Tuesday 22nd, September 2020
canara news

ಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದ ನೆರವು

Published On : 06 Sep 2020   |  Reported By : Rons Bantwal


ಉಜಿರೆ: ವಿದ್ಯಾಕ್ಷೇತ್ರಕ್ಕೆ ಧರ್ಮಸ್ಥಳದಿಂದ ಸತತವಾಗಿ ಸಹಕಾರ ಮತ್ತು ಪೆÇ್ರೀತ್ಸಾಹ ನೀಡುತ್ತಾ ಬರಲಾಗಿದೆ. ವಿದ್ಯಾಸಂಸ್ಥೆಗಳಿಗೆ ಕೊಡುವ ಸಹಕಾರದಲ್ಲಿ ವಿಶೇಷವಾಗಿ ಬೆಂಚು-ಡೆಸ್ಕ್‍ಗಳನ್ನು ಸಿಮೆಂಟ್‍ನಿಂದಲೇ ತಯಾರಿಸಿ ಕೊಡಲಾಗುತ್ತಿದೆ.

ಮರದ ಬಳಕೆ ಇಲ್ಲದೆ ಸಿಮೆಂಟ್ ಮತ್ತು ತೆಂಗಿನ ಮರದ ಕಾಂಡದಿಂದ ತಯಾರಿಸಲಾದ ಪರಿಸರ ಸ್ನೇಹಿ ಬೆಂಚು-ಡೆಸ್ಕ್‍ಗಳನ್ನು 1990 ನೇ ಇಸವಿಯಿಂದ ಇದುವರೆಗೆ ಕರ್ನಾಟಕ ರಾಜ್ಯದ 9645 ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಫಾರಸಿನೊಂದಿಗೆ ರೂ. 17 ಕೋಟಿ ಮೌಲ್ಯದ ಬೆಂಚು-ಡೆಸ್ಕ್‍ಗಳನ್ನು ನೀಡಲಾಗಿದೆ.

ಈ ವರ್ಷದ ಬಜೆಟ್‍ನಲ್ಲಿ ಇದಕ್ಕಾಗಿ ರೂ. ಒಂದು ಕೋಟಿ ನಿಗದಿಪಡಿಸಲಾಗಿದೆ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅಧ್ಯಾಪಕರಿಗೆ ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದನೆಗಳನ್ನು ತಿಳಿಸುತ್ತಾ, ಕೊರೊನಾ ಮುಕ್ತ ಮುಂದಿನ ದಿನಗಳಲ್ಲಿ ಹೆಚ್ಚಿನ ಶ್ರದ್ಧೆಯಿಂದ ವಿದ್ಯಾದಾನ ಮಾಡುವಂತೆ ಸಂದೇಶವನ್ನು ನೀಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.
More News

ರಾಜು ಪರಮೇಶ್ವರ ಶೆಟ್ಟಿ   ನಿಧನ
ರಾಜು ಪರಮೇಶ್ವರ ಶೆಟ್ಟಿ ನಿಧನ
ಮಲಾರ್ ಸಾಧಕರಿಗೆ ಸನ್ಮಾನ.......
ಮಲಾರ್ ಸಾಧಕರಿಗೆ ಸನ್ಮಾನ.......
 ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಸಂಸ್ಮರಣಾ ಕಾರ್ಯಕ್ರಮ
ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಸಂಸ್ಮರಣಾ ಕಾರ್ಯಕ್ರಮ

Comment Here