Thursday 19th, May 2022
canara news

ಹೊಟೇಲು ಉದ್ಯಮ ಫೆಡರೇಶನ್‍ಗೆ ಸಕರಾತ್ಮಕವಾಗಿ ಸ್ಪಂದಿಸಿದ ಶರದ್ ಪವಾರ್

Published On : 17 Oct 2020   |  Reported By : Rons Bantwal


ಮುಂಬಯಿ, (ಆರ್‍ಬಿಐ) ಅ.14: ಮಹಾರಾಷ್ಟ್ರ ರಾಜ್ಯದಲ್ಲಿನ ವಿಶೇಷವಾಗಿ ಬೃಹನ್ಮುಂಬಯಿಯಲ್ಲಿನ ಎಲ್ಲಾ ಹೊಟೇಲುಗಳನ್ನು ಬೆಳಿಗ್ಗೆಯಿಂದ ತಡರಾತ್ರಿವರೆಗೆ ತೆರದಿಟ್ಟು ವ್ಯಾಪಾರ ನಡೆಸುವರೇ ಮಹಾರಾಷ್ಟ್ರದ ರಾಜ್ಯ ಸರಕಾರದ ಆಡಳಿತ ಮೈತ್ರಿ ಕೂಟದ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‍ಸಿಪಿ) ವರಿಷ್ಠ ಶರದ್ ಪವಾರ್ ಅವರನ್ನು ಇಂದಿಲ್ಲಿ ಭೇಟಿ ನೀಡಿದ ಮಹಾರಾಷ್ಟ್ರ ಫೆÉಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ನಿಯೋಗವು ಮನವಿ ಸಲ್ಲಿಸಿತು.

ಮನವಿಗೆ ಸ್ಪಂದಿಸಿದ ಮಾಜಿ ಕೇಂದ್ರ ಸಚಿವರು ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದÀ್ದ ಶರದ್ ಪವಾರ್ ಅವರು ನಿಯೋಗದ ಸಮ್ಮುಖದಲ್ಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕರೆಮಾಡಿ ಸಮನ ಕಷ್ಟದಲ್ಲಿರುವ ಹೊಟೇಲು ಮಾಲೀಕರ ಮನವಿಗೆ ಸ್ಪಂದಿಸುವಂತೆ ತಿಳಿಸಿದರು.

ಫೆÉಡರೇಶನ್ ಉಪಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ ಅವರು ಶರದ್ ಪವಾರ್ ಅವರನ್ನು ಗೌರವಿಸುತ್ತಾ ಕೊರೊನಾ ಹೋಟೆಲ್ ಉದ್ಯಮಕ್ಕೆ ಬಲು ದೊಡ್ಡ ಪೆಟ್ಟು ನೀಡಿದೆ. ಈ ಮಹಾಮಾರಿಯಿಂದಾಗಿ ಮುಂಬಯಿ ಮಹಾನಗರದಲ್ಲಿ ಬಹುತೇಕ ಹೋಟೆಲು, ರೆಸ್ಟೋರೆಂಟ್‍ಗಳ ಮಾಲೀಕರು, ಕಾರ್ಮಿಕರೂ ಸಂಕಷ್ಟದಲ್ಲಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಬೇಕು. ದುಬಾರಿ ವಿದ್ಯುತ್ ಶುಲ್ಕ, ಕಾರ್ಮಿಕರಿಗೆ ವೇತನ, ಆಹಾರ ಸಾಮಗ್ರಿಗಳ ದರ ಏರಿಕೆ ಸೇರಿದಂತೆ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಆದರೆ, ಲಾಭ ಮಾತ್ರ ಶೂನ್ಯ. ಹೀಗಿರುವಾಗ ನಷ್ಟ ಸರಿದೂಗಿಸುವುದಕ್ಕೆ, ಹೋಟೆಲುಗಳನ್ನು ಬೆಳಿಗ್ಗೆ 6.00 ಗಂಟೆಯಿಂದ ತಡರಾತ್ರಿ 12.00 ಗಂಟೆ ವರೆಗೆ ತೆರೆದರೆ ನಷ್ಟವನ್ನು ಸರಿದೂಗಿಸಬಹುದು ಮನವರಿಸಿದರು.

ಅಂತೆಯೇ ಕಳೆದ ಏಳೆಂಟು ತಿಂಗಳುಗಳಿಂದ ವಿದ್ಯುಚ್ಛಕ್ತಿ ಬಿಲ್‍ನ್ನು ಅಂದಾಜು ಮೊತ್ತವಾಗಿಸಿ ಕಳುಹಿಸುತ್ತಿದ್ದು ಇದನ್ನೂ ಸರಿಯಾದ ಮಾಪನದಲ್ಲೇ ಕೊಡಿಸುವಂತೆಯೂ ವಿದ್ಯುತ್ ಪೂರೈಕೆಯ ಅಧಿಕಾರಿಗಳಿಗೆ ಶರದ್ ಪವಾರ್ ತಕ್ಷಣವೇ ಮನವರಿಸಿತು. ನಿಯೋಗದಲ್ಲಿ ಮಹಾರಾಷ್ಟ್ರ ಫೆÉಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ , ಅನುಫ್ ಶೆಟ್ಟಿ, ಮಹಾರಾಷ್ಟ್ರ ರಾಷ್ಟ್ರವಾದಿ ಹೊಟೇಲ್ ಕಾಮಗಾರ್ ಯ್ಯೂನಿಯನ್ ಅಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

 

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here