Saturday 10th, May 2025
canara news

ಶಾಂತಾರಾಮ ಮೋಗವೀರ ಆರೋಗ್ಯ ಸಮಸ್ಯೆಗೆ ಆಥಿ೯ಕ ನೆರವು ಕೋರಿಕೆ

Published On : 30 Aug 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.29: ರಕ್ತದಾನ ಸೇರಿದಂತೆ ಹಲವಾರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಹಲವಾರು ಭಾಗದಲ್ಲಿ ಸನ್ಮಾನಗಳನ್ನು ಪಡೆದ ಬಿದ್ಕಲ್ ಕಟ್ಟೆ ಬಳಿಯ ಹಾರ್ರ್ದ್‍ಳ್ಳಿ ಮಂಡಳ್ಳಿಯ ಜನತಾ ಕಾಲೋನಿಯಲ್ಲಿ ವಾಸ ಮಾಡುವ ಶಾಂತಾರಾಮ ಮೋಗವೀರ ಇದೀಗ ಆರೋಗ್ಯ ಸಮಸ್ಯೆಯಿಂದ ಕಂಗಾಲಾಗಿ ತೀರಾ ಆಥಿ೯ಕಸಂಕಷ್ಟದಲ್ಲಿದಾರೆ.

ಕುಂದಾಪುರದ ಚಿನ್ಮಯೀ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಯಿಸುತ್ತಿದ್ದ ಅವಧಿಯಲ್ಲಿ ಅಲ್ಲಿ ಹೆರಿಗೆ ಮತ್ತು ಹಲವಾರು ಖಾಯಿಲೆಯವರು ರಕ್ತದ ಅವಶ್ಯಕಥೆ ಇದ್ದಾಗ ತನ್ನ ಓ ಪಾಸಿಟಿವ್ ರಕ್ತದಾನ ಮಾಡುತ್ತಿದ್ದು ಈತನಕ ನಾನಾ ಸಂಘ ಸಂಸ್ಥೆಯ ರಕ್ತದಾನ ಶೀಭಿರದಲ್ಲಿ 20 ಬಾರಿಗಿಂತಲೂ ಹೆಚ್ಚು ರಕ್ತದಾನ ಮಾಡಿದ 39 ವರ್ಷದ ಶಾಂತಾರಾಮರು ಇದೀಗ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ.

ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಯಿಸುತ್ತಿದ್ದ ಇವರ ಆರೋಗ್ಯ ತಪಾಸಣೆಯ ಸಮಯದಲ್ಲಿ ಕಿಡ್ನಿ ಸಮಸ್ಯೆ ಕಂಡುಬಂದು ಕೆಲ ಸಮಯದಿಂದ ಮಣಿಪಾಲದಲ್ಲಿ ಚಿಕಿತ್ಸೆಗೆ ಹೋಗುತ್ತಿದ್ದಾರೆ. ಇದೀಗ ಮನೆಯಲ್ಲಿದ್ದು ಪ್ರತೀ ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಮಣಿಪಾಲ ಮತ್ತು ಕುಂದಾಪುರಕ್ಕೆ ಚಿಕಿತ್ಸೆಗೆ ಹೋಗಲು ಇದೀಗ ಆಥಿರ್üಕವಾಗಿ ಹೆಣಗಾಡುತ್ತಿದ್ದಾರೆ.

ಇವರ ಸಮಾಜ ಸೇವೆ ಮತ್ತು ಸೇವಾಗುಣವನ್ನು ಕಂಡು ಹಲವಾರು ಸಂಘ ಸಂಸ್ಥೆಗಳು ಮತ್ತು ಅನೇಕ ಗಣ್ಯರು ಈ ಹಿಂದೆ ಅವರನ್ನು ಗೌರವಿಸಿದ್ದಾರೆ. ತಾಯಿ, ಪತ್ನಿ ಮತ್ತು 8ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಗಳೊಂದಿಗೆ ಬದುಕು ಕಟ್ಟಿಕೊಂಡ ಇವರೀಗೆ ಸಂಭಂದಿಯವರ ಕಿಡ್ನಿ ಸರಿ ಹೊಂದದ ಕಾರಣ ದಾನಿಗಳಿಂದ ಹಣವನ್ನು ಮತ್ತು ಕಿಡ್ನಿ ನೀಡುವವರ ನೀರೀಕ್ಷೆಯಲ್ಲಿದ್ದಾರೆ.

ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ಹಣದ ಅವಷ್ಯಕಥೆ ಇವರ ಚಿಕಿತ್ಸೆಗೆ ಬೇಕಾಗಿದ್ದು ತೀರಾ ಸಂಕಷ್ಟದಲ್ಲಿ ಇರುವ ಶಾಂತಾರಾಮ ಇವರಿಗೆ ನೆರವು ನೀಡುವವರು ಇವರ ಬ್ಯಾಂಕ್ ಖಾತೆ ಸಿಂಡಿಕೇಟ್ ಬ್ಯಾಂಕ್, ಬಿದ್ಕಲ್ ಕಟ್ಟೆ ಖಾತೆ ಸಂಖ್ಯೆ 01622250002856 ಐಎಫ್‍ಎಸ್‍ಇ ಕೋಡ್ 0000162 ಆಗಿದ್ದು ಸಹೃದಯಿ ದಾನಿಗಳು ನೀಡಿ ಸಹಕರಿಸುವಂತೆ ಕುಟುಂಬಸ್ಥರು ಈ ಮೂಲಕ ಕೋರಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here