Saturday 20th, April 2024
canara news

ಪಠ್ಯಪುಸ್ತಕದಲ್ಲಿ ಮಹಾವೀರ ಸ್ವಾಮಿ ಇತಿಹಾಸ-ಸಂದೇಶ ತಪ್ಪು ಸರಿ ಪಡಿಸಲು

Published On : 06 Sep 2020   |  Reported By : Rons Bantwal


ಕರ್ನಾಟಕ ಶಿಕ್ಷಣ ಸಚಿವರಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಕೆ

ಮುಂಬಯಿ (ಆರ್‍ಬಿಐ), ಸೆ.04: ನಮ್ಮ ದೇಶದ ಭಾರತಿ ಯ ಪ್ರಾಚೀನ ಧರ್ಮ ಗಳಲ್ಲಿ ಒಂದಾದ ಜೈನ ಧರ್ಮ ಮೂಲ ಭಾರತ ದೇಶದ ಅನಾದಿನಿದನ ಪ್ರಾಚೀನ ಧರ್ಮ ವೆಂದು ಚಿರ ಪರಿಚಿತ ವಾಗಿದೆ ಭಗವಾನ್ ವೃಷಭ ವಿಷ್ಣು ವಿನ ಅವತಾರ ಎಂದು ಸಹೋದರ ಧರ್ಮ ವೈದಿಕ ಹಿಂದೂ ಧರ್ಮ ಗ್ರಂಥ ಗಳಲ್ಲಿ ಉಲ್ಲೀಖಿ ತ ಗೊಂಡಿದೆ ಇದೀಗ ಶಿಕ್ಷಣ ಇಲಾಖೆ ಪಠ್ಯ ರಚನೆ ಸಮಿತಿ ಎಡವಟ್ಟಿ ನಿಂದ ಮಹಾವೀರ ಸ್ವಾಮಿ ಚರಿತ್ರೆ ಹಾಗೂ ಸಂದೇಶ ತಪ್ಪು ತಪ್ಪಾಗಿ ಮುದ್ರಿಸಲಾಗಿದೆ ಆದ್ದರಿಂದ ರಾಜ್ಯದ ದ್ವಿತೀಯ ಪಿಯುಸಿ ಚರಿತ್ರೆಯ ಪಠ್ಯದ (ಕನ್ನಡ ಭಾಷೆ) ಪುಸ್ತಕದಲ್ಲಿ ಮಹಾವೀರ ಸ್ವಾಮಿ ಇತಿಹಾಸ ಹಾಗೂ ಸಂದೇಶ ತಪ್ಪು ಸರಿ ಪಡಿಸಲು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಶ್ರೀ ಜೈನ ಮಠ ಮೂಡುಬಿದಿರೆ ಇದರ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅರಿಕೆ ಮಾಡಿದ್ದಾರೆ.

ಜೈನ ಧರ್ಮದ ಅದೆಷ್ಟೋ ಶಿಲ್ಪ ಕಲೆ ಸಾಹಿತ್ಯ ಸಂಸ್ಕೃತಿ ಕಲೆ ತನ್ನ ಸ್ವಂತಿಕೆ ಯ ಮೂಲಕ ಜನಪ್ರಿಯವಾಗಿದೆ ಇದೀಗ ಚರಿತ್ರೆ ಹಾಗೂ ಜೈನ ಧರ್ಮ ದ ಸಂದೇಶ ತಿರುಚಿ ನಮ್ಮ ಧರ್ಮ ಕ್ಕೆ ಅವಮಾನ, ಮಾಡಲಾಗಿದೆ ತಪ್ಪುಗ್ರಹಿಕೆ, ನಿಜ ವಿಚಾರಗಳ ತಿರುಚುವಿಕೆ ಮುಂತಾದವುಗಳ ಮೇಲೆ ಅಹಿಂಸಾತ್ಮಕ ಹೋರಾಟ ಮಾಡಿ ಎಚ್ಚೆತ್ತು ಕೊಳ್ಳಬೇಕಿದೆ ಎಂಬ ಅಭಿಪ್ರಾಯ ಸಮಾಜದಲ್ಲಿ ಮೂಡಿದೆ. ಪಠ್ಯದಲ್ಲಿರುವ ತಪ್ಪು ಮಾಹಿತಿಗಳನ್ನು ಸರಿ ಪಡಿಸಲೇಬೇಕು ಎಂಬ ಆಗ್ರಹವನ್ನು ರಾಜ್ಯದಾದ್ಯಂತ ವಿವಿಧ ಜೈನ ಸಂಘಟನೆಗಳು ಮಾಡಿದ್ದು ಮಠಾಧಿಪತಿಗಳಾದ ನಮಗೆಲ್ಲ ಸಮಾಜಕ್ಕೆ ಉತ್ತರಿಸಬೇಕಾಗಿ ಇರುದರಿಂದ ಸಜ್ಜನ ರಾಜಕಾರಣಿ ಯಾದ ತಾವು ಸೂಕ್ತ ನಿರ್ಧಾರ ಕೈಗೊಂಡು ಸಮಾಜ ದ ಮನವಿ ಯನ್ನು ಪುರಸ್ಕರಿಸಿ ತಪ್ಪು ಮಾಹಿತಿ ಉಳ್ಳ ಪಿಯುಸಿ ಕನ್ನಡ ಪುಸ್ತಕ ತಡೆ ಹಿಡಿಯಬೇಕು ಇದರಲ್ಲಿ ಇರುವ ತಪ್ಪುಗಳನ್ನು ಸಚಿವರ ಗಮನಕ್ಕೆ ಶ್ರೀಗಳು ತಂದಿದ್ದಾರೆ.

ಪಿಯುಸಿ 2ನೇ ವರ್ಷದ ಚರಿತ್ರೆ ಪುಸ್ತಕದಲ್ಲಿ ಕೆಲವು ವಾಕ್ಯಗಳು ಪಠ್ಯ ರಚನೆ ಸಮಿತಿಯಲ್ಲಿ ತಪ್ಪು ವಿಚಾರ ಅಳವಡಿಸಿ ಅಜ್ಞಾನ ತೋರಿಸಿದೆ ಪಠ್ಯ ರಚನಾ ಸಮಿತಿ ಪೂರ್ತಿಯಾಗಿ ವಿಷಯ ತಿಳಿಯದೇ ಕೆಲವೇ ಕೆಲವರ ವಿಚಾರಗಳನ್ನು ಒಟ್ಟುಗೂಡಿಸಿ ಪಠ್ಯಗಳನ್ನು ತಯಾರು ಮಾಡಿ ಭಾರತದ ಮುಂದಿನ ಪ್ರಜೆಗಳಾಗುವ ಮಕ್ಕಳ ತಲೆಗೆ ತಪ್ಪು ಸಂದೇಶಗಳನ್ನು ನೀಡುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು. ದ್ವಿತೀಯ ಪಿಯುಸಿ ಕನ್ನಡ ಪಠ್ಯದಲ್ಲಿ ಭಾರತದ ಇತಿಹಾಸ ಎಂಬ ವಿಚಾರದಲ್ಲಿ ಭಗವಾನ್ ಮಹಾವೀರರ ಬಗ್ಗೆ ಬಹಳ ತಪ್ಪು ವಿಚಾರದ ಪಠ್ಯ ಸಿದ್ಧವಾಗಿದೆ.

ಮಹಾವೀರರ ಜನ್ಮವು ಹಿಂದಿನ ಬಿಹಾರದ ವೈಶಾಲಿ, ಕುಂಡಲಪುರದಲ್ಲಿ ಆಯಿತು. 30ನೇ ವರ್ಷದಲ್ಲಿ ಮುನಿ ದೀಕ್ಷೆಯನ್ನು ಸ್ವೀಕರಿಸಿದರು. ಇವರಿಗೆ ಮದುವೆಯಾಗಿರಲಿಲ್ಲ. ಜಾತಿ ಸ್ಮರಣೆಯ ನಿಮಿತ್ತದಿಂದ ವೈರಾಗ್ಯ ಹೊಂದಿ ಮುನಿ ದೀಕ್ಷೆಯನ್ನು ಸ್ವೀಕರಿಸಿದರು. ತಂದೆ ತಾಯಿ ಇಬ್ಬರೂ ಮಹಾವೀರರ ದೀಕ್ಷಾ ಸಮಯದಲ್ಲಿ ಜೀವಂತವಾಗಿದ್ದರು. 12ವರ್ಷಗಳ ಕಾಲ ತಪಸ್ಸನ್ನು ಮಾಡಿದರು. ತದನಂತರ ಕೇವಲಜ್ಞಾನ ಪ್ರಾಪ್ತಿಯಾಯಿ ತು. 30 ವರ್ಷಗಳ ಕಾಲ ಧರ್ಮೋಪದೇಶ ಮಾಡುತ್ತಾ ಕ್ರಿ.ಪೂ 527 ರಲ್ಲಿ ನಿರ್ವಾಣ ಹೊಂದಿದರು. ಶ್ರಮಣ ಪರಂಪರೆ ಯ ಮುಂದುವರಿದ ಭಾಗವೇ ದಿಗಂಬರ ಹಾಗೂ ಶ್ವೇತಾಂಬರ ಪಂಥವಾಗಿದೆ. ಎರಡೂ ಪಂಗಡ ಏಕತೆಯಿಂದ ವಿಶ್ವದಾದ್ಯಂತ ಸುಮಾರು 60ಲಕ್ಷ ಸಂಖ್ಯೆ ಸಮುದಾಯವಿದೆ ಶ್ವೇತಾಂಬರರು. ಇವರು ಮೂಲತಃ ಉತ್ತರ ಭಾರತ ದ ಕೆಲವು ಪ್ರಾಂತ್ಯ ದಲ್ಲಿ ಹೆಚ್ಚಾಗಿ ಇರುವರು ದಿಗಂಬರ ರು ಮಹಾರಾಷ್ಟ್ರ ಕರ್ನಾಟಕ, ಮಧ್ಯ ಪ್ರದೇಶ, ಗುಜರಾತ್,ಉ. ಪ್ರ, ಅಸ್ಸಾಂ, ರಾಜಸ್ತಾನ್, ತಮಿಳು ನಾಡು, ಕೇರಳ ದಲ್ಲಿ ಹೆಚ್ಚಾಗಿ ಇರುವರು

ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹ ವ್ರತ ಇವುಗಳು ಅಣುವ್ರತಗಳು ಆರಂಭ ದಲ್ಲಿ ಜೈನ ಧರ್ಮ ಕೋಸಲ, ವಂಗ ಮಗಧದಲ್ಲಿ ಸೀಮಿತವಾಗಿತ್ತು ಎಂಬ ತಪ್ಪು ಕಲ್ಪನೆ ಪ್ರಕಟಿಸಿದ್ದಾರೆ. ಹೀಗೆ ಸರಿಯಾಗಿ ಪ್ರಕಟಿಸ ಬೇಕಾಗಿದೆ. ಅಖಂಡ ಭಾರತದಾದ್ಯಂತ ಜೈನ ಧರ್ಮ ಅಸ್ತಿತ್ತ್ವದಲ್ಲಿದ್ದ ಅನಾದಿಕಾಲಿನ ಮೂಲ ಭಾರತೀಯ ಧರ್ಮ ಇದು ಕೇವಲ ಜೈನರ ನಂಬಿಕೆ ಅಲ್ಲ ಭಾರತೀಯ ಚರಿತ್ರೆಯ ವಾಸ್ತವ ಅರಿವು ಮಹಾವೀರ ಸ್ವಾಮಿ ತಮಗಿಂತ ಪೂರ್ವದಲ್ಲಿದ್ದ ಪಾರ್ಶ್ವನಾಥ ಸ್ವಾಮಿ ಹಾಗೂ ಒಟ್ಟು 23 ತಮಗಿಂತ ಪೂರ್ವದ ತೀರ್ಥಂಕರರ ಧರ್ಮವನ್ನು ಬೋಧಿಸಿ ಹೆಚ್ಚು ವ್ಯಾಪಕ ಗೊಳಿಸಿದರು ಬ್ರಹ್ಮ ಚರ್ಯ ಎನ್ನುವ 5ನೇ ಯ ಅಣು ವ್ರತ ಸೇರಿಸಿ ಪಂಚ ಅಣುವ್ರತ ಬೋಧಿಸಿದವರು. ಹಾಗಾಗಿ ನಮ್ಮ ಜೈನ ವಿದ್ವಾಂಸ ರ ಮುಖೆನ ಸರಿಯಾದ ಮಾಹಿತಿ ತಮಗೆ ಒದಗಿಸಿ ಕೊಡುವ ವ್ಯೆವಸ್ಥೆ ಮಾಡುತ್ತೇವೆ ಆದ್ದರಿಂದ ಮುಂದಿನ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಆಗುವ ಮೊದಲು ಪಠ್ಯಪುಸ್ತಕ ಸರಿಪಡಿಸಿ ಪ್ರಕಟ ಮಾಡಬೇಕಾಗಿ ಸಚಿವರಿಗೆ ಲಿಖಿತವಾಗಿ ಚಾರುಕೀರ್ತಿ ಮನವಿ ಮಾಡಿದ್ದಾರೆ

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here