Monday 16th, May 2022
canara news

*ಹಳೆಯಂಗಡಿಯಲ್ಲಿ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಸಹಯೋಗದೊಂದಿಗೆ ಕಾನೂನು ಮಾಹಿತಿ ಶಿಬಿರ ಹಾಗೂ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ*

Published On : 15 Sep 2020   |  Reported By : Roshan Kinnigoli


ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಮಂಗಳೂರು,ವಿಜಯ ಮಾಸ್ತರ್ ಟ್ರಸ್ತ್ ಮತ್ತು ಭಾರತದ ಚರ್ಚ್ ಗಳ ಒಕ್ಕೂಟ ಮಂಗಳೂರಿನ ಸಹಯೋಗದಲ್ಲಿ ಸೆಪ್ತಂಬರ್ 14 ರ ಸೋಮವಾರ ಬೆಳಿಗ್ಗೆ ಹಳೆಯಂಗಡಿಯ ಇಂಡಿಯನ್ ಯೋಗ ಮಂದಿರದಲ್ಲಿ ಮೂಲ್ಕಿ ವಲಯ ಪತ್ರಕರ್ತರಿಗೆ ಕಾನೂನು ಮಾಹಿತಿ ಶಿಬಿರವು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನುಭಾರತ ಕ್ರೈಸ್ತ ಚರ್ಚ್ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ವಹಿಸಿದ್ದರು. ಹಿರಿಯ ದಿವಾಣಿ ನ್ಯಾಯಾಧೀಶ ದ.ಕ.ಜಿಲ್ಲಾ ಕಾನೂನು ನೆರವು ಪ್ರಾಧಿಕಾರ ದ ಕಾರ್ಯದರ್ಶಿ ಶ್ರೀಮತಿ ಎ ಜೆ ಶಿಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಹಿರಿಯ ದಿವಾಣಿ ನ್ಯಾಯಾಧೀಶ ಹರೀಶ್ ರವರು ಪತ್ರಕರ್ತರ ಮತ್ತು ಭಾರತದ ಸಂವಿಧಾನ ಕುರಿತು ಮಾತನಾಡಿದರು.ಮಂಗಳೂರು ಬಾರ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಎಸ್ ಪಿ ಚಂಗಪ್ಪರವರು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕುರಿತು ಹಾಗೂ ವಕೀಲರಾದ ಮಂಜುನಾಥ್ ರವರು ಸಂವಿಧಾಣ ರಕ್ಷಣೆಯಲ್ಲಿ ಪತ್ರಕರ್ತರ ಪಾತ್ರದ ಕುರಿತು ಮಾಹಿತಿ ನೀಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಲ್ಕಿ ಠಾಣಾಧಿಕಾರಿ ಶೀತಲ್ ಅಲ ಗೂರು,ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು.ಮೂಲ್ಕಿ ನಗರ ಪಂಚಾಯತ್ ಆರೋಗ್ಯಾಧಿಕಾರಿ ಲಿಲ್ಲಿನಾಯರ್,ಕೃಷ್ಣಾಪುರ ಸಿ ಎಸ್ ಐ ಚರ್ಚ್ ಸಭಾ ಪಾಲಕ ರೆವೆರೆಂಡ್ ಐಸನ್ ಪಾಲನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೋರೋನ ದಿನಗಳಲ್ಲಿ ಕೋರೋನ ವಾರಿಯರ್ಸ್ ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಅಧಿಕಾರಿ ಶೀತಲ್ ಅಲಗೂರು, ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ , ಸ್ವಚ್ಛತಾ ಸಿಬ್ಬಂದಿಗಳನ್ನು ಹಾಗೂ ಮುಲ್ಕಿ ವಲಯ ಪತ್ರಕರ್ತರನ್ನು ಗೌರವಿಸಲಾಯಿತು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here