Monday 16th, May 2022
canara news

ಮಲಾರ್ ಸಾಧಕರಿಗೆ ಸನ್ಮಾನ.......

Published On : 19 Sep 2020   |  Reported By : Rons Bantwal


ಸಾಧಕರ ಗುರುತಿಸುವಿಕೆ ಭಾವೀ ಜನಾಂಗಕ್ಕೆ ಆದರ್ಶ : ಖತೀಬ್ ಫೈಝಿ

ಮುಂಬಯಿ (ಆರ್ ಬಿಐ), ಸೆ.18: ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ತಲೆಮಾರಿಗೂ ಅವರ ಆದರ್ಶಗಳನ್ನು ಪರಿಚಯಿಸಿ ಮುಂದುವರಿಸುವುದು ಸಂಘಟನೆಗಳ ಜವಾಬ್ದಾರಿ ಎಂದು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಹನೀಫ್ ಫೈಝಿ ಅಭಿಪ್ರಾಯಪಟ್ಟರು.

ಹರೇಕಳ ಮಲಾರ್ ಎಜ್ಯುಕೇಶನ್ ಸೊಸೈಟಿ ಇದರ ವತಿಯಿಂದ ಮಲಾರ್ ಪದವು ಮೈದಾನದಲ್ಲಿ ಶುಕ್ರವಾರ ನಡೆದ ಸಾಧಕರಿಗೆ ಸನ್ಮಾನ ಸಭಾ ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದರು.

 

ಮನುಷ್ಯನಲ್ಲಿ ನಯ, ವಿನಯ, ಇನ್ನಿತರರಿಗೆ ಗೌರವಿಸುವ ಗುಣ ಅಗತ್ಯ, ಇಂತಹ ಗುಣಗಳು ಸಾಧನೆಯ ಶಿಖರಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕರೊನಾ ಬಳಿಕ ಸ್ಥಳೀಯ ಪ್ರದೇಶದಲ್ಲಿ ಪ್ರಥಮ ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗಿದೆ, ಎಲ್ಲಾ ಕ್ಷೇತ್ರದಲ್ಲೂ‌‌ ಪೈಪೋಟಿ ಇದೆ. ಅದರೊಂದಿಗೆ ತಾಳ್ಮೆ ಮತ್ತು ಛಲದಿಂದ ಎದುರಿಸಿ ಪ್ರಶಸ್ತಿ ಪಡೆಯುವುದಕ್ಕಿಂತ‌ ದೊಡ್ಡ ಗೌರವ ಇನ್ನೊಂದಿಲ್ಲ ಎಂದು ಎಂಇಎಸ್ ಗೌರವಾಧ್ಯಕ್ಷ ಮುಹಮ್ಮದ್ ಮುಸ್ತಫಾ ಮಲಾರ್ ತಿಳಿಸಿದರು.

ಎಂಇಎಸ್ ಅಧ್ಯಕ್ಷ ಎಸ್.ಎಂ.ಇಸ್ಮಾಯಿಲ್ ಮಲಾರ್ ಕೋಡಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಂ.ಎಚ್.ಮಲಾರ್, ರಾಧಾಕೃಷ್ಣ ರಾವ್ ಹಾಗೂ ಪತ್ರಕರ್ತ ಅನ್ಸಾರ್ ಇನೋಳಿ ಅವರನ್ನು ಸನ್ಮಾನಿಸಲಾಯಿತು.

ಮುಸ್ಲಿಂ ಜಮಾಅತ್ ಒಕ್ಕೂಟದ ಸಂಚಾಲಕ ಅಬ್ದುಲ್ ರಝಾಕ್, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಮಲಾರ್, ನೂರುಲ್ ಇಸ್ಲಾಂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಹ್ಮತುಲ್ಲಾ, ಮಲಾರ್ ಹೆಲ್ಪ್ ಲೈನ್ ಸಂಚಾಲಕ ಕಬೀರ್ ಮಲಾರ್, ಎಂಇಎಸ್ ಗೌರವಾಧ್ಯಕ್ಷ ಮುಸ್ತಫಾ ಮಲಾರ್,‌ ಗಲ್ಫ್ ಘಟಕದ ಅಧ್ಯಕ್ಷ ಆಶ್ರಫ್ ಮದೀನಾ, ಕೋಶಾಧಿಕಾರಿ ಮುಸ್ತಫಾ,ಜತೆಕಾರ್ಯದರ್ಶಿ ಅಟೋ ನಾಸೀರ್ ಮಲಾರ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜತೆಕಾರ್ಯದರ್ಶಿ ಮುಹಮ್ಮದ್ ಹಫೀಝ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಝಾಯಿದ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜ್ ವಂದಿಸಿದರು.
ನಿಯಾಫ್ ಕಾರ್ಯಕ್ರಮ ನಿರೂಪಿಸಿದರು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here