಯೋಗದಿಂದ ಪ್ರಸ್ತುತ ವರ್ಷ ಆಹಾರ ಸಾಮಗ್ರಿಗಳನ್ನು ನೀಡಿ ಪೆÇ್ರೀತ್ಸಾಹಿಸಿದ್ದು ಸಂಘದ ಸದಸ್ಯರಿಂದ ಸಂಗ್ರಹಿಸಲ್ಪಟ್ಟ ದೇಣಿಗೆಯಿಂದ ಎರಡೂ ಶಾಲೆಯ ಸುಮಾರು 40 ಮಕ್ಕಳ ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಪಾರುಪತ್ಯಗಾರರಲ್ಲೋರ್ವರಾದ ಪಯ್ಯಾರು ರಮೇಶ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಗುಣೋದಯ ಐಲ್, ಜೊತೆ ಕಾರ್ಯದರ್ಶಿಗಳಾದ ವಿಶ್ವನಾಥ ಶೆಟ್ಟಿ ಮತ್ತು ಸುಮಿತ್ರಾ ಆರ್. ಕುಂದರ್, ಸಂಘದ ಮಾಜಿ ಕಾರ್ಯದರ್ಶಿ ಸಚ್ಚೀಂದ್ರ ಕೋಟ್ಯಾನ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರಿತಾ ಎಸ್.ನಾಯಕ್, ಕಾರ್ಯಕಾರಿ ಸಮಿತಿ ಸದಸ್ಯೆ ಸುಚಲತಾ ಪೂಜಾರಿ ಉಪಸ್ಥಿತರಿದ್ದು ಆಹಾರ ಸಾಮಗ್ರಿಗಳನ್ನು ಶಾಲೆಗಳಲ್ಲಿ ವಿತರಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here