Tuesday 22nd, September 2020
canara news

ಶುಭದಾ ಶಾಲೆಯಲ್ಲಿ ನಾರಾಯಣಗುರು ಜಯಂತಿ

Published On : 06 Sep 2020   |  Reported By : Rons Bantwal


ಕಿರಿಮಂಜೇಶ್ವರ:- ಶುಭದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯ ಸಲಹೆಗಾರರಾದ ಕೆ.ಪುಂಡಲೀಕ ನಾಯಕರವರು ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸಿ ಶ್ರೀ ನಾರಾಯಣ ಗುರುಗಳು ಧರ್ಮಗಳ ವಿಚಾರದಲ್ಲಿ ಆಧ್ಯಾತ್ಮಿಕ ಜಗತ್ತಿನ ಓರ್ವ ಪ್ರಜ್ಞಾವಂತ ಚಿಂತಕರಾಗಿದ್ದರು, ಸ್ಪಷ್ಟಮಾತುಗಳ ಕ್ರೀಯಾಶೀಲ ಸಮಾಜ ಸುಧಾರಕರಾಗಿದ್ದರು.

ಅವರ ಚಿಂತನೆಗಳು ಇಡೀ ಮಾನವ ಜನಾಂಗಕ್ಕೆ ಸಾರ್ವಕಾಲಿಕ ಸತ್ಯವನ್ನು ಬೋಧಿಸುವ ಕೈದಿವಿಗೆಗಳಾಗಿದ್ದರಿಂದಲೇ ನಾರಾಯಣ ಗುರುಗಳು ವಿಶ್ವಮಾನವರಾಗಿರುತ್ತಾರೆ ಎಂದು ಹೇಳಿದರು. ಸಂಚಾಲಕರಾದ ಶಂಕರ ಎಸ್ ಪೂಜಾರಿ, ಮುಖ್ಯಶಿಕ್ಷಕರಾದ ರವಿದಾಸ ಶೆಟ್ಟಿ, ಶಾಲಾ ಸಮಿತಿಯ ಸದಸ್ಯರಾದ ರಾಮಕೃಷ್ಣ ಬಿಲ್ಲವ, ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
More News

ರಾಜು ಪರಮೇಶ್ವರ ಶೆಟ್ಟಿ   ನಿಧನ
ರಾಜು ಪರಮೇಶ್ವರ ಶೆಟ್ಟಿ ನಿಧನ
ಮಲಾರ್ ಸಾಧಕರಿಗೆ ಸನ್ಮಾನ.......
ಮಲಾರ್ ಸಾಧಕರಿಗೆ ಸನ್ಮಾನ.......
 ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಸಂಸ್ಮರಣಾ ಕಾರ್ಯಕ್ರಮ
ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಸಂಸ್ಮರಣಾ ಕಾರ್ಯಕ್ರಮ

Comment Here