Thursday 22nd, October 2020
canara news

ಗಾಯಕರು ವಿಶ್ವ ಸೌಹಾರ್ದತೆಯ ರಾಯಭಾರಿಗಳು: ಇಂ.ಕೆ.ಪಿ.ಮಂಜುನಾಥ್ ಸಾಗರ್

Published On : 04 Oct 2020   |  Reported By : Rons Bantwal


ಮುಂಬಯಿ, ಅ.01 :ಎಸ್.ಪಿ.ಬಿ.ಸಂಗೀತ ಸಂಜೆ ಸಮಿತಿ 2020ರ ಆಶ್ರಯದಲ್ಲಿ ಸೆಪ್ಟೆಂಬರ್ 25 ರಂದು ನಿಧನರಾದ ಗಾನಗಂಧರ್ವ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯೊಂದು ಉರ್ವ ಸ್ಟೋರ್‍ನ ಯುವವಾಹಿನಿ ಸಭಾಂಗಣದಲ್ಲಿ ಬುಧವಾರÀ 30ರಂದು ನಡೆಯಿತು.ಪ್ರಾರಂಭದಲ್ಲಿ ಒಂದು ನಿಮಿಷದ ಕಾಲ ಮೌನ ಆಚರಿಸಿ ಅಗಲಿದ ಎಸ್ ಪಿ ಬಿ ಯವರ ಆತ್ಮಕ್ಕೆ ಶಾಂತಿ ಕೋರಲಾಯಿತು.ಬಳಿಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಗುರುಪ್ರಸಾದ್,ಮೂಡಾ ಅಧಿಕಾರಿಗಳು, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಇಂ.ಕೆ.ಪಿ.ಮಂಜುನಾಥ್ ಸಾಗರ್, ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿಗಳಾದ ಶಿವರಾಜ್ ಪಿ.ಬಿ., ದಿಲೀಪ್ ಗದ್ಯಾಳ್,ಒಮೇಗಾ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಎಸ್. ಎಲ್.ಭಾರದ್ವಾಜ್ ಅಗಲಿದ ಎಸ್ ಪಿ ಬಿ ಯವರಿಗೆ ನುಡಿನಮನ ಸಲ್ಲಿಸಿದರು.ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಇದರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್"ಆಕಾಶ ದೀಪವು ನೀನು"ಹಾಡು ಹಾಡಿ ಎಸ್. ಪಿ. ಬಿ.ಯವರಿಗೆ ಗೀತ ನಮನ ಸಲ್ಲಿಸಿದರು.

ಕೆ.ಪಿ.ಮಂಜುನಾಥ್ ಸಾಗರ್ ಅವರು ನುಡಿನಮನ ಸಲ್ಲಿಸುತ್ತಾ" ಸಂಗೀತ ವಿಶ್ವ ಭಾಷೆ, ದೇವ ಭಾಷೆ, ನಿಸರ್ಗ ಭಾಷೆ.ಗಾಯಕರು ವಿಶ್ವ ಸೌಹಾರ್ದತೆಯ ರಾಯಭಾರಿಗಳು.. ಎಸ್.ಪಿ.ಬಿ.ಅಂತಹ ಸೌಹಾರ್ದತೆಯ ರಾಯಭಾರಿ.ಅವರ ಅಗಲಿಕೆ ಸಂಗೀತ ಲೋಕಕ್ಕೆ ದೊಡ್ಡ ಆಘಾತ ಹಾಗೂ ತುಂಬಲಾರದ ನಷ್ಟ"ಎಂದರು.
ಸಾಹಿತಿ ಹಾಗೂ ಚಿತ್ರನಟ ಡಾ.ಕಾಸರಗೋಡು ಅಶೋಕ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

 
More News

ಆಗಲಿದ ಜಯ ಸಿ.ಸುವರ್ಣ ಅವರಿಗೆ ಗಣ್ಯರು-ಹಿತೈಷಿಗಳಿಂದ ಅಂತಿಮ ನಮನ-ಬಾಷ್ಪಾಂಜಲಿ
ಆಗಲಿದ ಜಯ ಸಿ.ಸುವರ್ಣ ಅವರಿಗೆ ಗಣ್ಯರು-ಹಿತೈಷಿಗಳಿಂದ ಅಂತಿಮ ನಮನ-ಬಾಷ್ಪಾಂಜಲಿ
ಭಾರತ್ ಕೋ.ಅಪರೇಟಿವ್ ಬ್ಯಾಂಕ್‍ನ ಸರದಾರ ಜಯ ಸಿ.ಸುವರ್ಣ ವಿಧಿವಶ
ಭಾರತ್ ಕೋ.ಅಪರೇಟಿವ್ ಬ್ಯಾಂಕ್‍ನ ಸರದಾರ ಜಯ ಸಿ.ಸುವರ್ಣ ವಿಧಿವಶ
ಶ್ರೀ ವಿಠೋಭ ಭಜನಾ ಮಂದಿರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ
ಶ್ರೀ ವಿಠೋಭ ಭಜನಾ ಮಂದಿರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Comment Here