Saturday 10th, May 2025
canara news

ಐಐಹೆಚ್‍ಆರ್ ಸಂಸ್ಥೆಯಿಂದ ಮಹಾತ್ಮ ಗಾಂಧಿ 150ನೇ ಜನ್ಮ ವರ್ಷಾಚರಣೆ

Published On : 04 Oct 2020   |  Reported By : Rons Bantwal


ರೈತರನ್ನು ಸ್ವಾವಲಂಬಿಗಳಾಗಿಸಿ ಉದ್ಯಮಶೀಲರನ್ನಾಗಿಸಬೇಕು-ಡಾ| ಎನ್.ಆರ್ ದಿನೇಶ್

ಮುಂಬಯಿ (ಆರ್‍ಬಿಐ) ಬೆಂಗಳೂರು, ಅ.02: ಗಾಂಧೀಜಿ ಕಂಡ ಆತ್ಮ ನಿರ್ಭರತೆಯ ಅಂಶಗಳನ್ನು ಸ್ವಾವಲಂಬನೆಗಾಗಿ ರೈತರು ಅಳವಡಿಸಲು ಎಚ್‍ಆರ್ ಸಂಸ್ಥೆಯ ತೋಟಗಾರಿಕೆ ತಂತ್ರಜ್ಞಾನ ಖಂಡಿತ ಪೂರಕವಾಗಿದೆ ರೈತರು ಸ್ವಾವಲಂಬಿಯಾಗಲು ಇಲ್ಲಿ ಮುನ್ನೂರಕ್ಕೂ ಹೆಚ್ಚು ತಳಿ ತಂತ್ರಜ್ಞಾನಗಳನ್ನು ಐದು ದಶಕಗಳಿಂದ ಕಂಡುಹಿಡಿಯಲಾಗಿದ್ದು ಈ ಹಣ್ಣು ಮತ್ತು ತರಕಾರಿ ಮಾರುವ ಸೌರಶಕ್ತಿ ಅಳವಡಿಸಲಾದ ತ್ರಿಚಕ್ರ ಸೈಕಲ್ ಅದರಲ್ಲಿ ಒಂದು ತಂತ್ರಜ್ಞಾನವಾಗಿದೆ ಅರ್ಕಾ ಬೀಜದ ಪೆÇೀರ್ಟೇಲ್ ಬಿಪಿಡಿ ತರಬೇತಿ ವ್ಯವಸ್ಥೆತರಬೇತಿ ಅವಸ್ಥೆ ಲೈಸೆನ್ಸ್ ದಾರರಿಗೆ ತಂತ್ರಜ್ಞಾನಗಳನ್ನು ವಿತರಿಸಿ ಅವರನ್ನು ಉದ್ಯಮಶೀಲರ ನಾಗಿಸಲು ಹತ್ತಾರು ಕ್ರಮಗಳನ್ನು ನಡೆಸಲಾಗುತ್ತಿದ್ದು ಇವುಗಳ ಪ್ರಯೋಜನಗಳನ್ನು ಪಡೆಯಲು ರೈತರು ಮಹಿಳೆಯರು ಯುವ ಕೃಷಿಕರು ಎಫಿಡಿಓಗಳು ಮುಂದೆ ಬರಬೇಕು ಎಂದÀು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಐಹೆಚ್‍ಆರ್) ನಿರ್ದೇಶಕ ಡಾ| ಎನ್.ಆರ್ ದಿನೇಶ್ ಕರೆಯಿತ್ತರು.

ಬೆಂಗಳೂರು ಹೆಸರಘಟ್ಟ ಇಲ್ಲಿರುವ ಐಐಹೆಚ್‍ಆರ್ ಸಂಸ್ಥೆ ಇಂದಿಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಡಾ| ಎನ್.ಆರ್ ದಿನೇಶ್ ಧ್ವಜಾರೋಹಣ ನೆರವೇರಿಸಿ ಆತ್ಮ ನಿರ್ವಹಣಾ ಕೃಷಿಗಾಗಿ ಉತ್ತೇಜನ ಮತ್ತು ಒತ್ತು ನೀಡುತ್ತಿರುವ ತೋಟಗಾರಿಕಾ ತಂತ್ರಜ್ಞಾನಗಳ ಪರಿಚಯ, ಅದನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಐಐಹೆಚ್ ಆರ್ ಸಂಸ್ಥೆಯಲ್ಲಿ ರೈತರಿಗಾಗಿ ತಂತ್ರಜ್ಞಾನಗಳ ಬಿಡುಗಡೆ ಹಾಗೂ ಅದನ್ನು ರೈತರಿಗಾಗಿ ಬಿಡುಗಡೆ ಗೊಳಿಸಿ ಮಾತನಾಡಿದರು.

ನಾಮನಿರ್ದೇಶಿತ ಸಮಿತಿ ಸದಸ್ಯ ರೈತ ಪ್ರತಿನಿಧಿ ಆರ್.ಶಿವಪ್ರಸಾದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿü ಆಗಿದ್ದು ಮಾತನಾಡಿ ಸರ್ಕಾರಿ ಸ್ವಾಮ್ಯದ ಒಂದು ತನ್ನ ತಂತ್ರಜ್ಞಾನಗಳಿಂದ ಬೀಜ ಹಾಗೂ ಸಸಿಗಳ ವಿತರಣೆಯೊಂದಿಗೆ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೂ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿü ಅಭ್ಯಾಗತರಾಗಿದ್ದ ಡಾ| ಪ್ರಭಾಕರ್ ಎಂಎಸ್ ಮಾತನಾಡಿ ಐಐಹೆಚ್ ಆರ್ ಕೇವಲ ಸಂಶೋಧನೆಗೆ ಮಾತ್ರ ಇಲ್ಲಿ ಪಿಹೆಚ್‍ಡಿ ಪದವಿಗಳನ್ನು ನೀಡಿ ಉತ್ತಮ ಸಂಶೋಧನೆಗಳನ್ನು ನೀಡುತ್ತಿರುವುದರಿಂದ ಕೇಂದ್ರವನ್ನು ಡೀಮ್ಡ್ ವಿಶ್ವವಿದ್ಯಾಲಯ ಆಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟಜಾತಿಯ ಫಲಾನುಭವಿಗಳಾದ ತುಮಕೂರು ಜಿಲ್ಲೆಯ ಶಿರಾ ತಾಲೂಕು ಯರಡಾಕಟ್ಟೆ ಗ್ರಾಮದ ಕರ್ಣಾ ಮತ್ತು ಬೆಂಗಳೂರು ಉತ್ತರ ತಾಲೂಕಿನ ಐವರ ತಂಡಪುರದ ಎನ್ ವಿಜಯಕುಮಾರ್ ಅವರಿಗೆ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕಾಗಿ ಉಚಿತವಾಗಿ ತ್ರಿಚಕ್ರ ಸೈಕಲ್‍ಗಳನ್ನು ವಿತರಿಸಲಾಯಿತು.

ಕೃಷಿಯೇತರ ವಿಭಾಗದ ಪ್ರಧಾನ ವಿಜ್ಞಾನಿ ಡಾ| ಜೆ.ಸೆಂತಿಲ್ ಕುಮರನ್, ಮುಖ್ಯಸ್ಥ ಡಾ| ಒಬೇರಾಯಿ, ಪ್ರಧಾನ ವಿಜ್ಞಾನಿ ಡಾ| ಬಿ.ನಾರಾಯಣಸ್ವಾಮಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ವಿಜ್ಞಾನಿಗಳು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನೋಡಲ್ ಅಧಿಕಾರಿ ಹಾಗೂ ವಿಜ್ಞಾನಿ ಡಾ| ಪಿ.ನಂದೀಶ್ ಸ್ವಾಗತಿಸಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here