Saturday 10th, May 2025
canara news

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯಿಂದ ಶಿಕ್ಷಕರ ದಿನಾಚರಣೆ

Published On : 09 Sep 2020   |  Reported By : Rons Bantwal


ಶಿಕ್ಷಕ ವೃಂದವನ್ನು ಸದಾ ಗೌರವಿಸೋಣ : ಡಾ| ಸಂತೋಷ ಕುಮಾರ್

ಮುಂಬಯಿ (ಆರ್‍ಬಿಐ) ಅಜೆಕಾರು, ಸೆ.08: ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸುವ ಶಿಕ್ಷಕ ವೃಂದವನ್ನು ಸದಾ ಗೌರವಿಸಬೇಕು. ವಿಶ್ರಾಂತ ಶಿಕ್ಷಕರ ಕೊಡುಗೆಯನ್ನು ನೆನೆಪಿಸಿಕೊಳ್ಳುವುದು ಸತ್ಸಂಪ್ರದಾಯ ಎಂದು ಖ್ಯಾತ ವೈದ್ಯ ಆದಿಗ್ರಾಮೋತ್ಸವದ ಗೌರವಾಧ್ಯಕ್ಷ ಡಾಸಂತೋಷ್ ಕುಮಾರ್ ಅವರು ಅಭಿಪ್ರಾಯ ಪಟ್ಟರು.

ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆದಿಗ್ರಾಮೋತ್ಸವ ಸಮಿತಿ ಸಹಕಾರದೊಂದಿಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣಾ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಬಳಿಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ವಿಶ್ರಾಂತರಾಗಿರುವ ಎ.ಶಾಂತಿರಾಜ ಹೆಗ್ಡೆ ಮತ್ತು ಮಕರಂದ ಎಸ್.ಜೈನ್ ಅವರನ್ನು ಕೊಂಬಗುಡ್ಡೆ ನಿವಾಸದಲ್ಲಿ ಉದ್ಯಮಿ, ಸಮಾಜ ಸೇವಕ ಗೋಪಿನಾಥ್ ಭಟ್ ಮುನಿಯಾಲು ಮತ್ತು ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ ಅವರು ಗೌರೆವಿಸಿದರು.
ಸಾಹಿತಿ, ಅಜೆಕಾರು ಗ್ರಾಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪ್ರೇಮಾ.ವಿ ಸೂರಿಗ, ರಾಧಾನಾಯಕ್ ಹೈಸ್ಕೂಲಿನ ಮಾಜಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪಿ.ಹಾಜಿ ಎಣ್ಣೆಹೊಳೆ ಮತ್ತು ಕವಿ, ವ್ಯಾಪಾರೋದ್ಯಮಿ ಬಾಲಕೃಷ್ಣ ಹೆಗ್ಡೆ ಮುಖ್ಯ ಅತಿಥಿüಗಳಾಗಿದ್ದರು.

ಭಾರತೀಯ ಸಂಸ್ಕøತಿಯ ಮಹತ್ವವವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ ಎಂದು ಸನ್ಮಾನ ಸ್ವೀಕರಿಸಿ ಎ.ಶಾಂತಿರಾಜ ಹೆಗ್ಡೆ ಹೇಳಿದರು.

ಭಾರತೀಯ ಸಂಸ್ಕøತಿಯನ್ನು ಮಕ್ಕಳಿಗೆ ಕಲಿಸಿ ಸುಸಂಸ್ಕøತರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಸನ್ಮಾನಿತೆ ಮಕರಂದ ಎಸ್ .ಹೆಗ್ಡೆ ಉತ್ತರಿಸಿದರು.

ಪತ್ರಕರ್ತ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ರಾಜ್ಯಾಧ್ಯಕ್ಷ ಡಾ| ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿ ಹಿರಿಯ ಅನುಭವವನ್ನು ಆಧರಿಸಿ ಬದುಕನ್ನು ಕಟ್ಟುವ ಕೆಲಸ ಆಗ ಬೇಕಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ಮತ್ತು ಸಮಿತಿ ಸದಸ್ಯರಾದ ಸಂತೋಷ್ ಜೈನ್ ಎಣ್ಣೆಹೊಳೆ, ಶಶಿಕಲಾ ಜಯಂತ್ ಬೆಳುವಾಯಿ ಮತ್ತಿತರರರು ಉಪಸ್ಥಿತರಿದ್ದು ಸುನಿಜ, ಸುನಿಧಿ, ಸಪ್ತ ಅಂಡಾರು ಪ್ರಾಥಿರ್üಸಿದರು. ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಪ್ರಶಸ್ತಿ ಪುರಸ್ಕøತ ಶೃಜನ್ಯ ಜೆ ಅವರ ಗುರು ನಮನ ಭರತನಾಟ್ಯ ಗೈದರು. ಶೃಜನ್ಯ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here