Saturday 10th, May 2025
canara news

ಹೇಮಲತಾ ಚಂದ್ರಶೇಖರ್ ಶೆಟ್ಟಿ ನಿಧನ

Published On : 26 Sep 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಸೆ.25: ಉಪನಗರ ಕಾಂದಿವಲಿ ಪೂರ್ವದ ಚಾರ್‍ಕೋಪ್ ವಿಲೇಜ್‍ನ ಇಲ್ಲಿನ ಅಶಾಪೂರ ಕೋ.ಆಪರೇಟಿವ್ ಸೊಸೈಟಿ ನಿವಾಸಿ, ಉಡುಪಿ ಜಿಲ್ಲೆಯ ಕೊಳಚ್ಚೂರು ಗುತ್ತು ದಿ.ಆನಂದ ಶೆಟ್ಟಿ ಹಾಗೂ ಏರ್ಮಾಳು ಮೂಡಬೆಟ್ಟು ಪುಷ್ಪ ನಿಲಯ ಗುಲಾಬಿ ಎ.ಶೆಟ್ಟಿ ದಂಪತಿ ಸುಪುತ್ರಿ ಹೇಮಲತಾ ಚಂದ್ರಶೇಖರ್ ಶೆಟ್ಟಿ (47.) ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಅಲ್ಪಕಾಲದ ಅಸ್ವಸ್ಥತೆಯಿಂದ ವಿೂರಾರೋಡ್ ಇಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ (ಯುವ ಉದ್ಯಮಿ, ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ಉಪಾಧ್ಯಕ್ಷ, ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಸಕ್ರಿಯ ಕಾರ್ಯಕರ್ತ, ವೀರ ಕೇಸರಿ ಕಲಾವೃಂದ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಇನ್ನಿತರ ಅನೇಕ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಹೆಸರಾಂತ ಸಮಾಜ ಸೇವಕ ಆಗಿದ್ದ, ಶ್ರೀ ಅಯ್ಯಪ್ಪನ ಪರಮಭಕ್ತ ಬೆಳ್ಮಣ್ ಚಂದ್ರಶೇಖರ್ ಎಸ್.ಶೆಟ್ಟಿ) ಓರ್ವ ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಕಾಂದಿವಿಲಿ ಪಶ್ಚಿಮದ ದಾಹಣುಕರ್ವಾಡಿ ಇಲ್ಲಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

ಹೇಮಲತಾ ನಿಧನಕ್ಕೆ ಬಂಟರ ಸಂಘದ ನೂತನ ಶಿಕ್ಷಣ ಯೋಜನೆಗಳ ಕಾರ್ಯಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ, ಉಪಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಎರ್ಮಾಳ್, ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಎಸ್.ಶೆಟ್ಟಿ, ಉಪ ಕಾರ್ಯಧ್ಯಕ್ಷ ಎಂ.ಜಿ ಶೆಟ್ಟಿ, ಕಾರ್ಯದರ್ಶಿ ಕೊಂಡಾಡಿ ಪ್ರೇಮನಾಥ ಶೆಟ್ಟಿ. ಕೋಶಾಧಿಕಾರಿ ಗಂಗಾಧರ ಶೆಟ್ಟಿ ಮತ್ತು ಚಾರ್ಕೊಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ ಕೃಷ್ಣ ಶೆಟ್ಟಿ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here