Friday 6th, August 2021
canara news

ಚೇಳೂರು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲಾ ಕಾಂಕ್ರೀಟಿಕೃತ ರಸ್ತೆ ಉದ್ಘಾಟನೆ

Published On : 09 Sep 2020   |  Reported By : Rons Bantwal


ಮುಂಬಯಿ (ಆರ್‍ಬಿಐ) ಉಳ್ಳಾಲ, ಸೆ.07: ಬಂಟ್ವಾಳ ತಾಲೂಕು ಇಲ್ಲಿನ ಚೇಳೂರು ಸಂತ ತೋಮಸ್ ಚಚ್9 ಮತ್ತು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಕಾಂಕ್ರೀಟಿಕರಣಗೊಂಡ ನೂತನ ರಸ್ತೆಯನ್ನು ಕಳೆದ ಭಾನುವಾರ ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು. ಉದ್ಘಾಟನೆ ಕಾರ್ಯಕ್ರಮ ಬಾನುವಾರ ನಡೆಯಿತು.

ಶಾಸಕ ಖಾದರ್ ಮಾತನಾಡಿ ಸುಮಾರು ರೂಪಾಯಿ 7 ಕೋಟಿ ವೆಚ್ಚ ಅನುದಾನದಿಂದ ಚೇಳೂರನಿಂದ ನೇರವಾಗಿ ಇರಾ ಸಂಪರ್ಕ ರಸ್ತೆಗೆ ಕಾಮಗಾರಿಗೆ ಶೀಘ್ರವೇ ಆರಂಭವಾಗಲಿದೆ. ಚೇಳೂರು ಪ್ರದೇಶ ನನ್ನ ವ್ಯಾಪ್ತಿಗೆ ಸೇರ್ಪಡೆಗೊಂಡ ನಂತರ ಹಂತಹಂತವಾಗಿ ಅಭಿವೃದ್ಧಿಪಡಿಸಿದ್ದೆನೆ ಎಂದರು.

ಈ ಸಂದರ್ಭ ಗ್ರಾಮಸ್ಥರು ಖಾದರ್ ಅವರನ್ನು ಸನ್ಮಾನಿಸಿದರು. ತೋಮಸ್ ಚಚ್9ನ ಧರ್ಮಗುರು ಫಾದರ್ ಮೈಕಲ್ ಡಿಸಿಲ್ವಾ, ಮುಡಿಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಾಜವ, ತಾ.ಪಂ ಮಾಜಿ ಸದಸ್ಯ ಪ್ರವಿಣ್ ಅಳ್ವ, ಚೇಳೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹೆನ್ರ್ರಿ ಡಿಸಿಲ್ವಾ, ಮಾಜಿ ಸದಸ್ಯೆ ಶಾಂತಿ ಜೋತಿ ಪಿಂಟೋ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
More News

ವಿಶ್ವನಾಥ ಸ್ವಾಮಿ ಸೋರ್ನಾಡು ನಿಧನ
ವಿಶ್ವನಾಥ ಸ್ವಾಮಿ ಸೋರ್ನಾಡು ನಿಧನ
ಗುಜರಾತ್ ಬಿಲ್ಲವ ಸಂಘ ; 2021-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಗುಜರಾತ್ ಬಿಲ್ಲವ ಸಂಘ ; 2021-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಅನಿತಾ ಪಿ.ತಾಕೊಡೆ ಅವರ `ಮೋಹನ ತರಂಗ' ಕೃತಿಗೆ
ಅನಿತಾ ಪಿ.ತಾಕೊಡೆ ಅವರ `ಮೋಹನ ತರಂಗ' ಕೃತಿಗೆ

Comment Here