Saturday 5th, July 2025
canara news

ತುಂಗಾ ಆಸ್ಪತ್ರೆಗಳ ಸ್ಥಾಪಕ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ ನಿಧನ

Published On : 02 Sep 2020   |  Reported By : Rons Bantwal


ಮುಂಬಯಿ (ಆರ್ ಬಿಐ) ಸೆ.01: ಬೃಹನ್ಮುಂಬಯಿ ಇಲ್ಲಿನ ತುಂಗಾ ಆಸ್ಪತ್ರೆಗಳ ಸ್ಥಾಪಕ ಹಾಗೂ ಟ್ರಸ್ಟಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ (72.) ಕಳೆದ ಸೋಮವಾರ
ಅಲ್ಪಕಾಲಿಕ ಅನಾರೋಗ್ಯದಿಂದ ನಿಧನರಾದರು.

ಬೆಳ್ತಂಗಡಿ ತಾಲೂಕು ಮಡಂತ್ಯಾರು ಮಾಲಾಡಿ ಹೊಸಮನೆ ಮನೆತನದ ಬೋಜ ಶೆಟ್ಟಿ ಇವರು ಪತ್ನಿ ವಸಂತಿ (ತುಂಗಾ) ಬಿ.ಶೆಟ್ಟಿ, ಮಕ್ಕಳಾದ ಹರಿಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ, ಡಾ. ಸತೀಶ್ ಶೆಟ್ಟಿ, ಪೂಜಾ ಉಮೇಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

ಗಲ್ಫ್, ಮುಂಬಯಿ ಗಳಲ್ಲೂ ಶ್ರಮಿಸಿದ ಇವರು ವಿದ್ಯಾರ್ಹತೆ ಮಹತ್ವ ಹಾಗೂ ದೂರದರ್ಶಿತ್ವವಿರಿಸಿ ಅಪಾರ ಶಿಕ್ಷಣಪ್ರೇಮಿ ಆಗಿದ್ದು ಸಕ್ರಿಯವಾಗಿ ತಮ್ಮನ್ನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಜನಾನುರೆಣಿದ್ದರು.

ಮಡಂತ್ಯಾರು ವಲಯ ಬಂಟರ ಸಂಘ ರೂಪಿಸಿ ಅದರ ಸ್ಥಾಪಕ ಗೌರವಾಧ್ಯಕ್ಷರಾಗಿ ಹುಟ್ಟೂರಮಡಂತ್ಯಾರು ಆಸುಪಾಸಿನ ಹತ್ತಾರು ಸಂಘ-ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳ ಕೊಡುಗೈದಾನಿ ಆಗಿ ಪ್ರೋತ್ಸಾಹಿಸುತ್ತಿದ್ದರು. ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದಲ್ಲೂ ಆಸಕ್ತಿ ಹೊಂದಿ ಕಂಬಳ ಕೋಣಗಳನ್ನು ಸಾಕಿ ಕಂಬಳಕ್ರೀಡೆಯಲ್ಲಿ ಸ್ವತಃ ಪಾಲ್ಗೊಳ್ಳುತ್ತಾ ಹಲವಾರು ಬಹುಮಾನಗಳಿಗೆ ಭಾಜನರಾಗಿದ್ದರು.

ಭೋಜ ಶಟ್ಟಿ ನಿಧನಕ್ಕೆ ಹಲವಾರು ಗಣ್ಯರು, ಮಹಾನಗರದ ವಿವಿಧ ಬಂಟರ ಸಂಸ್ಥೆಗಳ ಧುರೀಣರು, ತುಂಗಾ ಆಸ್ಪತ್ರೆಗಳ ವೈದ್ಯರು, ಸಿಬ್ಬಂಧಿ ವರ್ಗ ಸಂತಾಪ ಸೂಚಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here