Saturday 10th, May 2025
canara news

ಬಿಜೆಪಿ ಕೈಗಾರಿಕಾ ಪ್ರಕೋಷ್ಠ ಕರ್ನಾಟಕ ರಾಜ್ಯ ಸಂಚಾಲಕರಾಗಿ ಪ್ರದೀಪ್ ಜಿ.ಪೈ ನೇಮಕ

Published On : 17 Sep 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಸೆ.17: ಬಿಜೆಪಿ ಕೈಗಾರಿಕಾ ಪ್ರಕೋಷ್ಠ ಕರ್ನಾಟಕ ರಾಜ್ಯ ಸಂಚಾಲಕರಾಗಿ ಹಾಂಗ್ಯೋ ಐಸ್‍ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ ಪ್ರವರ್ತಕÀ ಪ್ರದೀಪ್ ಜಿ.ಪೈ ನೇಮಕ ಗೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಈ ಆಯ್ಕೆ ನಡೆಸಿ ಪ್ರಕಟನೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಇಲ್ಲಿನ ಗಣಪತಿ ಹನುಮಂತ ಪೈ ಭಟ್ಕಳ ಮತ್ತು ವೀಣಾ ಜಿ.ಪೈ ಸುಪುತ್ರರಾದ ಪ್ರದೀಪ್ ಪೈ ಓರ್ವ ಇಂಜಿನೀಯರಿಂಗ್ ಪದವೀಧರರಾಗಿದ್ದು ಮಂಗಳೂರುನಲ್ಲಿ ನೆಲೆಗೊಂಡು ಹಾಂಗ್ಯೋ ಐಸ್‍ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕರಾಗಿದ್ದಾರೆ. ವೃತ್ತಿಯ ಜೊತೆಗೆ ಅನೇಕ ಪ್ರವೃತ್ತಿಗಳನ್ನು ಮೈಗೂಡಿಸಿರುವ ಪೈ ಮಾನವೀಯತೆಯನ್ನು ಅಪಾರವಾಗಿ ಪ್ರೀತಿಸಿ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಓರ್ವ ಅಪ್ಪಟ ಸಮಾಜ ಸೇವಕ ಮತ್ತು ಶಿಕ್ಷಣಪ್ರೇಮಿ ಹಾಗೂ ವಿದ್ಯಾದಾನಿ ಆಗಿದ್ದಾರೆ.

ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಪ್ರತಿಷ್ಠಾನ (ರಿ.) ಮಂಗಳೂರು ಇದರ ಕಾರ್ಯದರ್ಶಿ ಆಗಿ ವಾರ್ಷಿಕವಾಗಿ ಸಾವಿರಾರು ವಿದ್ಯಾಥಿರ್üಗಳಿಗೆ ಕೋಟ್ಯಾಂತರ ವಿದ್ಯಾಥಿರ್ü ವೇತನ ವಿತರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಇದರ ಖಜಾಂಜಿಯಾಗಿಯೂ ಕಾರ್ಯಪ್ರವೃತ್ತರಾಗಿರುವರು. ದೊಡ್ಡ, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ ಉತ್ತೇಜನ ಸೇರಿದಂತೆ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಪಡಿಸುವ ಅಗಾಧ ಅನುಭವವುಳ್ಳ ಪೈ ಇವರ ಕೈಗಾರಿಕಾ ಪ್ರಕೋಷ್ಠದ ಆಯ್ಕೆ ಸೂಕ್ತ ಮತ್ತು ಸಮಯೋಜಿತ ಆದುದು ಎಂದು ಕೈಗಾರಿಕೋದ್ಯಮಿಗಳು ಪ್ರಶಂಸಿದ್ದಾರೆ.

ಕಳೆದ ಸುಮಾರು ಎರಡು ದಶಕಗಳಿಂದ ಹೈನುಗಾರಿಕಾ ಉತ್ಪನ್ನಗಳಲ್ಲಿ ತೊಡಗಿಸಿ ಕೊಂಡಿರುವ ಪ್ರದೀಪ್ ಪೈ ಶ್ರೀ ಕೃಷ್ಣ ಡೇರಿ ಪ್ರೈವೇಟ್ ಲಿಮಿಟೆಡ್ ಮೂಲಕ ಉತ್ಪಾದಿಸುವ ಐಸ್‍ಕ್ರೀಂ ಬ್ರಾಂಡ್‍ಗಳು ರಾಷ್ಟ್ರದ ದಕ್ಷಿಣ ಭಾರತದಲ್ಲಿ ಅತೀಹೆಚ್ಚು ಮಾರಾಟಗೊಂಡು ಐಸ್‍ಕ್ರೀಂ ಪ್ರಿಯರ ಸ್ವಾಧಿಷ್ಟತೆ, ಪ್ರಸಿದ್ಧಿಗೆ ಪಾತ್ರವಾಗಿದೆ. ಹಾಂಗ್ಯೋ `ಯೋ' ಐಸ್‍ಕ್ರೀಂ ಉತ್ಪನ್ನ ಮೂಲಕ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ರಾಷ್ಟ್ರದ ಏಳು ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿ ಅಪಾರ ಬೇಡಿಕೆಯನ್ನು ರೂಪಿಸಿರುವ ಹಾಂಗ್ಯೋ ಐಸ್‍ಕ್ರೀಂ ಉತ್ಪನ್ನಗಳ ಯಶಸ್ಸಿಗೆ ಉದ್ಯೋಗ ಭಾರತಿ ಸಹಿತ ಆರು ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿರುವುದೇ ಪ್ರದೀಪ್ ಪೈ ಮಹತ್ತರ ಸಾಧನೆಯಾಗಿದೆ.

ಕರ್ನಾಟಕದ ಸರಕಾರ ರಚಿತ ಕರ್ನಾಟಕದ ವಿಷನ್ ಸಮೂಹದ ಸದಸ್ಯರೂ ಮತ್ತು ಕ್ಷಿಪ್ರ ಚಲಾವನಾ ಗ್ರಾಹಕ ಸರಕುಗಳ (ಎಫ್‍ಎಂಸಿಜಿ) ಉತ್ಪಾದನಾ ಧಾರವಾಡ ಜಿಲ್ಲಾ ಸಮೂಹದ (ಧಾರವಾಡ ಜಿಲಾ ಕ್ಲಸ್ಟರ್) ಕಾರ್ಯಾಧ್ಯಕ್ಷ ಆಗಿಯೂ ಪ್ರದೀಪ್ ಪೈ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಪ್ರದೀಪ್ ಅವರ ಪತ್ನಿ ದೀಪಾ ಪಿ.ಪೈ ಮತ್ತು ಸುಪುತ್ರ ನಿರ್ದೇಶಕ ಸಂಕೀರ್ಣ್ ಪಿ.ಪೈ ಇವರು ಹಾಂಗ್ಯೋ ನಿರ್ದೇಶಕರಾಗಿ ಶ್ರಮಿಸುತ್ತಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here