Friday 26th, April 2024
canara news

ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

Published On : 13 Sep 2020   |  Reported By : Rons Bantwal


ದಿಗಂಬರ ಜೈನ ಮಠದ ಡಾ| ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಸಂತಾಪ


ಮುಂಬಯಿ (ಆರ್‍ಬಿಐ), ಸೆ.12: ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಶುಕ್ರವಾರ ನಿಧನರಾಗಿದ್ದು ಕರ್ನಾಟಕ ಭಾರತದ ಮೂಡುಬಿದಿರೆ ಇಲ್ಲಿನ ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸ್ವಾಮಿ ಅಗ್ನಿವೇಶ್ ಒಬ್ಬ ಭಾರತೀಯ ಧಾರ್ಮಿಕ ಚಿಂತಕರು ಕೆಲವು ತಾತ್ತ್ವಿಕ ಬಿನ್ನಾಭಿಪ್ರಾಯ ಗಳಿದ್ದರೂ ಎಲ್ಲರೊಂದಿಗೆ ಉತ್ತಮ ಸಂಬಂಧ ಇರಿಸಿ ಕೊಂಡಿದ್ದರು ನಮ್ಮೊಂದಿಗೆ (ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ) ದೆಹಲಿ ವಿಜ್ಞಾನ ಭವನದಲ್ಲಿ ಬಸವ ಜಯಂತಿ 900, ಆಸ್ಟ್ರೇಲಿಯಾ, 2005, ಬಾರ್ಸಿಲೋನ 2011 ಮೆಲ್ಬೋರ್ನ್, 2014ಸಾಲ್ಟ್ ಲೇಖ್ ಸಿಟಿ ಅಮೇರಿಕಾ ಹಾಗೂ 2018 ರ ಕೆನಡ ದೇಶದ ಟೊರೊಂಟೊ ಜಾಗತಿಕ ಧರ್ಮ ಸಂಸತ್‍ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದ್ದರು. ಹರಿಯಾಣ, ಆರ್ಯ ಸಮಾಜದ ಪಂಡಿತ ಮತ್ತು ಸಾಮಾಜಿಕ ಕಾರ್ಯಕರ್ತ ಭಾರತದ ಮಾಜಿ ರಾಜ್ಯಸಭೆಯ ಸದಸ್ಯರಾಗಿದ್ದ ಅವರು 1981ರಲ್ಲಿ ಸ್ಥಾಪನೆಯಾದ ಬಾಂಡ್ ಲೇಬರ್ ಲಿಬರೇಷನ್ ಫ್ರಂಟ್ನ ಮೂಲಕ ನಿರ್ಭಂಧಿತ ಕಾರ್ಮಿಕರ ವಿರುದ್ಧದ ಅವರ ಹೋರಾಟಕ್ಕೆ ಹೆಸರುವಾಸಿ ಆಗಿದ್ದರು.

21,ಸೆಪ್ಟೆಂಬರ್ 1939ರಲ್ಲಿ ಆಂಧ್ರ ಪ್ರದೇಶದಲ್ಲಿ ಜನಿಸಿದ ಸ್ವಾಮಿ ಅಗ್ನಿವೇಶ್ ಅವರು ಪೂರ್ಣ ಹೆಸರು ವೇಪ ಶ್ಯಾಮ್ ರಾವ್ ಆಗಿದ್ದು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದರು. ಅಗ್ನಿವೇಶ್ ಇವರ ನಿದನದಿಂದ ಸರ್ವ ಧರ್ಮ ಸಮಭಾವದ ಓರ್ವ ಸಾಮರಸ್ಯತ್ವದ ಸಂತನನ್ನು ಕಳೆದು ಕೊಂಡಂತಾಗಿದೆ.

ಅವರ ದಿವ್ಯಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಅಭಿಮಾನಿ ಬಳಗ, ಭಕ್ತವೃಂದಕ್ಕೆ ಸಿಗಲಿ ಎಂದು ಪ್ರಾಥಿರ್üಸುತ್ತೇವೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here