Tuesday 22nd, September 2020
canara news

ಸ್ವರ್ಗೀಯ ಗುಲಾಬಿ ಆರ್.ಸನಿಲ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಶುಭದಾ ಶಿಕ್ಷಣ ಸಂಸ್ಥ್ಥೆ

Published On : 13 Sep 2020   |  Reported By : Rons Bantwal


ಮುಂಬಯಿ (ಆರ್‍ಬಿಐ) ಸೆ.10: ಕುಂದಾಪುರ ನಾವುಂದ ಇಲ್ಲಿನ ಕಿರಿಮಂಜೇಶ್ವರ ಇಲ್ಲಿನ ಶುಭದಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಅಂತರಾಷ್ಟ್ರೀಯ ನಾಮಾಂಕಿತ ವಾಸ್ತುತಜ್ಞ ಪಂಡಿತ್ ನವೀನ್ಚಂದ್ರ ಸನೀಲ್ ಇವರ ಮಾತೃಶಿಯಾಗಿದ್ದು ಕಳೆದ ಮಂಗಳವಾರ ಸ್ವರ್ಗಸ್ಥರಾದ ಬಜ್ಪೆ ದೊಡ್ಡಿಕಟ್ಟೆ ಮನೆತನದ ಶ್ರೀಮತಿ ಗುಲಾಬಿ ರಾಮ ಸನಿಲ್ ಇವರಿಗೆ ಇಂದಿಲ್ಲಿ ನಾವುಂದ ಇಲ್ಲಿನ ಶುಭದಾ ಶಾಲಾ ಕಚೇರಿಯಲ್ಲಿ ಸಂತಾಪ ಸಭೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬೃಹನ್ಮುಂಬಯಿ ಅಲಿನ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಬಡಾ ಎರ್ಮಾಳು ಗರಡಿಮನೆ ದಿ| ರಾಮ ಬಿ. ಸನಿಲ್ ಇವರ ಧರ್ಮಪತ್ನಿ ಅಂತೆಯೇ ನಮ್ಮ ಸಂಸ್ಥೆಯ ಹಿತೈಷಿಯೂ, ಶಿಕ್ಷಣಪ್ರೇಮಿಯಾಗಿದ್ದ ಮೃತ ಗುಲಾಬಿ ಸನಿಲ್ ಇವರಿಗೆ ನುಡಿನಮನಗೈದು ಸನಿಲ್ ಪರಿವಾರಕ್ಕೆ ಸಭೆಯಲ್ಲಿ ಸಾಂತ್ವನ ತಿಳಿಸಲಾಯಿತು.

ನಡೆಸಲಾದ ಸರಳ ಸಂತಾಪ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಜೀವ ಶೆಟ್ಟಿ, ಆರ್.ಕೆ ಬಿಲ್ಲವ, ಸಂಚಾಲಕ ಶಂಕರ್ ಪೂಜಾರಿ, ಮುಖ್ಯೋಪಾಧ್ಯಾಯ ರವಿರಾಜ್ ಶೆಟ್ಟಿ ಪ್ರಮುಖರಾಗಿದ್ದು ದೀಪ ಬೆಳಗಿಸಿ ಗುಲಾಬಿ ಸನಿಲ್ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿ ಸಂತಾಪ ವ್ಯಕ್ತ ಪಡಿಸುತ್ತಾ ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಶಾಲಾ ಆಡಳಿತ ವರ್ಗ, ಶಿಕ್ಷಕರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಿದರು.
More News

ರಾಜು ಪರಮೇಶ್ವರ ಶೆಟ್ಟಿ   ನಿಧನ
ರಾಜು ಪರಮೇಶ್ವರ ಶೆಟ್ಟಿ ನಿಧನ
ಮಲಾರ್ ಸಾಧಕರಿಗೆ ಸನ್ಮಾನ.......
ಮಲಾರ್ ಸಾಧಕರಿಗೆ ಸನ್ಮಾನ.......
 ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಸಂಸ್ಮರಣಾ ಕಾರ್ಯಕ್ರಮ
ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಸಂಸ್ಮರಣಾ ಕಾರ್ಯಕ್ರಮ

Comment Here