Saturday 5th, July 2025
canara news

ಅಕ್ಟೋಬರ್‍ನಿಂದ ಬೃಹನ್ಮುಂಬಯಿಯಲ್ಲಿನ ಹೊಟೇಲು ಪುನಾರಂಭ ; ಮಹಾ ಮುಖ್ಯಮಂತ್ರಿ ಭರವಸೆ

Published On : 02 Oct 2020   |  Reported By : Rons Bantwal


ಹೊಟೇಲು-ರೆಸ್ಟೋರೆಂಟ್‍ಗಳನ್ನು ಪುನಃ ತೆರೆಯುವಂತೆ ವಿರಾರ್ ಶಂಕರ್ ಶೆಟ್ಟಿ ಮನವಿ

ಮುಂಬಯಿ (ಆರ್‍ಬಿಐ), ಸೆ.28: ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದಿಲ್ಲಿ ನಡೆಸಿದ ಆನ್‍ಲೈನ್ (ಝೂಮ್ ವಿೂಟಿಂಗ್) ಸಭೆಯಲ್ಲಿ ಮಹಾರಾಷ್ಟ್ರದ ಹೋಟೆಲ್ ಫೆಡರೇಶನ್ ಉಪಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ ಅವರು ಮಾತನಾಡಿ ಕೋವಿಡ್ ಸಾಂಕ್ರಮಿಕ ರೋಗದಿಂದಾಗಿ ಕಳೆದ ಮಾರ್ಚ್‍ನಿಂದ ಲಾಕ್‍ಡೌನ್ ನಿಮಿತ್ತ ಹೊಟೇಲ್ ಉದ್ಯಮವು ಸ್ಥಗಿತಗೊಂಡಿದ್ದು, ಇದೀಗ ಮಹಾರಾಷ್ಟ್ರದಾದ್ಯಂತದ ವಿಶೇಷವಾಗಿ ಮುಂಬಯಿಯಲ್ಲಿನ ಎಲ್ಲಾ ಹೊಟೇಲು, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಪುನಃ ತೆರೆಯುವಂತೆ ಸಲಹಿ ಮತ್ತು ಹೊಟೇಲು ಉದ್ಯಮದ ಕುಂದುಕೊರತೆಗಳನ್ನು ಮತ್ತು ವಿಮರ್ಶಾತ್ಮಕ ಅವಸ್ಥೆಯನ್ನು ತಿಳಿಸಿದರು.

ಎಲ್ಲರಂತೆ ರಾಜ್ಯದ ಮತ್ತು ವಿಶೇಷವಾಗಿ ಮುಂಬಯಿಯಲ್ಲಿನ ಇಡೀ ಹೊಟೇಲು ಉದ್ಯಮವೇ ತತ್ತರಿಸಿದ್ದು ಹೊಟೇಲು ಮಾಲೀಕರು ಮತ್ತು ಕೆಲಸಗಾರರು ಹಾಗೂ ಅವರ ಕುಟುಂಬಗಳು ಅತೀವ ತೊಂದರೆಗಳನ್ನು ಎದುರಿಸುತ್ತಿದೆ. ಕಳೆದ ಸುಮಾರು ಅರ್ಧ ವರ್ಷದಿಂದ ನಾವು ನಮ್ಮ ಕಾರ್ಮಿಕರ, ನೌಕರವೃಂದದ ತೊಂದರೆಗಳನ್ನು ಪರಿಹರಿಸಿ ಸ್ಪಂದಿಸಿದ್ದೇವೆ. ಆದರೆ ಇದೀಗ ಮಾಲೀಕರಿಗೂ ಇದೆಲ್ಲಾ ಕಷ್ಟಕರವಾಗಿದೆ. ಹೊಟೇಲ್‍ನಲ್ಲಿ ಕೆಲಸ ಮಾಡುವ ನೌಕರರು, ಹುಡುಗರು ಮಧ್ಯಮ ವರ್ಗದವರಾಗಿದ್ದು ನಮ್ಮ ಅಸಹಾಯಕತೆಯಿಂದ ಅವರಿಗೆ ದಿನ ಕಳೆಯಲೇ ಕಷ್ಟವಾಗಿದೆ. ಬಡ ಕಾರ್ಮಿಕರಿದ್ದು ಅವರು ತಮ್ಮ ಕುಟುಂಬವನ್ನು ಇದೇ ಉದ್ಯಮವನ್ನು ಅವಲಂಬಿಸಿ ಶ್ರಮಿಸಿದಾಗಲೇ ಇದು ಸಾಧ್ಯವಾಗುತ್ತಿತ್ತು. ಮಹಾರಾಷ್ಟ್ರದಲ್ಲಿ ಇರುವ 50% ಹೊಟೇಲ್‍ಗಳ ಮಾಲಕರು ಮರಾಠಿಗರಾಗಿದ್ದು ಅದನ್ನು ನಮ್ಮಂತಹ ಹೊಟೇಲು ಉದ್ಯಮಿಗಳು ಅವರ ಹೊಟೇಲು ಚಲಾಯಿಸಿ ಬಾಡಿಗೆ ನೀಡಿದರೆ ಮಾತ್ರ ಅವರ ಮನೆಮಂದಿ ವ್ಯವಹಾರಗಳು, ಮಕ್ಕಳ ವಿದ್ಯಾಭ್ಯಾಸ, ಭವಿಷ್ಯ ನಡೆಯುವುದು ಎಂದು ಶಂಕರ್ ಶೆಟ್ಟಿ ಸಿಎಂಗೆ ಮನವರಿಸಿದರು.

ಹೊಟೇಲು ಉದ್ಯಮವನ್ನು ನಡೆಸುವರೇ ಮತ್ತೆ ಅವಕಾಶ ನೀಡಿದ್ದಲ್ಲಿ ನಾವು ರಾಜ್ಯ ಸರ್ಕಾರವು ಹೊರಡಿಸಿರುವ ಸುರಕ್ಷತಾ ಮಾನದಂಡಗಳು, ನಿಯಮ ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಜನಹಿತ, ಗ್ರಾಹಕರ ಸುರಕ್ಷತೆಯನ್ನು ಕಾಯ್ದು ಹೋಟೆಲುಗಳನ್ನು ಕಾರ್ಯನಿರ್ವಹಿಸುತೆÀ್ತವೆ ಎಂದು ಮುಖ್ಯಮಂತ್ರಿ ಅವರಿಗೆ ವಿರಾರ್ ಶೆಟ್ಟಿ ಭರವಸೆ ನೀಡಿದರು.

ಸಂಕ್ಷಿಪ್ತ ಚರ್ಚೆಯ ನಂತರ, ಅಕ್ಟೋಬರ್ ಮೊದಲ ವಾರದಲ್ಲಿ ಎಲ್ಲಾ ಹೋಟೆಲ್‍ಗಳನ್ನು ಪುನಃ ತೆರೆಯಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು, ಹೊಟೇಲು ನಿರ್ವಾಹಕರು ಸುರಕ್ಷತಾ ಮಾನದಂಡಗಳಿಗೆ ಬದ್ಧರಾಗಿರಬೇಕು ಎಂದು ಶಂಕರ್ ಶೆಟ್ಟಿ ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರದ ಹಲವಾರು ಹೊಟೇಲು ಮಾಲೀಕರು, ನಿರ್ವಾಹಕರು ಹಾಜರಿದ್ದು ಚರ್ಚೆಯಲ್ಲಿ ಭಾಗವಹಿಸಿದ್ದÀರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here